More

  ದೇಗುಲಗಳಲ್ಲಿ ಶ್ರಾವಣ ಮಾಸದ ಪೂಜೆ

  ಕೊಂಡ್ಲಹಳ್ಳಿ: ಶ್ರಾವಣ ಮಾಸದ ಅಂಗವಾಗಿ ಕೊಂಡ್ಲಹಳ್ಳಿ ಸುತ್ತಲಿನ ಗ್ರಾವಗಳ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿವೆ.

  ದೇವಸ್ಥಾನಗಳು ಬಾಳೆ, ಮಾವು ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದು, ಭೇಟಿ ಕೊಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಗಂಗಾ ಪೂಜೆ, ರುದ್ರಾಭಿಷೇಕ, ಎಲೆ ಪೂಜೆ ವಿಶೇಷ ಪೂಜಾಲಂಕಾರಗಳು, ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ.

  ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರದ ಗುರುತಿಪ್ಪೇರುದ್ರಸ್ವಾಮಿ, ಸಾಲೇಶ್ವರ ದೇವಸ್ಥಾನ, ದುರ್ಗಾಂಬಿಕಾ, ಬೀರಲಿಂಗೇಶ್ವರ, ಮೊಗಲಹಳ್ಳಿಯ ಈಶ್ವರಸ್ವಾಮಿ, ಹನುಮಂತನಹಳ್ಳಿಯ ಕಾವಲು ಆಂಜನೇಯ ಸ್ವಾಮಿ, ಗೌರಸಮುದ್ರದ ಮಾರಮ್ಮ, ಬಿ.ಜಿ.ಕೆರೆಯ ಬಸವೇಶ್ವರಸ್ವಾಮಿ, ಕೋನಸಾಗರದ ತಿಮ್ಮಪ್ಪಸ್ವಾಮಿ, ತಿಪ್ಪೇರುದ್ರಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts