More

    ಕೊಲ್ಲೂರು ದೇವಳ ಜಾತ್ರೆಗೆ ಸಿದ್ಧತೆ

    ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾರ್ಚ್ 10ರಿಂದ 19ರವರೆಗೆ ನಡೆಯಲಿರುವ ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.

    ಸಂಪೂರ್ಣ ಹೊಸ ವಿನ್ಯಾಸಗಳಿಂದ ಕೂಡಿದ ವಿದ್ಯುದ್ದೀಪಗಳಿಂದ ದೇವಳ ಅಲಂಕೃತಗೊಂಡಿದೆ. 10ರಂದು ಗಣಪತಿ ಪ್ರಾರ್ಥನೆ, ನಾಂದಿ ಪುಣ್ಯಾಹ, ಅಂಕುರಾವಾಸ ಸಿಂಹಯಾಗ ನಡೆಯಲಿದೆ. ಬೆಳಗ್ಗೆ 8.15ಕ್ಕೆ ಧ್ವಜಾರೋಹಣ ನಂತರ ಧಾರ್ಮಿಕ ಕಾರ್ಯಗಳು ಜರುಗಲಿವೆ. ಪ್ರತಿದಿನ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.]

    ದೇವಳದ ಸೌಪರ್ಣಿಕಾ ಮತ್ತು ಕಾಶೀ ಸ್ನಾನಘಟ್ಟದಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿ ನಿಯೋಜನೆ, ಜೊತೆಗೆ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ಸುಗಮ ಸಂಚಾರಕ್ಕೆ ವ್ಯವಸ್ಥೆ, ಸಿಸಿ ಕ್ಯಾಮೆರಾ ಕಣ್ಗಾವಲು ಮುಂತಾದ ವಿಷಯದಲ್ಲಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ದೇವಳ ಸಹಿತ ಅತಿಥಿಗೃಹ ಹಾಗೂ ಪರಿಸರ ಸ್ವಚ್ಛಗೊಳಿಸಲಾಗುತ್ತಿದೆ. ಮೂಲಸೌಕರ್ಯ ವ್ಯವಸ್ಥೆಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ.

    ಭಕ್ತರಿಗೆ ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ. ದೇವಳದ ಸಿಬ್ಬಂದಿ, ಗ್ರಾಮಸ್ಥರು, ಸ್ಥಳೀಯಾಡಳಿತ ಕೂಡ ಉತ್ಸವದ ಕುರಿತು ವಿಶೇಷ ಕಾಳಜಿ ವಹಿಸಿದೆ. ಪೊಲೀಸ್ ಇಲಾಖೆ ಕೂಡ ಉತ್ಸವದ ಯಶಸ್ಸಿಗೆ ಕೈಜೋಡಿಸಿದ್ದು, ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts