More

  ಪಾಮನಕಲ್ಲೂರು ಗ್ರಾಪಂಗೆ ಪಾರ್ವತಮ್ಮ ಅಧ್ಯಕ್ಷೆ

  ಕವಿತಾಳ: ಪಾಮನಕಲ್ಲೂರು ಗ್ರಾಪಂ ಅಧ್ಯಕ್ಷೆಯಾಗಿ ಪಾರ್ವತಮ್ಮ ಹುಲುಗಪ್ಪ, ಉಪಾಧ್ಯಕ್ಷರಾಗಿ ಲಕ್ಷ್ಮಣ ನಾಯಕ ಆಯ್ಕೆಯಾದರು.
  ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಅನುಸೂಚಿತ ಪಂಗಡ ಪುರುಷರಿಗೆ ಮೀಸಲಾಗಿತ್ತು. ಗ್ರಾಪಂ 26 ಸದಸ್ಯ ಬಲ ಹೊಂದಿದ್ದು, 18 ಸದಸ್ಯರು ಹಾಜರಿದ್ದರು. ಚಿಲ್ಕರಾಗಿ ಗ್ರಾಮದ ಮೂರು ಜನ ಸದಸ್ಯರು ಇದುವರೆಗೆ ಗ್ರಾಪಂ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.

  ಸದಸ್ಯರಾದ ರಾಜಸಾಬ್ ಸೈಕಲ್, ದುರುಗಪ್ಪ ಕಲ್ಲೂರು, ಬಸವರಾಜ ಚಲುವಾದಿ, ರೇಣುಕಮ್ಮ, ಕೆಂಚಪ್ಪ ತುಪ್ಪದೂರು, ಶಿವು ಹರ‌್ವ ಪೂರ, ಅಮರೇಶ ಎಚ್., ಬಸವಲಿಂಗಯ್ಯಸ್ವಾಮಿ, ತಿಮ್ಮಮ್ಮ ವೆಂಕಟೇಶ, ಶರಣಪ್ಪಗೌಡ ಆನಂದಗಲ್, ಶಿವನಮ್ಮ ಹಿಲಾಲಪುರ, ಪಿಡಿಒ ರಾಮಣ್ಣ ನಡಗೇರ, ಗ್ರಾಮ ಲೆಕ್ಕಾಧಿಕಾರಿ ಅನಿತಾ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts