More

    ಮಣ್ಣು ಸೇರಿದ ಟೊಮ್ಯಾಟೊ

    ಕೊಂಡ್ಲಹಳ್ಳಿ: ಕರೊನಾ ವೈರಸ್ ಪ್ರಭಾವದಿಂದ ದೇಶ ಲಾಕ್‌ಡೌನ್ ಆಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

    ಸಾರಿಗೆ ಸಂಚಾರ, ಸರಕು ಸಾರಿಗೆ ವ್ಯವಸ್ಥೆ ಇಲ್ಲದಾಗಿ ಕೃಷಿ ಉತ್ಪನ್ನಗಳು ಖರೀದಿಯಾಗದೇ ಕೃಷಿಕರು ನಷ್ಟ ಅನುಭವಿಸುವಂತಾಗಿದೆ.

    ಟೊಮ್ಯಾಟೊ ಸಾಗಿಸಲು ಆಗದ್ದರಿಂದ ಬೇಸತ್ತ ಗ್ರಾಮದ ರೈತ ಆರ್.ಮಂಜಣ್ಣ ಕಿತ್ತ ಹಣ್ಣನ್ನು ಜಮೀನಿನಲ್ಲಿ ಸುರಿಯುತ್ತಿದ್ದಾರೆ.

    ಐದು ಎಕರೆಯಲ್ಲಿ ಅಂದಾಜು ಐದು ಲಕ್ಷ ರೂ. ವೆಚ್ಚದಲ್ಲಿ ಟೊಮ್ಯೊಟೊ ಬೆಳೆದಿದ್ದು, ಎರಡು ವಾರಗಳಿಂದ ಹಣ್ಣು ಬರತೊಡಗಿತ್ತು.

    ಆದರೆ, ಕರೊನಾ ವೈರಸ್ ಹಿನ್ನೆಲೆಯಲ್ಲಿ ತೋಟದ ಕೆಲಸಕ್ಕೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಜತೆಗೆ ಕಿತ್ತ ಹಣ್ಣನ್ನು ಖರೀದಿಸಲು ವ್ಯಾಪಾರಸ್ಥರು ಹಳ್ಳಿಗೆ ಬರುತ್ತಿಲ್ಲ. ಸಾಗಿಸಲು ಸಾರಿಗೆ ವ್ಯವಸ್ಥೆ ಇಲ್ಲ.

    ಇದರಿಂದ ಬೇಸತ್ತ ರೈತ ಮಂಜಣ್ಣ ರಾಶಿ ರಾಶಿ ಟೊಮ್ಯೊಟೊ ಹಣ್ಣನ್ನು ಜಮೀನಿನಲ್ಲಿ ಚೆಲ್ಲಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts