More

    ಇ-ಕಲ್ಯಾಣಿಯಲ್ಲಿ ನೋಂದಣಿ ಕಡ್ಡಾಯ: ಡಿಎಚ್‌ಒ ಅಲಕಾನಂದ ಮಳಗಿ ಸೂಚನೆ; ಪಿಸಿ, ಪಿಎನ್‌ಡಿಟಿ ಸಲಹಾ ಸಮಿತಿ ಸಭೆ

    ಕೊಪ್ಪಳ: ವೈದ್ಯಕೀಯ ಕಾರಣಗಳಿಂದಾಗುವ ಗರ್ಭಪಾತ ನಿರ್ವಹಿಸುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳು ಇ-ಕಲ್ಯಾಣಿ ಸಾಫ್ಟ್‌ವೇರ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಡಿಎಚ್‌ಒ ಡಾ.ಅಲಕಾನಂದ ಮಳಗಿ ಹೇಳಿದರು.

    ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆ ಮತ್ತು ಎಂ.ಟಿ.ಪಿ. ಕಾಯ್ದೆಯಡಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನಿಯಮಾನುಸಾರ ಸ್ಕಾೃನಿಂಗ್ ಸೆಂಟರ್‌ಗಳು ನೋಂದಣಿ ಮಾಡಿಕೊಂಡು ಮಾರ್ಗಸೂಚಿ ಪಾಲಿಸಬೇಕು. ವೈದ್ಯಕೀಯ ಕಾಣಗಳಿಂದಾಗುವ (ಎಂಟಿಪಿ)ಬಗ್ಗೆಯೂ ನಿಗದಿತ ನಮೂನೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸರ್ಕಾರದ ಇ-ಕಲ್ಯಾಣಿ ಸಾಫ್ಟ್‌ವೇರ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಶೀಘ್ರವೇ ಈ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು. ನೋಂದಣಿ ಮಾಡದ ಹಾಗೂ ನಿಗದಿತ ನಿಯಮ ಪಾಲನೆ ಹಾಗೂ ದಾಖಲೆಗಳನ್ನು ನಿರ್ವಹಿಸದ ಆರೋಗ್ಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕುರಿತ ಅಪರಾಧಕ್ಕಿರುವ ಶಿಕ್ಷೆ ಹಾಗೂ ಕಾನೂನುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.

    ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಮಾತನಾಡಿ, ಪಿ.ಸಿ., ಪಿ.ಎನ್.ಡಿ.ಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕುರಿತು ಜಾಹೀರಾತು ನೀಡುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಸಹಿತ 10 ಸಾವಿರ ರೂ. ದಂಡ ವಿಧಿಸಲಾಗುವುದು. ಆರೋಪ ಸಾಬೀತಾದಲ್ಲಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ಅವರ ಹೆಸರನ್ನು ತೆಗೆದು ಹಾಕಿ, ಆಜೀವ ನಿಷೇಧ ಹೇರಲಾಗುವುದು ಎಂದರು. ಸ್ತ್ರೀ ರೋಗ ತಜ್ಞ ಡಾ.ಸಿ.ಎಂ.ಹಿರೇಮಠ, ಮಕ್ಕಳ ತಜ್ಞ ಡಾ.ಗಿರೀಶ್, ವಕೀಲ ಆಸಿಫ್ ಅಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts