More

    ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಒತ್ತಾಯಿಸಿದ ಸಿಪಿಐಎಂ ತಾಲೂಕು ಸಮಿತಿ ಪದಾಧಿಕಾರಿಗಳು

    ಕೊಪ್ಪಳ: ಪೆಟ್ರೋಲ್, ಡಿಸೇಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಐಎಂ ತಾಲೂಕು ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2014 ಅಧಿಕಾರಕ್ಕೆ ಬಂದಾಗ 1ಲೀ.ಪೆಟ್ರೋಲ್ ಬೆಲೆ 72ರೂ. ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 1ಬ್ಯಾರೆಲ್‌ಗೆ 110 ಡಾಲರ್ ಇತ್ತು. ಸದ್ಯ 56 ಡಾಲರ್‌ಗೆ ಇಳಿದರೂ ಪೆಟ್ರೋಲ್ ಬೆಲೆ 90ರೂ. ಗಡಿ ದಾಟಿದೆ. ಬೆಲೆ ಏರಿಸಿದಂತೆ ಇಳಿಕೆಯನ್ನೂ ಮಾಡಬೇಕು. ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಇದೇ ರೀತಿ ದರ ಏರಿಕೆ ಮುಂದುವರಿದರೆ ಸಾಮಾನ್ಯರು ಬದುಕುವುದು ಕಷ್ಟವಾಗುತ್ತದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಪೆಟ್ರೋಲ್, ಡಿಸೇಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಕೂಡಲೇ ಇಳಿಸಬೇಕು. ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ಕೃಷಿ ಕೂಲಿಕಾರರು, ಕಾರ್ಮಿಕರು, ಬಡವರಿಗೆ ಅನುಕೂಲವಾಗುವ ಕಾನೂನು ಜಾರಿ ಮಾಡಬೇಕು. ಇಲ್ಲದಿದ್ದಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಸಂಚಾಲಕರಾದ ಹುಸೇನ್ ಸಾಬ್ ನದಾಫ್, ಹುಲಗಪ್ಪ ಗೋಕಾವಿ, ರಾಮಣ್ಣ ದೊಡ್ಡಮನಿ, ಶಶಿಕಲಾ ಇಟಗಿ, ನೇತ್ರಾವತಿ ಹಸನ್ ಸಾಬ್ ಕರಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts