More

    ಅತಿಥಿ ಶಿಕ್ಷಕರ ನೇಮಕ ಮಾಡಿ; ಬಿಇಒ ಯುವರಾಜ ನಾಯಕಗೆ ಸರ್ಕಾರಿ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಒತ್ತಾಯ

    ಕೂಡ್ಲಿಗಿ: ಪಟ್ಟಣದ ಹೊರವಲಯದ ಸರ್ಕಾರಿ ಆದರ್ಶ ವಿದ್ಯಾಲಯ ಪ್ರಾಥಮಿಕ ವಿಭಾಗಕ್ಕೆ ಒಬ್ಬ ಅತಿಥಿ ಶಿಕ್ಷಕರನ್ನು ನೇಮಿಸುವಂತೆ ಎಸ್‌ಡಿಎಂಸಿ ಮತ್ತು ಮುಖ್ಯ ಶಿಕ್ಷಕರು ಒತ್ತಾಯಿಸಿದ್ದಾರೆ.

    ಬಿಇಒ ಯುವರಾಜ ನಾಯಕಗೆ ಶುಕ್ರವಾರ ಮನವಿ ಸಲ್ಲಿಸಿದರು. ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 6ರಿಂದ 10ನೇ ತರಗತಿ ವರೆಗೂ 355 ವಿಧ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಎರಡು ಕನ್ನಡ ಭಾಷೆ ಶಿಕ್ಷಕರಲ್ಲಿ ಒಬ್ಬ ಶಿಕ್ಷಕ ಹೆಚ್ಚುವರಿಯಾಗಿ ಮುಖ್ಯ ಶಿಕ್ಷಕರಾಗಿ ಪ್ರಭಾರಿ ಹುದ್ದೆ ಜತೆಗೆ ಭೋಧನೆ ಮಾಡಬೇಕು. ಕಚೇರಿಯ ಕೆಲಸ ಒತ್ತಡದ ಜತೆಗೆ ಭೋದನೆ ಮಾಡಲು ಸಾಧ್ಯವಾಗುತ್ತಿಲ್ಲ, ಇನ್ನೊಬ್ಬ ಕನ್ನಡ ಶಿಕ್ಷಕಿ ಹೆರಿಗೆ ರಜೆ ಮೇಲೆ ಇದ್ದಾರೆ. ಹೀಗಾಗಿ ಪಾಠ ನಡೆಸಲು ಅನನುಕೂಲವಾಗಿದೆ. ವಿಧ್ಯಾರ್ಥಿಗಳ ಹಾಜರಾತಿ ಶೇ.100 ಇದೆ. ಇದರಿಂದ ವಿಧ್ಯಾರ್ಥಿಗಳ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಅಲ್ಲದೇ ಪ್ರಾಥಮಿಕ ವಿಭಾಗಕ್ಕಾದರೂ ಈ ವರ್ಷದ ಮಟ್ಟಿಗೆ ಒಬ್ಬ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts