More

    ಹುಬ್ಬಳ್ಳಿಯಲ್ಲಿ ಅಭಿನಂದನಾ ಸಮಾರಂಭ ಏ.6ರಂದು-ಎಸ್ಸಿ ಒಕ್ಕೂಟದ ಉಪಾಧ್ಯಕ್ಷ ಗಣೇಶ ಹೊರತಟ್ನಾಳ್ ಮಾಹಿತಿ

    ಕೊಪ್ಪಳ: ಒಳಮೀಸಲು ಜಾರಿಗೆ ರಾಜ್ಯ ಸರ್ಕಾರ, ಕೇಂದ್ರಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟದಿಂದ ಹುಬ್ಬಳ್ಳಿಯಲ್ಲಿ ಏ.6ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಗಣೇಶ ಹೊರತಟ್ನಾಳ್ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಳಮೀಸಲಾತಿ ಜಾರಿ ಮಾಡಬೇಕೆಂದು ದಶಕಗಳಿಂದ ಹೋರಾಟ ನಡೆಸಿದ್ದೆವು. ಆದರೆ, ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ವರದಿ ಜಾರಿಗೆ ಮುಂದಾಗಲಿಲ್ಲ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದಿಸಿ ಪಜಾ ಮೀಸಲನ್ನು ಶೇ. 15ರಿಂದ 17ಕ್ಕೆ ಹೆಚ್ಚಿಸಿದ್ದಾರೆ. ಮಾದಿಗರಿಗೆ ಶೇ.6, ಛಲವಾದಿಗಳಿಗೆ ಶೇ. 5.5, ಬಂಜಾರ, ಭೋವಿ, ಕೊರಮ, ಕೊರಚ ಇತರರಿಗೆ ಶೇ.4.5 ಹಾಗೂ ಸಣ್ಣಪುಟ್ಟ ಜಾತಿಗಳಿಗೆ ಶೇ.1ರಷ್ಟು ಒಳ ಮೀಸಲು ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

    ಇದೊಂದು ಐತಿಹಾಸಿಕ ನಿರ್ಣಯವಾಗಿದೆ. ಆದರೆ, ಕಾಂಗ್ರೆಸ್‌ನವರು ರಾಜಕೀಯ ದುರುದ್ದೇಶದಿಂದ ನಮ್ಮವರಿಗೆ ಇಲ್ಲಸಲ್ಲದ ವಿಚಾರಗಳನ್ನು ತುಂಬಿ ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಅವರಿಗೆ ಮನವರಿಕೆ ಮಾಡುವ ಕೆಲಸ ನಡೆದಿದೆ. ಬಹುತೇಕ ಹೋರಾಟಗಾರರು, ಸಮುದಾಯ ನಾಯಕರು ಸರ್ಕಾರದ ನಿರ್ಧಾರ ಸ್ವಾಗತಿಸಿದ್ದಾರೆ ಎಂದರು.

    ಸಮುದಾಯದ ನಾಯಕರ ಸನ್ಮಾನ

    ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಏ.6ರಂದು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು, ಕೇಂದ್ರ ಸಚಿವ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ನೇತೃತ್ವದಲ್ಲಿ ಸರ್ಕಾರ ಹಾಗೂ ಹೋರಾಟಗಾರರು, ಸಮುದಾಯದ ನಾಯಕರನ್ನು ಸನ್ಮಾನಿಸಲಾಗುವುದು. ಪಕ್ಷಾತೀತವಾಗಿ ಪಜಾ ಸಮುದಾಯಗಳ ಲಕ್ಷಾಂತರ ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕೊಪ್ಪಳ ಜಿಲ್ಲೆಯಿಂದ 10 ಸಾವಿರ ಜನರು ತೆರಳಲಿದ್ದೇವೆ ಎಂದರು. ಸಮುದಾಯ ನಾಯಕರಾದ ನಾಗಲಿಂಗ ಮಾಳೇಕೊಪ್ಪ, ದೇವರಾಜ ಕಿನ್ನಾಳ, ಚಂದ್ರು ಸ್ವಾಮಿ, ರಮೇಶ ಬೇಳೂರು, ಪ್ರಭುರಾಜ ಕಿಡದಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts