More

    ಟಿಪ್ಪು ಸುಲ್ತಾನ್ ಅಭಿವೃದ್ಧಿ ಪರ ಚಿಂತಕ; ಶಾಸಕ ರಾಘವೇಂದ್ರ ಹಿಟ್ನಾಳ್ ಅಭಿಪ್ರಾಯ ಬಹದ್ದೂರ ಬಂಡಿ ಗ್ರಾಮದಲ್ಲಿ ಜಯಂತಿ ಕಾರ್ಯಕ್ರಮ

    ಕೊಪ್ಪಳ: ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಕ್ಕಳನ್ನೇ ಒತ್ತೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಅಭಿವೃದ್ಧಿಪರ ಚಿಂತನೆಗಳನ್ನು ಹೊಂದಿದ್ದರು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅಭಿಪ್ರಾಯಪಟ್ಟರು.

    ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂದಿನ ಕಾಲಕ್ಕೆ ಟಿಪ್ಪು ಸುಲ್ತಾನ್ ತಂತ್ರಜ್ಞಾನ ಬಳಕೆ ಮಾಡಿದ್ದರು. ರಾಕೆಟ್, ರೇಷ್ಮೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದರು. ಟಿಪ್ಪುರಂತೆ ಅಭಿವೃದ್ಧಿ ಚಿಂತನೆ ಹೊಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಅಧಿಕಾರಾವಧಿಯಲ್ಲಿ ಅನೇಕ ಭಾಗ್ಯಗಳನ್ನು ನೀಡಿದ್ದಾರೆ ಎಂದರು.

    ದೇಶ ಪ್ರಸ್ತುತ ದುರಾಡಳಿತಕ್ಕೆ ತುತ್ತಾಗಿದೆ. ಜಿಡಿಪಿ ಗಣನೀಯವಾಗಿ ಕುಸಿದಿದೆ. ಇಂಧನ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆಯಿಂದ ಅಭಿವೃದ್ಧಿ ಕೆಲಸವಾಗಲಿವೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಪಡಿತರ ಹಂಚಿಕೆಗೂ ನೂರಾರು ಕಾನೂನು ತರಲಾಗಿದೆ. ನಗರಕ್ಕೆ ಹೊಂದಿಕೊಂಡಿರುವ ಬಹದ್ದೂರ ಬಂಡಿ ಗ್ರಾಮವನ್ನು ಕೊಪ್ಪಳ ನಗರಸಭೆ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದರು. ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಮುಖಂಡರಾದ ಚಾಂದ್ ಪಾಷಾ ಕಿಲ್ಲೇದಾರ್, ನಿಂಗಜ್ಜ ಶಹಪುರ, ಗಾಳೆಪ್ಪ ಮೆಳ್ಳಿಕೇರಿ, ರಫಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts