More

    ಸ್ವಾಮಿತ್ವ ಯೋಜನೆಗೆ ನಿಯೋಜಿಸದಿರಿ: ಪರವಾನಗಿ ಭೂ ಮಾಪಕರ ಸಂಘ ಒತ್ತಾಯ; ಕೂಡ್ಲಿಗಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಅರುಂಧತಿ ನಾಗಾವಿಗೆ ಮನವಿ

    ಕೂಡ್ಲಿಗಿ: ಸ್ವಾಮಿತ್ವ ಯೋಜನೆ ಕಾರ್ಯಕ್ಕೆ ನಿಯೋಜಿಸದಂತೆ ಒತ್ತಾಯಿಸಿ ಸರ್ಕಾರದ ಪರವಾನಗಿ ಪಡೆದ ಭೂಮಾಪಕರ ಸಂಘ ಸೋಮವಾರ ಗ್ರೇಡ್ 2 ತಹಸೀಲ್ದಾರ್ ಅರುಂಧತಿ ನಾಗಾವಿಗೆ ಮನವಿ ಸಲ್ಲಿಸಿತು.

    ಸಂಘದ ತಾಲೂಕು ಅಧ್ಯಕ್ಷ ಬಿ.ಮಹಾಲಿಂಗಪ್ಪ ಮಾತನಾಡಿ, 18ಎ ಮತ್ತು 46ರ ನಿಯಮದಂತೆ ಪರವಾನಗಿ ಭೂಮಾಪಕರ ಕೆಲಸ ಕೇವಲ ನೋಂದಣಿ ಪೂರ್ವ ಮತ್ತು ತತ್ಕಾಲ್ ಪೋಡಿ ನಕ್ಷೆಗಳನ್ನು ತಯಾರಿಸಿಕೊಡುವುದಾಗಿದೆ. ಆದರೆ, 94ಸಿ ಮತ್ತು 94ಸಿಸಿ, ಕೆರೆ ಅಳತೆ, ವಕ್ಫ್ ಬೋರ್ಡ್ ಅಳತೆ ಮತ್ತು ಸಂಡೂರಿನ ಇನಾಂ ಗ್ರಾಮಗಳ ಸರ್ವೇಗೆ ನಿಯೋಜಿಸಿಕೊಂಡು ಈವರೆಗೆ ಯಾವುದೇ ಸಂಭಾವನೆ ನೀಡಿಲ್ಲ. ಇದೀಗ ಸ್ವಾಮಿತ್ವ ಯೋಜನೆ ಕಾರ್ಯಕ್ಕೆ ನಿಯೋಜಿಸಿದ್ದು ಖಂಡನೀಯ. ಅಲ್ಲದೆ ತರಬೇತಿ, ಅಗತ್ಯ ಸಲಕರಣೆ, ಸಿಬ್ಬಂದಿಯನ್ನು ಕೊಡದೆ ಸರ್ವೇಗೆ ನಿಯೋಜಿಸಲಾಗಿದೆ ಎಂದು ದೂರಿದರು. ಭೂಮಾಪಕರಿಗೆ ಸೇವಾ ಭದ್ರತೆ ಹಾಗೂ ಗೌರವಧನದ ಬಗ್ಗೆ ಸೂಕ್ತ ಸ್ಪಂದನೆ ನೀಡುವವರೆಗೆ ಸ್ವಾಮಿತ್ವ ಯೋಜನೆಗೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.

    ಸಂಘದ ಕಾರ್ಯದರ್ಶಿ ಕೆ.ಮಂಜಣ್ಣ, ಪದಾಧಿಕಾರಿಗಳಾದ ಬಸವರಾಜ ನಾಯ್ಕ, ಯು.ದುರುಗಪ್ಪ, ಶಂಭುಲಿಂಗ ಸ್ವಾಮಿ, ಆನಂದ್, ಕೆ.ನಾಗರಾಜ್, ಎನ್.ಕೆ.ಶರಣಪ್ಪ ಎ.ಕೆ.ನಾಗರಾಜ್, ಎಚ್.ಎಸ್.ಚಂದ್ರಶೇಖರ್, ಆನಂದ್, ತಿಪ್ಪೇಸ್ವಾಮಿ, ಪ್ರಕಾಶ, ರಾಮಚಂದ್ರ, ಕೆ.ಕೆಂಚಲಿಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts