More

    2.26 ಲಕ್ಷ ರೂ. ವಶ , 21 ಪ್ರಕರಣ ದಾಖಲು

    ಕೊಪ್ಪಳ: ದೀಪಾವಳಿ ಅಂಗವಾಗಿ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಜೂಜಾಟ ಹೆಚ್ಚಿದ್ದು, ಎರಡು ದಿನದಲ್ಲಿ 21 ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

    ಭಾನುವಾರ ಮತ್ತು ಸೋಮವಾರ ವಿವಿಧೆಡೆ ದಾಳಿ ಮಾಡಿದ್ದು, 21 ಪ್ರಕರಣ ದಾಖಲಿಸಲಾಗಿದೆ. ಯಲಬುರ್ಗಾ ತಾಲೂಕಿನ ವಣಗೇರಿ ಕುಕನೂರು ತಾಲೂಕಿನ ಲಕಮಾಪುರ, ಕೊಪ್ಪಳದ ಪದಕಿ ಲೇಔಟ್, ಹಾಲವರ್ತಿ, ಕಿನ್ನಾಳ, ಕುಷ್ಟಗಿ ತಾಲೂಕಿನ ಮಾಲಗಿತ್ತಿ, ಹೂಲಗೇರಿ, ಬಚನಾಳ, ಶಾಖಾಪುರ, ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್, ಗಂಗಾವತಿ ನಗರದ ಎಪಿಎಂಸಿ ಎರಡನೇ ಗೇಟ್, ಆಚಿಜನೇಯ ದೇವಸ್ಥಾನ ಸೇರಿ ವಿವಿಧೆಡೆ ಪೊಲೀಸ್ ತಂಡಗಳು ದಾಳಿ ನಡೆಸಿವೆ.

    ಜೂಜಾಟದಲ್ಲಿ ತೊಡಗಿದ್ದ 143 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2,26,160ರೂ. ನಗದು ವಶಕ್ಕೆ ಪಡೆಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts