More

    ಆರ್ಥಿಕ ಪರಿಹಾರ, ಆಹಾರದ ಕಿಟ್ ವಿತರಿಸುವಂತೆ ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್‌ಗೆ ಬಿಸಿಯೂಟ ನೌಕರರ ಮನವಿ

    ಕೊಪ್ಪಳ: ಆರ್ಥಿಕ ಪರಿಹಾರ ಹಾಗೂ ಆಹಾರದ ಕಿಟ್ ವಿತರಿಸಬೇಕೆಂದು ಒತ್ತಾಯಿಸಿ ಬಿಸಿಯೂಟ ನೌಕರರ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಡಿಸಿ ಎಸ್.ವಿಕಾಸ್ ಕಿಶೋರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಕರೊನಾದಿಂದ ಬಡವರು, ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಅಂಥವರ ನೆರವಿಗೆ ಧಾವಿಸಿರುವ ಸರ್ಕಾರ ಹಲವು ವರ್ಗಗಳಿಗೆ ಆರ್ಥಿಕ ನೆರವು ಘೋಷಿಸಿದೆ. ಆದರೆ, ಶಾಲೆಗಳು ಬಂದ್ ಆಗಿದ್ದು, ಬಿಸಿಯೂಟ ಕೆಲಸದಿಂದ ಬದುಕು ಕಂಡುಕೊಂಡಿದ್ದ ನಮಗೆ ಲಾಕ್‌ಡೌನ್ ಹೊಟ್ಟೆಮೇಲೆ ತಣ್ಣೀರಿನ ಬಟ್ಟೆ ಹಾಕಿದೆ. ನಮ್ಮನ್ನು ಪ್ಯಾಕೇಜ್‌ನಿಂದ ಕೈ ಬಿಟ್ಟಿದ್ದು ಸಮಂಜಸವಲ್ಲ ಎಂದು ಅಳಲು ತೋಡಿಕೊಂಡರು.

    ನಮಗೂ 10 ಸಾವಿರ ರೂ. ಪರಿಹಾರ ಹಾಗೂ ದಿನಸಿ ಕಿಟ್ ವಿತರಿಸಬೇಕು. ಬಾಕಿ ವೇತನ ಪಾವತಿ ಜತೆಗೆ ಕರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಬೇಕು. ವೇತನವನ್ನು 18 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಸಂಚಾಲಕರಾದ ಬಸವರಾಜ ಶೀಲವಂತರ್, ಪುಷ್ಪಾ ಮೇಸ್ತ್ರಿ, ಬಾಳಮ್ಮ ಕಟ್ಟಿಮನಿ, ಸುಮಂಗಲಾ ಕೊತಬಾಳ, ಶಿವಮ್ಮ ಹಡಪದ, ಮರ್ದಾನಬೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts