More

    ಫಲಿತಾಂಶದ ಕುತೂಹಲಕ್ಕೆ ತೆರೆ ನಾಳೆ

    ಜಿಲ್ಲೆಯ ಐದು ನಗರ, ಸ್ಥಳೀಯ ಸಂಸ್ಥೆಗಳ ಮತ ಎಣಿಕೆ | ಕೌಂಟಿಂಗ್ ಟೇಬಲ್‌ಗಳು ಸಿದ್ಧ

    ಕೊಪ್ಪಳ: ಜಿಲ್ಲೆಯ ಐದು ನಗರ, ಸ್ಥಳೀಯ ಸಂಸ್ಥೆಗಳ ಫಲಿತಾಂಶ ಡಿ.30ರಂದು ಪ್ರಕಟವಾಗಲಿದ್ದು, ಈ ಕುರಿತ ಕುತೂಹಲಗಳಿಗೆ ತೆರೆ ಬೀಳಲಿದೆ.
    ಕಾರಟಗಿ ಪುರಸಭೆ, ಕನಕಗಿರಿ, ತಾವರಗೇರಾ, ಭಾಗ್ಯನಗರ ಹಾಗೂ ಕುಕನೂರು ಪಟ್ಟಣ ಪಂಚಾಯಿತಿಗಳಿಗೆ ಡಿ.27ರಂದು ಮತದಾನ ನಡೆದಿತ್ತು. ಒಟ್ಟು 96 ವಾರ್ಡ್‌ಗಳ ಪೈಕಿ ಕಾರಟಗಿಯಲ್ಲಿ 1, ಭಾಗ್ಯನಗರ 2 ಹಾಗೂ ತಾವರಗೇರಾದಲ್ಲಿ 3 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಬಾಕಿ 90 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಗುರುವಾರ ಬಹಿರಂಗಗೊಳ್ಳಲಿದೆ.

    ಕಾರಟಗಿ ಕರ್ನಾಟಕ ಪಬ್ಲಿಕ್ ಶಾಲೆ, ಕನಕಗಿರಿ ಸರ್ಕಾರಿ ಪಿಯು ಕಾಲೇಜು, ಭಾಗ್ಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕುಕನೂರಿನಲ್ಲಿ ವಿದ್ಯಾನಂದ ಗುರುಕುಲದಲ್ಲಿ ಮತ ಎಣಿಕೆ ನಡೆಯಲಿದ್ದು, ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಎಣಿಕೆ ಎಣಿಕೆ ವೇಳೆ ಕರೊನಾ ಮಾರ್ಗಸೂಚಿ ಅನುಸರಿಸಲು ಕ್ರಮಕೈಗೊಳ್ಳಲಾಗಿದೆ.

    ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರಲ್ಲಿ ಢವ ಢವ ಶುರುವಾಗಿದೆ. ಸಾರ್ವಜನಿಕರಲ್ಲೂ ಕುತೂಹಲ ಮನೆ ಮಾಡಿದೆ. ಮತದಾನ ಮುಗಿದಾಗಿನಿಂದಲೂ ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆದಿವೆ. ಕೆಲವು ಅಭ್ಯರ್ಥಿಗಳು ದೇವರ ಮೊರೆ ಹೋಗಿದ್ದು, ಗೆಲುವು ಸಿಗಲೆಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಪಕ್ಷದ ಮುಖಂಡರೊಡನೆ ಕುಳಿತು, ಮತದಾರರ ಪಟ್ಟಿ ಹಿಡಿದು ತಮಗೆ ಬರಬಹುದಾದ ಮತಗಳ ಲೆಕ್ಕ ಹಾಕುತ್ತಿದ್ದಾರೆ. ತಮ್ಮ ಹಾಗೂ ಎದುರಾಳಿಗಳ ಪ್ಲಸ್, ಮೈನಸ್ ಅಂಶಗಳನ್ನು ತಾಳೆ ಹಾಕಿ ಭವಿಷ್ಯ ಬರೆದುಕೊಂಡಿದ್ದಾರೆ. ರಾಜಕೀಯ ಲೆಕ್ಕಾಚಾರಗಳೇನೇ ಇದ್ದರೂ ಮತದಾರನ ಮನದಾಳ ಮಾತ್ರ ಫಲಿತಾಂಶದಲ್ಲಿ ನಿಚ್ಚಳವಾಗಲಿದೆ. ಅದಕ್ಕೆ ಘಳಿಗೆ ಕೂಡಿಬಂದಿದ್ದು, ವರ್ಷಾಂತ್ಯದ ಚುನಾವಣೆ ಕೆಲವರಿಗೆ ಸಿಹಿ ನೀಡಿದರೆ, ಇನ್ನೂ ಕೆಲವರಿಗೆ ಕಹಿ ಅನುಭವ ನೀಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts