More

    ಅಗ್ನಿಹೋತ್ರ ಹೋಮದಿಂದ ಪರಿಸರ ಶುದ್ಧಿ

    ಕೊಂಡ್ಲಹಳ್ಳಿ: ಕರೊನಾ ತಡೆಗೆ ಸರ್ಕಾರಗಳು ಲಾಕ್‌ಡೌನ್ ಜಾರಿ ಮಾಡಿದರೆ, ಆರೋಗ್ಯ ತೊಂದರೆಗಳು ಬಾರದಿರಲೆಂದು ಜನರೂ ಕೂಡಾ ವಿವಿಧ ಪೂಜೆ, ಹೋಮ ಕಾರ್ಯಗಳಲ್ಲಿ ತೊಡಗಿರುವುದು ಕಂಡು ಬಂದಿದೆ.

    ಕೊಂಡ್ಲಹಳ್ಳಿಯ ನಿವೃತ್ತ ಶಿಕ್ಷಕ ಎಸ್.ಟಿ.ಬ್ರಹ್ಮಾನಂದಪ್ಪ ಅವರು, ನಿತ್ಯ ಅಗ್ನಿಹೋತ್ರ ಜಪದಲ್ಲಿ ತೊಡಗಿದ್ದು, ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಗೆ 15-20 ನಿಮಿಷಗಳ ಕಾಲ ಜಪ ಮಾಡುತ್ತಿದ್ದಾರೆ.

    ಬೆರಣಿ, ತುಪ್ಪವನ್ನು ಬಳಸಿ ಅಗ್ನಿಹೋತ್ರ ಹೋಮ ನಡೆಸಲಾಗುತ್ತಿದೆ. ಪುರಾತನ ಕಾಲದಿಂದ ಆಚರಣೆಯಲ್ಲಿರುವ ಈ ಜಪದಿಂದ ವಾತಾವರಣ ಶುದ್ಧಿಯಾಗುತ್ತದೆ. ಈ ಕಾರ್ಯ ಕೈಗೊಂಡ ಸುತ್ತಲಿನ ಸ್ಥಳದಲ್ಲಿ ಯಾವುದೇ ಆರೋಗ್ಯ ಹಾನಿ ಸಂಭವಿಸುವುದಿಲ್ಲ ಎಂಬುದು ನಂಬಿಕೆ.

    ಹಲವಾರು ದೇಶಗಳಲ್ಲಿ ಈ ಆಚರಣೆ ಮಾಡಲಾಗುತ್ತಿದೆ. ಕುಟುಂಬದ ಸೌಖ್ಯಕ್ಕೆ ಮನೆಯಲ್ಲೇ ಅಗ್ನಿ ಹೋತ್ರ ಹೋಮ ಮಾಡುವುದು ಸೂಕ್ತ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗೂಗಲ್‌ನಲ್ಲಿ ಪಡೆದುಕೊಳ್ಳಬಹುದು ಎನ್ನುತ್ತಾರೆ ಶಿಕ್ಷಕ ಬ್ರಹ್ಮಾನಂದಪ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts