More

    ನಗಿಸೋಕೆ ಕೋಮಲ್​ ರೆಡಿ … ನಗೋಕೆ ನೀವು ರೆಡಿನಾ?

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಕ್ಷನ್​ ಹೀರೋ ಆಗಿ ಗುರುತಿಸಿಕೊಂಡಿದ್ದ ಕೋಮಲ್​, ಇದೀಗ ‘ಟ್ವೆಂಟಿ ಟ್ವೆಂಟಿ’ ಎಂಬ ಚಿತ್ರದ ಮೂಲಕ ಮತ್ತೆ ನಗಿಸೋಕೆ ರೆಡಿಯಾಗುತ್ತಿದ್ದಾರೆ ಎಂಬ ವಿಷಯ ಹೊಸದೇನಲ್ಲ. ಈಗಾಗಲೇ ಚಿತ್ರದ ಪ್ರೋಮೋ ಬಿಡುಗಡೆಯಾಗಿದ್ದು, ಇದೀಗ ಚಿತ್ರದ ಮುಹೂರ್ತ ಸಹ ನೆರವೇರಿದೆ.

    ಇದನ್ನೂ ಓದಿ: ‘ಆರ್​.ಎಕ್ಸ್​ 100’ ಗೊತ್ತು, ಈ ‘ಆರ್​.ಎಚ್​ 100’ ಏನು?

    ಹೌದು, ‘ಟ್ವೆಂಟಿ ಟ್ವೆಂಟಿ’ ಚಿತ್ರದ ಮುಹೂರ್ತ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್​​ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ. ‘ಅಯೋಗ್ಯ’, ‘ಬೀರ್​ಬಲ್​’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಟಿ.ಆರ್. ‌ಚಂದ್ರಶೇಖರ್ ಈ ಚಿತ್ರ ನಿರ್ಮಿಸುತ್ತಿದ್ದು, ಅವರೇ ಚಿತ್ರದ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ.

    ಇನ್ನು ‘ರಾಬರ್ಟ್’, ‘ವಿಕ್ಟರಿ 2’, ‘ಅಮ್ಮ ಐ ಲವ್ ಯು’, ‘ತ್ರಿಬಲ್ ರೈಡಿಂಗ್’, ‘ಉಪಾಧ್ಯಕ್ಷ’ ಹಾಗೂ ಇನ್ನೂ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಕೆ.ಎಲ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ.

    ಇದನ್ನೂ ಓದಿ: ಕಿಯಾರಾಗೆ ಮಿಸ್​ ಆದ ಅವಕಾಶ ಆಲಿಯಾಗೆ ಸಿಕ್ತು!

    ನವೆಂಬರ್​ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬೆಂಗಳೂರಿನಲ್ಲೇ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ. ಸಂಪೂರ್ಣ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕೋಮಲ್​ಗೆ ನಾಯಕಿಯಾಗಿ ಧನ್ಯಾ ನಟಿಸುತ್ತಿದ್ದು, ಮಿಕ್ಕಂತೆ ಕುರಿ ಪ್ರತಾಪ್, ತಬಲಾ ನಾಣಿ, ಗಿರಿ, ಅಪೂರ್ವ ಮುಂತಾದವರು ನಟಿಸುತ್ತಿದ್ದಾರೆ. ಶ್ರೀಧರ್​ ಸಂಭ್ರಮ್​ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

    PHOTOS| ಬಿಕಿನಿ ಅವತಾರದಲ್ಲಿ ಶಾನ್ವಿ ಮಿಂಚಿಂಗ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts