More

    ರೈತರು ಸಮಸ್ಯೆ ನಿವಾರಣೆಗೆ ಜಾಗೃತರಾಗಲಿ

    ಕೂಡಲಸಂಗಮ: ಸರ್ಕಾರದ ಅವೈಜ್ಞಾನಿಕ ರೈತ ನೀತಿಗಳೇ ರೈತರ ಬೆನ್ನೆಲುಬು ಮುರಿಯುತ್ತಿದ್ದು, ಸಮಸ್ಯೆ ಸರಿಪಡಿಸಲು ರೈತರು ಜಾಗೃತರಾಗುವುದು ಅಗತ್ಯವಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.

    ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ 33ನೇ ಶರಣ ಮೇಳದಲ್ಲಿ ರೈತ ಸಮಾವೇಶದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬೆಂಬಲ ಬೆಲೆ ನಿಗದಿ ಮಾಡುವ ವೇಳೆ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಹೊಗಲಾಡಿಸುವ ಕಾರ್ಯವನ್ನು ರೈತರೇ ಮಾಡಬೇಕು. ಈರುಳ್ಳಿ ಬೆಲೆ ಅಧಿಕವಾದಾಗ ಸಂಸತ್‌ನಲ್ಲಿ ಚರ್ಚೆಯಾಗುತ್ತದೆ. ಬೆಲೆ ಸಿಗದೆ ಬೀದಿಗೆ ಹಾಕಿದಾಗ ಚರ್ಚೆ ನಡೆಯುವುದಿಲ್ಲ. ಚುನಾಯಿತ ಪ್ರತಿನಿಧಿಗಳಿಂದಲೇ ರೈತರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಬೀಜ ಮಸೂದೆ ಕಾಯ್ದೆ ಜಾರಿಗೆ ತರುವ ಪೂರ್ವದಲ್ಲಿ ರೈತರೊಂದಿಗೆ ಚರ್ಚೆ ಮಾಡಬೇಕು. ಇಲ್ಲದಿದ್ದರೆ ರೈತರ ವಿರೋಧ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

    ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ರೈತ ಹೋರಾಟಗಳ ವಿಲತೆಗೆ ಜಾತಿ ರಾಜಕಾರಣವೇ ಕಾರಣವಾಗಿದೆ. ರೈತರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು. ಬೆಳೆದ ಬೆಳೆಗೆ ದರ ನಿಗದಿಗೊಳಿಸಿ ಮಾರಾಟ ಮಾಡುವ ಹಕ್ಕು ರೈತರಿಗೆ ಸಿಕ್ಕಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎಂದರು.

    ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ಸಾನ್ನಿಧ್ಯವಹಿಸಿ ಮಾತನಾಡಿ, ಶರಣಮೇಳ ಸಮಾವೇಶದ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

    ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಉದ್ಘಾಟಿಸಿದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮನಗುಂಡಿ ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ, ಸೊಲ್ಲಾಪುರ ಮುಗಳಿ ಬಸವ ಮಂಟಪದ ಮಹಾನಂದಾತಾಯಿ ಹಿರೇಮಠ, ಹಸಿರು ಸೇನಾ ಸಂಘಟನಾ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಮುಖಂಡರಾದ ಶೇಖರಗೌಡ ಗೌಡರ, ಎಲ್.ಎಂ. ಪಾಟೀಲ, ಗಂಗಣ್ಣ ಬಾಗೇವಾಡಿ, ಮುತ್ತಣ್ಣ ಕುರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts