More

    ಪೊಲೀಸ್ ಆಗುವ ಕನಸು ಕಂಡಿದ್ದ ಈತ ಆಗಿದ್ದು ಮಾತ್ರ ಖತರ್ನಾಕ್​ ಸುಲಿಗೆಕೋರ!

    ಬೆಂಗಳೂರು: ಆತ ಪೊಲೀಸ್​ ಆಗುವ ಕನಸು ಕಂಡಿದ್ದ. ಪೊಲೀಸ್​ ಕಾನ್ಸ್​ಟೇಬಲ್ ಪರೀಕ್ಷೆಯು ಸಹ ಬರೆದಿದ್ದ. ತಾನೂ ಪೊಲೀಸ್ ಎಂದು ಪಾಲಕರನ್ನು ನಂಬಿಸಿ, ಅವರನ್ನು ಖುಷಿಪಡಿಸಿದ್ದ.​ ಸಾಲದಕ್ಕೆ ಪೊಲೀಸ್​ ಸಮವಸ್ತ್ರ ಧರಿಸಿ ಪೊಲೀಸ್​ ಎಂದೇ ಓಡಾಡಿಕೊಂಡಿದ್ದ. ಆದರೆ, ಆತ ಮಾಡುತ್ತಿದ್ದದ್ದು ಮಾತ್ರ ಅಕ್ಷರಶಃ ಸುಲಿಗೆ. ಇದೀಗ ನಕಲಿ ಪೊಲೀಸ್ ಬಣ್ಣ ಬಯಲಾಗಿ ನಿಜವಾದ ಪೊಲೀಸ್​​ ಅತಿಥಿಯಾಗಿದ್ದಾನೆ.

    ಹೌದು. ಕೊಪ್ಪಳ ಮೂಲದ ಫಕೀರಪ್ಪನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಆಗಿ ಸಮಾಜಸೇವೆ ಮಾಡಲಿ ಎಂದು ಪಾಲಕರು ಕನಸು ಕಂಡಿದ್ದರು. ಆದರೆ, ಪರೀಕ್ಷೆ ಬರೆಯುತ್ತಿದ್ದ ಫಕೀರಪ್ಪ, ತಾನೂ ಅನುತ್ತೀರ್ಣ ಎಂದು ಮನೆಯಲ್ಲಿ ಹೇಳಿಕೊಳ್ಳಲು ಮಜುಗರ ಪಡುತ್ತಿದ್ದ. ಅಲ್ಲದೆ, ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕಾನ್​ಸ್ಟೇಬಲ್​ ಆಗಿದ್ದೀನಿ ಎಂದು ಸುಳ್ಳು ಹೇಳಿ ನಂಬಿಸಿದ್ದ.

    ಇದನ್ನೂ ಓದಿರಿ: ಮದುವೆಗೆ ಬಟ್ಟೆ ಖರೀದಿಸಲು ತೆರಳಿದ ವಧುವನ್ನು ಮಾರ್ಗ ಮಧ್ಯೆಯೇ ಹೊತ್ತೊಯ್ದ ಜವರಾಯ!

    ಹಲವು ದಿನಗಳಿಂದ ಪೊಲೀಸ್ ಡ್ರೆಸ್ ಧರಿಸಿ ಪಲ್ಸರ್ ಬೈಕ್​ನಲ್ಲಿ ನಗರದಲ್ಲಿ ಓಡಾಡ್ತಿದ್ದ. ಬಾಡಿಗೆ ಮನೆ ಮಾಲೀಕನಿಗೂ ಪೊಲೀಸ್ ಎಂದು ನಂಬಿಸಿದ್ದ. ಆದರೆ, ಆತ ಜೀವನ ನಿರ್ವಹಣೆಗಾಗಿ ಅಡ್ಡದಾರಿ ಹಿಡಿದಿದ್ದ. ಪಿಜಿ, ಸಣ್ಣ ವ್ಯಾಪಾರಸ್ಥರು ಹಾಗೂ ಅಮಾಯಕರನ್ನು ಗುರ್ತಿಸುತ್ತಿದ್ದ. ಬಳಿಕ ಪೊಲೀಸ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ.

    ಇದರ ನಡುವೆ ಟಿ.ದಾಸರಹಳ್ಳಿ ನಿವಾಸಿ ಸುರೇಶ್ ಎಂಬುವರು ದಾಖಲಿಸಿದ ದೂರಿನಿಂದಾಗಿ ಫಕೀರಪ್ಪ ನಕಲಿ ಪೊಲೀಸ್​ ಎಂಬ ಪ್ರಕರಣ ಬೆಳಕಿಗೆ ಬಂದಿದೆ. ದೂರುದಾರ ಸುರೇಶ್​, ಜಾಲಹಳ್ಳಿ ಕ್ರಾಸ್ ಬಳಿ ಪುರುಷರ ಪಿಜಿ ನಡೆಸಿಕೊಂಡಿದ್ದ. ಜನವರಿ 26 ರಂದು ಸುರೇಶ್​ನನ್ನು ಬೆದರಿಸಿ ಫಕೀರಪ್ಪ 10 ಸಾವಿರ ಹಣ ಕಸಿದು ಪರಾರಿಯಾಗಿದ್ದ.

    ಇದನ್ನೂ ಓದಿರಿ: ಪ್ರೇಯಸಿ ಶವ ತಂದು ರಸ್ತೆಬದಿ ಎಸೆದ ಪ್ರಕರಣ: ಜ.26ರ ರಾತ್ರಿ ಹೋಟೆಲ್​ ರೂಮ್ ಘಟನೆ ಬಿಚ್ಚಿಟ್ಟ ಪ್ರಿಯಕರ!​

    ಇದೀಗ ಆರೋಪಿಯನ್ನು ಬಂಧಿಸಿದ ಬಾಗಲಕುಂಟೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ. ಫಕೀರಪ್ಪ ಪೊಲೀಸ್​ ಅಲ್ಲ ನಕಲಿ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​​)

    ‘ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ’ ಅಂತ ವಾಟ್ಸ್ಯಾಪ್ ಮೆಸೇಜ್ ಮಾಡಿ ನೇಣಿಗೆ ಶರಣಾದ ಡಿಸಿಸಿ ಬ್ಯಾಂಕ್ ನಿರ್ದೇಶಕನ ಪತ್ನಿ!

    ಸದನದಲ್ಲಿ ಮೊಬೈಲ್ ಫೋನ್ ಬಳಕೆಗೆ ಸದ್ಯದಲ್ಲೇ ಬೀಳಲಿದೆ ಬ್ರೇಕ್!

    ಕಳ್ಳನೆಂದುಕೊಂಡು ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿಹಾಕಿ ಬಡಿದ ಜನರು!; ಆತನ ಜತೆಗಿದ್ದ ನಾಲ್ವರು ಪರಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts