More

    ಬರದ ನಾಡಲ್ಲೊಂದು ದೇವರ ಕಾಡು

    ಕೊಂಡ್ಲಹಳ್ಳಿ: ಬರದನಾಡು ಮೊಳಕಾಲ್ಮೂರು ತಾಲೂಕಿನಲ್ಲಿ ದೇವರ ಪುಟ್ಟ ಕಾಡೊಂದು ಹಸಿರಿನಿಂದ ಕಂಗೊಳಿಸುತ್ತಿದೆ.

    ಕೊಂಡ್ಲಹಳ್ಳಿಯಿಂದ ನೇರ‌್ಲಹಳ್ಳಿಗೆ ತೆರಳುವ ಮಾರ್ಗ ಮಧ್ಯೆ ಯಾದವರ ಆರಾಧ್ಯ ದೈವ ಈರಣ್ಣಸ್ವಾಮಿ ನೆಲೆಸಿದ್ದು, ನೂರಾರು ಮರಗಳಿಂದ ಕಿರು ವನ ನಿರ್ಮಾಣಗೊಂಡಿದೆ. ದೇವರ ಮೇಲೆ ಭಕ್ತಿ ಮತ್ತು ಭಯದ ಕಾರಣಕ್ಕೆ ಜನ ಮರಗಳಿಗೆ ಯಾವುದೇ ಸಮಸ್ಯೆ ಮಾಡಿಲ್ಲ. ಆದರೆ ಮಳೆಯ ಕೊರತೆ ಕಾರಣಕ್ಕೆ ಕೆಲ ಮರಗಳು ಒಣಗುತ್ತಿವೆ.

    ಪುರಾತನ ಕಾಲದಿಂದಲೂ ಪೂಜಿಸಲ್ಪಡುವ ಚಿಕ್ಕ ಪೌಳಿಯ ರೂಪದ ಎರಡು ಕಲ್ಲಿನ ಗುಡಿಗಳಿವೆ. ಸುಂದರ ಕೆತ್ತನೆಯ ದೀಪ ಮಂಟಪವಿದೆ. ದೀಪ ಹಚ್ಚಿಟ್ಟರೆ ಗಾಳಿಯು ಸೋಕದಂತೆ ಮಂಟಪ ನಿರ್ಮಿಸಲಾಗಿದೆ.

    ಈರಣ್ಣಸ್ವಾಮಿ ದೀವಳಿಗೆ, ಗುಗ್ಗರಿ ಸೇರಿದಂತೆ ವಿವಿಧ ಪೂಜಾ ಉತ್ಸವಗಳಲ್ಲಿ ಸ್ವಾಮಿಯ ಉತ್ಸವಮೂರ್ತಿಯನ್ನು ಕರೆತಂದು ಭಕ್ತರು ವಿವಿಧ ಪೂಜೆ, ಹರಕೆ ಸಲ್ಲಿಸುತ್ತಾರೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಅನುಕೂಲವಾಗಲು ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಅಧಿಕಾರಿಗಳ ಸಹಕಾರ ಅವಶ್ಯ ಎಂದು ಗ್ರಾಪಂ ಸದಸ್ಯ ಇ.ನಾಗೇಂದ್ರಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts