More

    ಕುರುಡು ಆಚರಣೆ ವಿರುದ್ಧ ಚಳವಳಿ ಅಗತ್ಯ ಎಂದ ತಹಸೀಲ್ದಾರ್ ಟಿ.ಜಗದೀಶ್

    ಕೂಡ್ಲಿಗಿ: ಸುಧಾರಣೆ ಚಳಚಳಿ ಮೂಲಕ ಸಮಾಜದಲ್ಲಿನ ಕುರುಡು ಆಚರಣೆಗಳಿಗೆ ಚಿಕಿತ್ಸೆ ನೀಡಿದ ಕೀರ್ತಿ ಬ್ರಹ್ಮಶ್ರೀ ನಾರಾಯಣ ಗುರುವಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ್ ಟಿ.ಜಗದೀಶ್ ಹೇಳಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಈಡಿಗ ಸಮಾಜ, ತಾಲೂಕು ಆಡಳಿತ ಏರ್ಪಡಿಸಿದ್ದ ಬ್ರಹ್ಮಶ್ರಿ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತಾನಾಡಿದರು.

    ಜನರು ಶೋಷಣೆಗಳಿಂದ ಮುಕ್ತರಾಗಲು, ಜೀವನ ಸುಧಾರಿಸಲು ಸಂಘರ್ಷದ ಹಾದಿ ಬದಲು ಸುಧಾರಣೆ ಚಳವಳಿ ಆಯ್ದುಕೊಂಡರು. ತಾರತಮ್ಯ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಕುರುಡು ಆಚರಣೆಗಳು, ಅನಕ್ಷರತೆ ವಿರುದ್ಧ ಸತತ ನಾಲ್ಕು ದಶಕಗಳ ಸುಧಾರಣೆ ಚಳಚಳಿ ನಡೆಸಿದರು. ಶಂಕರಾಚಾರ್ಯರ ದರ್ಶನದಿಂದ ಪ್ರಭಾವಿತರಾದ್ದ ಅವರು, ಸಂಸ್ಕೃತ, ತಮಿಳು ಮತ್ತು ಮಲಯಾಳಂನಲ್ಲಿ ಅಗಾಧ ಪಾಂಡಿತ್ಯ ಸಂಪಾದಿಸಿದ್ದವರು. ಸಮಾಜ ಸುಧಾರಣೆ ಜತೆಗೆ ಹತ್ತಾರು ಕೃತಿಗಳನ್ನು ರಚಿಸಿದರು. ಅದ್ವೈತ ತತ್ವವನ್ನು ಒಪ್ಪಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅವರು, ಪ್ರಗತಿಪರ ಧೋರಣೆಯೊಂದಿಗೆ ದೇವಾಲಯಗಳನ್ನು ಸ್ಥಾಪಿಸಿದರು ಮತ್ತು ಅವು ಮನುಷ್ಯನ ವ್ಯಕ್ತಿತ್ವ ವಿಕಸನ ಹಾಗೂ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಬೇಕೆಂದು ಬಯಸಿದ್ದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ಎಲ್ಲ ವರ್ಗದ ಜನರಿಗೂ ಶಾಸ್ತ್ರ, ಅರ್ಚನಾ ವಿಧಿಗಳನ್ನು ಕಲಿಯುವ ಅವಕಾಶ ಕಲ್ಪಿಸಿದ ಮಹಾನ್ ದಾರ್ಶನಿಕರು. ಅವರ ತತ್ವಾದರ್ಶಗಳನ್ನು ನಾವೆಲ್ಲರು ಪಾಲಿಸಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

    ತಾಲೂಕು ಈಡಿಗ ಸಮಾಜದ ಅಧ್ಯಕ್ಷ ತಾಯಕನಹಳ್ಳಿ ಮಂಜುನಾಥ, ಉಪಾಧ್ಯಕ್ಷ ಈ.ವೆಂಕಟೇಶ, ಸಂಘಟನಾ ಕಾರ್ಯದರ್ಶಿ ಈ.ಸಂತೋಷ, ಗ್ರಾಪಂ ಸದಸ್ಯ ಈ.ಶ್ರೀನಿವಾಸ, ಮುಖಂಡರಾದ ಬಾಬಣ್ಣ, ಚರಣ್, ಗುಣಸಾಗರ ಕೊಟ್ರೇಶ್, ಜೋಗಿಹಳ್ಳಿ ಧನುಂಜಯ, ಸಿದ್ದಾಪುರ ಶ್ರೀನಿವಾಸ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts