More

    ಮರಗಳನ್ನು ಬೆಳೆಸಲು ಜನರ ಸಹಕಾರ ಅಗತ್ಯ

    ಕಂಪ್ಲಿ: ಸಸಿಗಳನ್ನು ನೆಟ್ಟು ಮರವಾಗಿ ಬೆಳೆಸುವಲ್ಲಿ ಅರಣ್ಯ ಇಲಾಖೆ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಬಳ್ಳಾರಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪರಶುರಾಮ್ ಲಿಂಗಪ್ಪ ಶಿರಬಡಗಿ ಹೇಳಿದರು.

    ತಾಲೂಕಿನ ದೇವಸಮುದ್ರ ಕ್ರಾಸ್‌ನಿಂದ ಮೆಟ್ರಿ ಗ್ರಾಮದ ಹೊರವಲಯದವರೆಗೆ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬುಧವಾರ ಸಾಮಾಜಿಕ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಭೂಮಿಯ ತಾಪಮಾನ ತಗ್ಗಿಸಲು, ಪರಿಸರ ಸಂರಕ್ಷಣೆ, ನೆರಳು ಮತ್ತು ಪ್ರಾಣಿ ಪಕ್ಷಿಗಳ ಪೋಷಣೆಗಾಗಿ ಹೆದ್ದಾರಿಯುದ್ದಕ್ಕೂ ಎರಡು ಬದಿ ಸಸಿ ನೆಡಲಾಗುತ್ತಿದೆ. ದೇವಸಮುದ್ರ ಕ್ರಾಸ್‌ನಿಂದ ದೇವಲಾಪುರವರೆಗೆ ಪ್ರತಿ ಕಿ.ಮೀ.ಗೆ 300ರಂತೆ ಒಟ್ಟು 1800 ಸಸಿಗಳನ್ನು ನೆಡಲಾಗುತ್ತಿದೆ.

    ಇದನ್ನೂ ಓದಿ: ರಕ್ಷಕ-ವೀಕ್ಷಕರಿಲ್ಲದೆ ಅರಣ್ಯ ರೋದನ: 2.87 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಕೇವಲ 197 ಸಿಬ್ಬಂದಿ!

    ಬೇವು, ಗುಲ್‌ಮೊಹರ್, ಅರಳೆ, ನೇರಳೆ, ಹುಣಸೆ, ಅರಣ್ಯ (ಸಿಹಿ)ಹುಣಸೆ, ಹೊಂಗೆ, ತಪ್ಸಿ, ಹಿಪ್ಪೆ, ಜಾಂಬು, ನೇರಳೆ ಸೇರಿ ನಾನಾ ಜಾತಿಯ ಸಸಿಗಳನ್ನು ಬೆಳೆಸಲಾಗುವುದು. ಮರಗಿಡಗಳ ಸಂರಕ್ಷಣೆ ಮಹತ್ವ, ಮರಗಿಡಗಳನ್ನು ಕಡಿಯಬಾರದು ಎನ್ನುವ ಜಾಗೃತಿ ಫಲಕಗಳನ್ನು ಅಳವಡಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಈ ಬಗ್ಗೆ ಅರಣ್ಯ ಇಲಾಖೆಯಿಂದ ತಾಪಂ ಇಒ ಅಧಿಕಾರಿಗೆ ಪತ್ರ ಬರೆಯಲಾಗುವುದು ಎಂದರು.

    ಅರಣ್ಯ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಹಾಬಾಷ, ಉಪ ವಲಯ ಅರಣ್ಯಾಧಿಕಾರಿ ಪ್ರತಾಪ್, ಅರಣ್ಯ ರಕ್ಷಕರಾದ ಪಂಪಾಪತಿ, ನಾಗರಾಜ, ಜಡೇಶ, ಮಹಮ್ಮದ್ ರಫಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts