More

    50 ವರ್ಷ ಆಳಿದರೂ ಕಾಂಗ್ರೆಸ್ಸಿಗಿಲ್ಲ ಸ್ವಂತ ಕಚೇರಿ

    ಗಂಗಾವತಿ: ಇಂದಿರಾಗಾಂಧಿ ಕಾಲದಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕಚೇರಿಗಾಗಿ ಕಾರ್ಯಕರ್ತರು ಪರದಾಡುವ ಸ್ಥಿತಿ ಬಂದಿದ್ದು, ಬೆಂಬಲಿತ ಮುಖಂಡರ ಮನೆಗಳೇ ಪಕ್ಷದ ಕಚೇರಿಯಾಗಿದೆ !

    ಹೌದು, ಜನತಾದಳ ಮತ್ತು ಪಕ್ಷೇತರ ಅವಧಿ ಹೊರತುಪಡಿಸಿದರೆ 1950ರಿಂದ 2004ರವರೆಗೂ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಪತ್ಯವಿದ್ದು, ಸಿ.ಯಾದವ್‌ರಾವ್‌ರಿಂದ ಶ್ರೀರಂಗದೇವರಾಯಲುವರೆಗೂ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಎರಡು ಬಾರಿ ಜನತಾದಳ ಬಿಟ್ಟರೆ ಉಳಿದೆಲ್ಲ ಅವಧಿಯಲ್ಲಿ ಕಾಂಗ್ರೆಸ್ಸಿಗರೇ ಸಂಸದರು. ನಗರಸಭೆ, ತಾಪಂ, ಎಪಿಎಂಸಿ, ನಯೋಪ್ರಾ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್ ಹಿಡಿತದಲ್ಲಿದ್ದರೂ, ಪಕ್ಷದ ಕಾಯಂ ಕಚೇರಿಗೆ ಜಾಗವಿಲ್ಲ. ಸಾಮೂಹಿಕ ನಾಯಕತ್ವ ಜಪಿಸುವ ಮುಖಂಡರಿಗೆ ಪಕ್ಷಕ್ಕೆ ಸ್ವಂತ ಸೂರು ಒದಗಿಸುವ ಯೋಚನೆ ಇಂದಿಗೂ ಬಂದಿಲ್ಲ. ಮುಖಂಡರ ಮನೆಗಳೇ ಪಕ್ಷದ ಕಚೇರಿಗಳಾಗಿದ್ದು, ಮುಖಂಡರೂ ಊರಲ್ಲಿದ್ದಾಗ ಮಾತ್ರ ಕಚೇರಿ ಓಪನ್.

    ಕಚೇರಿ ಶಿಫ್ಟ್ : ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಡಿಸಿಸಿ ಅಧ್ಯಕ್ಷರಾಗಿದ್ದಾಗ ಸರೋಜಾನಗರದಲ್ಲಿದ್ದ ಕಾಂಗ್ರೆಸ್ ಕಚೇರಿ ಕಾರಣಾಂತರಗಳಿಂದ ಬಸ್‌ನಿಲ್ದಾಣದ ಹಿಂಭಾಗದ ಬಾಡಿಗೆ ಮನೆಗೆ ಶ್‌ಟಿ ಮಾಡಲಾಗಿತ್ತು. ನಂತರ ಆನೆಗೊಂದಿಯ ಮಾಜಿ ಸಚಿವ ಶ್ರೀರಂಗದೇವರಾಯಲು ನಿವಾಸಕ್ಕೆ ಸ್ಥಳಾಂತರಗೊಂಡಿತ್ತು. ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಜುಲಾಯಿನಗರದ ರೈಸ್ ಮಿಲ್ ಆವರಣಕ್ಕೆ ಶ್‌ಟಿ ಮಾಡಲಾಯಿತು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ಸಿಗೆ ಬರುತ್ತಿದ್ದಂತೆ ಅವರ ನಿವಾಸವೇ ಕಚೇರಿಯಾಯಿತು. ಪಕ್ಷದ ಮುಖಂಡರಲ್ಲಿ ಹೊಂದಾಣಿಕೆ ಕೊರತೆಯಿಂದ ಕಾರ್ಯಕರ್ತರು ಗೊಂದಲದಲ್ಲಿದ್ದು, ಕಚೇರಿಗೆ ಕಾಲಿಡದ ಪರಿಸ್ಥಿತಿ ಬಂದಿದೆ. ಸದ್ಯಕ್ಕೆ ಎರಡು ಕಚೇರಿ ಆರಂಭವಾಗಿವೆ. ಇದು ಪಕ್ಷ ಸಂಘಟನೆಗೆ ಹಿನ್ನಡೆಯಾಗಿದ್ದು, ಪರಿಸ್ಥಿತಿ ಬಗೆಹರಿಸುವಲ್ಲಿ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಅಸಹಾಯಕರಾಗಿದ್ದಾರೆ.

    ಕಾರ್ಯಕರ್ತರ ಅಳಲು: ಪಕ್ಷದಲ್ಲಿ ಮೂರು ಬಣಗಳಿದ್ದು, ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಇಕ್ಬಾಲ್ ಅನ್ಸಾರಿ ಮತ್ತು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಬೆಂಬಲಿಗರೂ ಒಂದೆಡೆ ಸೇರುವುದಕ್ಕೆ ಕಚೇರಿಯಿಲ್ಲದಂತಾಗಿದೆ. ಒಬ್ಬರೊಂದಿಗೆ ಗುರುತಿಸಿಕೊಂಡರೂ ಇನ್ನೊಬ್ಬರ ಕೆಂಗಣ್ಣಿಗೆ ಗುರಿಯಾಗಬೇಕಿದ್ದರಿಂದ ಕೆಲ ಕಾರ್ಯಕರ್ತರು ಪಕ್ಷದಿಂದ ದೂರ ಉಳಿದಿದ್ದಾರೆ. ಕೆಲವರು ವ್ಯಾಟ್ಸ್‌ಆ್ಯಪ್, ೇಸ್‌ಬುಕ್ ಮೂಲಕ ನಿಷ್ಠಾವಂತ ಕಾರ್ಯಕರ್ತರು ಅಳಲನ್ನು ತೋಡಿಕೊಂಡಿದ್ದು, ಕಾಮೆಂಟ್‌ಗೂ ಹಿಂದೆ ಮುಂದೆ ನೋಡುವ ಸ್ಥಿತಿ ಬಂದಿದೆ. ಕಚೇರಿ ಇಲ್ಲದಿದ್ದರಿಂದ ದಾರ್ಶನಿಕರ ಮತ್ತು ಪಕ್ಷದ ಮುಖಂಡರ ಜಯಂತಿ, ಪುಣ್ಯಸ್ಮರಣೆ ಆಚರಿಸುತ್ತಿಲ್ಲ. ಇದನ್ನೂ ಪ್ರಶ್ನಿಸುವ ಕಾರ್ಯಕರ್ತರನ್ನು ದೂರಿಡುವ ಮುಖಂಡರಿದ್ದಾರೆ ಎಂದು ಕೆಲ ಕಾರ್ಯಕರ್ತರು ಹೇಳುತ್ತಾರೆ.

    ರೋಸಿಹೋದ ಡಿಸಿಸಿ: ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಕನಕಗಿರಿ ಕ್ಷೇತ್ರ ನಿಭಾಯಿಸುವ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿಗೆ, ಗಂಗಾವತಿ ವಿಧಾನಸಭೆ ಕ್ಷೇತ್ರದ ಸ್ಥಿತಿಯಿಂದ ರೋಸಿಹೋಗಿದ್ದಾರೆ. ಮುಖಂಡರನ್ನು ಒಂದೇ ವೇದಿಕೆಗೆ ಕರೆತರಬೇಕೆನ್ನುವ ಅಸೆಗೂ ಕೆಲವರು ಅವಕಾಶ ನೀಡುತ್ತಿಲ್ಲ. ಯಾರನ್ನೂ ನಿರ್ಲಕ್ಷಿಸುವುಂತಿಲ್ಲ. ಮುಖಂಡರ ಅಹಂಕಾರ ಮನೋಭಾವವೇ ಸಾಮೂಹಿಕ ನಾಯಕತ್ವಕ್ಕೆ ಹಿನ್ನಡೆಯಾಗುತ್ತಿದ್ದು, ಕಾರ್ಯಕರ್ತರು ಅಸಹಾಯಕರಾಗಿದ್ದಾರೆ. ತಿರಂಗಾ ನಡಿಗೆ, ಸ್ವಾತಂತ್ರ್ಯೋತ್ಸವ ಆಚರಣೆಯಲ್ಲೂ ಸಾಮೂಹಿಕ ನಾಯಕತ್ವ ಕಾಣಲಿಲ್ಲ. ಕ್ಷೇತ್ರದ ಕಚೇರಿ ಸಮಸ್ಯೆ ಕೆಪಿಸಿಸಿ ಅಂಗಳಕ್ಕೆ ತಲುಪಿದ್ದು, ಬ್ಲಾಕ್ ಅಧ್ಯಕ್ಷ ಬದಲಾವಣೆಗೆ ವೇದಿಕೆ ಸಜ್ಜಾಗಿದೆ.

    ಸಹಜವಾಗಿ ಪಕ್ಷಕ್ಕೆ ಸ್ವಂತ ಕಚೇರಿಯಿಲ್ಲದಿದ್ದರಿಂದ ಮುಖಂಡರ ಮನೆಗಳೇ ಕಚೇರಿಗಳಾಗಿದ್ದು, ಪಕ್ಷಕ್ಕಾಗಿ ಸ್ವಂತ ಕಚೇರಿ ಹೊಂದಬೇಕೆನ್ನುವುದು ಕಾರ್ಯಕರ್ತರ ಅಭಿಪ್ರಾಯವಿದೆ. ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು.
    | ಎಚ್.ಆರ್.ಶ್ರೀನಾಥ ಮಾಜಿ ಎಂಎಲ್ಸಿ

    ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ಪಕ್ಷದ ಕಚೇರಿಯಿದ್ದು, ಪ್ರತ್ಯೇಕ ಕಚೇರಿ ಮಾಡುವ ಬಗ್ಗೆ ಯಾವುದೇ ಯೋಚನೆಯಿಲ್ಲ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಪ್ರತ್ಯೇಕ ಕಚೇರಿ ಬೇಕಿದ್ದು, ಕಾರ್ಯಕರ್ತರಿಗಲ್ಲ.
    | ಶಾಮಿದ್ ಮನಿಯಾರ್ ನಗರ ಬ್ಲಾಕ್ ಅಧ್ಯಕ್ಷ ಗಂಗಾವತಿ

    ಪಕ್ಷಕ್ಕಾಗಿ ಸ್ವಂತ ಕಚೇರಿಯಿಲ್ಲದಿದ್ದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ತೊಂದರೆಯಾಗಿದೆ. ದಾರ್ಶನಿಕರ ಸೇರಿ ಪಕ್ಷಕ್ಕಾಗಿ ದುಡಿದು ಮಡಿದವರ ಜಯಂತಿ, ಪುಣ್ಯಸ್ಮರಣೆ ಆಚರಣೆಯೂ ಪಕ್ಷದಿಂದಾಗುತ್ತಿಲ್ಲ.
    | ಅಜಗರ್ ಅಲಿ ನಿಷ್ಠಾವಂತ ಕಾರ್ಯಕರ್ತ ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts