ಕೊಂಡ್ಲಹಳ್ಳಿ: ಸಮೀಪದ ಓಬಣ್ಣನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು.
ಮುಖ್ಯಶಿಕ್ಷಕ ಆರ್.ರುದ್ರಮುನಿ ಮಾತನಾಡಿ, ಸುಭದ್ರ ಸರ್ಕಾರ ರಚನೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೇ ಸಂವಿಧಾನ ನೀಡಿರುವ ಹಕ್ಕು ಚಲಾಯಿಸಬೇಕು ಎಂದರು.
ಬಿಎಲ್‌ಒ ಆಯ್ತರಪ್ಪ, ಶಿಕ್ಷಕ ಎಂ.ಕೆ.ಬಸವರಾಜ್, ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ, ಭೂಲಕ್ಷ್ಮಿ, ಶಿವರುದ್ರಮ್ಮ, ಸಮಿಉಲ್ಲ್ಲಾ, ಸಲಾಂಖಾನ್, ಶರಣಮ್ಮ ಇತರರಿದ್ದರು.