More

    ಕಂಬಳಿ ನೇಕಾರರಿಗೆ ಸಂಕಷ್ಟ

    ಟಿ.ರಾಮಚಂದ್ರಪ್ಪ ಕೊಂಡ್ಲಹಳ್ಳಿ: ಲಾಕ್‌ಡೌನ್ ಕಾರಣಕ್ಕೆ ಹೋಬಳಿ ವ್ಯಾಪ್ತಿಯ ನೂರಾರು ಕಂಬಳಿ ವ್ಯಾಪಾರಿಗಳಿಗೆ ಸಮಸ್ಯೆ ಎದುರಾಗಿದೆ.

    ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ, ಉಡೇವು, ಕೋನಸಾಗರ, ನಾಗಸಮುದ್ರ, ಮೊಗಲಹಳ್ಳಿ, ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ, ನೇರಲಗುಂಟೆ, ಗೊರ‌್ಲಕಟ್ಟೆ ಇತರೆ ಗ್ರಾಮಗಳಲ್ಲಿ ನೂರಾರು ಕಂಬಳಿ ನೇಕಾರರಿದ್ದಾರೆ.

    ಚಳ್ಳಕೆರೆಯ ಕಂಬಳಿ ಮಾರುಕಟ್ಟೆ ರಾಜ್ಯದ ಏಕೈಕ ಮಾರಾಟ ಕೇಂದ್ರವಾಗಿದ್ದು, ಇಲ್ಲಿಗೆ ಆಂಧ್ರ, ಮಹಾರಾಷ್ಟ್ರ, ತೆಲಂಗಾಣದಿಂದ ವ್ಯಾಪಾರಸ್ಥರು ಪ್ರತಿ ಭಾನುವಾರದ ಸಂತೆಗೆ ಕಂಬಳಿ ಖರೀದಿಗೆ ಬರುತ್ತಾರೆ.

    ಕಳೆದ ಮೂರ್ನಾಲ್ಕು ವಾರಗಳಿಂದ ವರ್ತಕರು ಖರೀದಿಗೆ ಬಾರದಿರುವುದರಿಂದ ನೇಯ್ದ ಕಂಬಳಿಗಳು ಮನೆಯಲ್ಲೇ ಉಳಿದಿವೆ. ಬೇರೆ ಕೆಲಸಕ್ಕೆ ಹೋಗುವಂತಿಲ್ಲ ಎಂದು ಕಂಬಳಿ ನೇಕಾರ ಗಂಗಣ್ಣ ಅಳಲು ತೋಡಿಕೊಂಡಿದ್ದಾರೆ.

    ಒಂದು ಕಂಬಳಿ ಮಗ್ಗಕ್ಕೆ ನೇಕಾರರು ಸೇರಿ ಮೂರು ಕುಟುಂಬಗಳು ಅವಲಂಬನೆ ಆಗಿರುತ್ತವೆ. ನಮ್ಮ ನೆರವಿಗೆ ಧಾವಿಸಬೇಕಿದ್ದ ಜವಳಿ ಇಲಾಖೆ, ಉಣ್ಣೆ ಸೊಸೈಟಿಗಳು ಸಂಬಂಧವೇ ಇಲ್ಲವೆಂಬಂತೆ ನಿರ್ಲಕ್ಷೃ ವಹಿಸಿವೆ ಎಂದು ನೇಕಾರ ಬಿ.ವಿ.ಗಂಗಾಧರಪ್ಪ ದೂರಿದ್ದಾರೆ.

    ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್.ಕೆ.ಗುರುಲಿಂಗಪ್ಪ ಹೇಳಿಕೆ: ಕಂಬಳಿ ಮಾರುಕಟ್ಟೆಗೆ, ನೇಯ್ಗೆಗೂ ಅವಕಾಶ ಇಲ್ಲದಿರುವುದರಿಂದ ಸರ್ಕಾರ ಅಥವಾ ಜವಳಿ ಇಲಾಖೆಯು ಸಹಕಾರಿ ಸಂಘಗಳ ಮೂಲಕ ನೇಕಾರರಿಗೆ ಆಹಾರ, ಔಷಧ ಇತರೆ ಅಗತ್ಯಗಳಿಗೆ ಧನಸಹಾಯ ನೀಡಬೇಕು.

    ಜಿಲ್ಲಾ ಕೈಮಗ್ಗ ಜವಳಿ ಇಲಾಖೆಯ ಉಪ ನಿರ್ದೇಶಕ ನೇಗಲೂರು ಹೇಳಿಕೆ: ಇತ್ತೀಚೆಗೆ ನಡೆದ ರಾಜ್ಯ ಜವಳಿ ಇಲಾಖೆಯ ವೀಡಿಯೋ ಕಾನ್ಫರೆನ್ಸ್ ವೇಳೆ ಕಂಬಳಿ,ರೇಷ್ಮೆ ಸೇರಿ ಎಲ್ಲ ನೇಕಾರರಿಗೆ ಆರ್ಥಿಕ ನೆರವು ನೀಡಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts