More

    ರೇಷ್ಮೆ ಕೃಷಿಗೆ ಲಾಕ್‌ಡೌನ್ ಎಫೆಕ್ಟ್

    ಕೊಂಡ್ಲಹಳ್ಳಿ: ಲಾಕ್‌ಡೌನ್ ಕಾರಣ ರೇಷ್ಮೆ ನೂಲಿನ ವಹಿವಾಟು ನಡೆಯುತ್ತಿಲ್ಲ ಎಂದು ಮೊಳಕಾಲ್ಮೂರು ತಾಲೂಕು ರೇಷ್ಮೆ ವಿಸ್ತರಣಾಧಿಕಾರಿ ಏಕಾಂತಪ್ಪ ಹೇಳಿದರು.

    ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ನೂಲು ಮಾರಾಟವಾಗದೆ ಬಟ್ಟೆ ವ್ಯಾಪಾರ ಸ್ಥಗಿತಗೊಂಡಿದ್ದು, ನೇಕಾರಿಕೆ ಚಟುವಟಿಕೆಗಳು ಕಡಿಮೆಯಾಗಿವೆ. ಇದರಿಂದ ರೇಷ್ಮೆ ಗೂಡಿನ ದರ ಕುಸಿಯಲು ಕಾರಣವಾಗಿದೆ ಎಂದರು.

    ಮಾರಘಟ್ಟದ ಕೃಷಿ ವಿಜ್ಞಾನಿ ಶ್ರೀನಿವಾಸ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ ಹಿಪ್ಪುನೇರಳೆಯ ಕೊಳೆರೋಗ ನಿವಾರಣೆಯ ಬಗ್ಗೆ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು.

    ರೇಷ್ಮೆ ಬೆಳೆಗಾರರಾದ ಎಸ್.ಕೆ.ಗುರುಲಿಂಗಪ್ಪ, ಎಚ್.ಎನ್.ಮಂಜುನಾಥ್, ಈಶ್ವರಪ್ಪ, ಗುರಮ್ಮ, ಜೆ.ಟಿ.ನಾಗೇಶ್, ತಿಪ್ಪೇಸ್ವಾಮಿ,ತಿಮ್ಮಾರೆಡ್ಡಿ, ರಾಮಾಂಜಿನಿ, ಚಂದ್ರಣ್ಣ, ರೇಷ್ಮೆ ನಿರೀಕ್ಷಕ ಜಿ.ಬಿ.ಮಹೇಶ್, ರೇಷ್ಮೆ ಪ್ರದರ್ಶಕ ಎಸ್.ಎಸ್.ಲಮಾಣಿ, ಕೆ.ಕೆಂಚೋಜಿರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts