More

    ಪುರಾಣಗಳ ಪರಿಚಯ ಜ್ಞಾನಕ್ಕೆ ಸಹಕಾರಿ

    ಕೊಂಡ್ಲಹಳ್ಳಿ: ಶಾಲೆಗಳಲ್ಲಿ ಮಕ್ಕಳಿಗೆ ಮಹಾಭಾರತ, ಭಾಗವತ, ಪುರಾಣ, ಪುಣ್ಯ ಕಥೆಗಳನ್ನು ಕಲಿಸಿದರೆ ಭವಿಷ್ಯದಲ್ಲಿ ಕೋರ್ಟಿಗೆ ಹೋಗುವುದನ್ನು ತಪ್ಪಿಸಬಹುದೆಂದು ನಿವೃತ್ತ ಶಿಕ್ಷಕ ಎಸ್.ಟಿ.ಬ್ರಹ್ಮಾನಂದಪ್ಪ ತಿಳಿಸಿದರು.

    ತಳಕು ಹೋಬಳಿಯ ಗೌರಸಮುದ್ರದಲ್ಲಿ ಬುಧವಾರ ಇಂಡಿಯನ್ ಪಬ್ಲಿಕ್ ಸ್ಕೂಲ್ ವತಿಯಿಂದ ನಡೆದ ಚಿಣ್ಣರಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮಕ್ಕಳಿಗೆ ನೀತಿಕಥೆ ಇತರ ಪುಸ್ತಕ ಓದುವ ಹವ್ಯಾಸ ರೂಢಿಸಬೇಕು. ಬರಿ ಅಂಕಗಳಿಗೆ ಸೀಮಿತಗೊಳಿಸದೆ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇಂಗ್ಲಿಷ್ ಅಗತ್ಯಕ್ಕೆ ತಕ್ಕಂತೆ, ಕನ್ನಡ ದೈನಂದಿನ ಭಾಷೆಯಾಗಿ ಬಳಸುವ ವ್ಯವಸ್ಥೆ ಬರಬೇಕು ಎಂದರು.

    ಐಟಿಐ ಕಾಲೇಜು ಉಪನ್ಯಾಸಕ ಕೆ.ಟಿ.ಸತ್ಯಣ್ಣ ಮಾತನಾಡಿ, ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಮಹನೀಯರ ಜೀವನ ಚರಿತ್ರೆ ಓದುವ ರೂಢಿ ಬೆಳೆಸಬೇಕು ಎಂದು ಸಲಹೆ ನೀಡಿದರು.

    ನಾಯಕನಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಇ.ರಾಮರೆಡ್ಡಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶಕ್ಕೆ ಸತ್ಪ್ರಜೆಗಳನ್ನು ಕೊಡುಗೆ ನೀಡಬೇಕು ಎಂದರು.

    ವಾಣಿಜ್ಯೋದ್ಯಮಿ ಸತ್ಯನಾರಾಯಣ ಶ್ರೇಷ್ಠಿ, ಸಂಸ್ಥೆಯ ಅಧ್ಯಕ್ಷ ಟಿ.ವೆಂಕಟೇಶ್, ತಾಪಂ ಉಪಾಧ್ಯಕ್ಷೆ ತಿಪ್ಪಮ್ಮ ಲಿಂಗಾರೆಡ್ಡಿ, ಗ್ರಾಪಂ ಅಧ್ಯಕ್ಷೆ ಶಕುಂತಲಮ್ಮ, ಮಾಜಿ ಅಧ್ಯಕ್ಷ ಪಾಲಯ್ಯ, ಅರ್ಚಕ ಟಿ.ಬಾಲಚಂದ್ರಪ್ಪ, ಗ್ರಾಪಂ ಸದಸ್ಯರಾದ ಓಬಣ್ಣ, ಕುರಿ ಓಬಣ್ಣ, ದೇವರೆಡ್ಡಿಹಳ್ಳಿ ಗ್ರಾಪಂ ಸದಸ್ಯ ಪ್ರಕಾಶ್, ಸಂಸ್ಥೆಯ ಕಾರ್ಯದರ್ಶಿ ಟಿ.ಮಹಾಂತೇಶ್, ಶಿಕ್ಷಣ ಪ್ರೇಮಿ ಎ.ವಿ.ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts