More

    ಮಾನವೀಯ ಸಂಬಂಧ ದೂರ

    ಕೊಂಡ್ಲಹಳ್ಳಿ: ಆಧುನಿಕ ಕಾಲಘಟ್ಟದಲ್ಲಿ ಮಾನವೀಯ ಸಂಬಂಧ ದೂರವಾಗುತ್ತಿವೆ ಎಂದು ತಾಪಂ ಸದಸ್ಯ ಟಿ.ರೇವಣ್ಣ ಹೇಳಿದರು.

    ಇಲ್ಲಿನ ಸರ್ವೋದಯ ಹಿಪೋ ಕ್ಯಾಂಪಸ್ ಶಾಲೆಯಲ್ಲಿ ಶನಿವಾರ ಅಗಸ್ತ್ಯ ಫೌಂಡೇಶನ್‌ನಿಂದ ಆಯೋಜಿಸಿದ್ದ ವಿಜ್ಞಾನ ತರಬೇತಿ ಮತ್ತು ಪ್ರದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದರು.

    ಆವಿಷ್ಕಾರಗಳು ಮಾನವನ ಬೆಳವಣಿಗೆಗೆ ಪೂರಕವಾಗಿರಬೇಕು. ಆದರೆ, ಮನುಷ್ಯನ ಪ್ರಯೋಗಗಳು ಪ್ರಕೃತಿಗೆ ವಿರುದ್ಧವೇ ಸಾಗುತ್ತಿವೆ ಎಂದರು.

    ಸಂಸ್ಥೆ ಕಾರ್ಯದರ್ಶಿ ಡಿ.ಷಡಾಕ್ಷರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಾಯೋಗಿಕ ತರಬೇತಿ ಕಾರ್ಯಾಗಾರಗಳು ಅಗತ್ಯ ಎಂದು ತಿಳಿಸಿದರು.

    ಅಗಸ್ತ್ಯ ಫೌಂಡೇಶನ್‌ನ ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳ ಜ್ಞಾನ ಮಟ್ಟವನ್ನು ಹೆಚ್ಚಳಕ್ಕೆ ಫೌಂಡೇಷನ್ ಪ್ರಾಯೋಗಿಕ ತರಬೇತಿ ನೀಡುತ್ತಿದೆ ಎಂದರು.

    ಪ್ರಾಂಶುಪಾಲ ಚಂದ್ರಶೇಖರ್ ಲಮಾಣಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಕೆ.ಟಿ.ಕೇಶವರೆಡ್ಡಿ, ಖಜಾಂಚಿ ಆರ್.ರಾಮರೆಡ್ಡಿ, ಮ್ಯಾನೇಜರ್ ಫಣಿಧರ, ನಿರ್ದೇಶಕ ಸಂತೋಷ್ ಮಿಂಚು , ಸಂಯೋಜಕ ಬಿ.ಟಿ.ನಾಗಭೂಷಣ್, ಸಿ.ಎಂ.ವೀರೇಶ್, ನಿಜಲಿಂಗಪ್ಪ, ಶಿಕ್ಷಕಿ ಓಂಕಾರಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts