More

    ಕೊಲ್ಲೂರು ಸಹಿತ ನಾಲ್ಕು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

    ಉಡುಪಿ/ಕುಂದಾಪುರ/ಕೋಟ: ಹಿಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಉಡುಪಿ ಜಿಲ್ಲೆಯ ನಾಲ್ಕು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳಿಗೆ ತಲಾ ಒಂಬತ್ತು ಸದಸ್ಯರನ್ನು ನೇಮಿಸಿ ರಾಜ್ಯ ಧಾರ್ಮಿಕ ಪರಿಷತ್ ಮಂಗಳವಾರ ಆದೇಶ ಹೊರಡಿಸಿದೆ. ಸಮಿತಿಯ ಮೊದಲ ಸಭೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಸಮಿತಿ ಅವಧಿ ಮೂರು ವರ್ಷ ಇರುತ್ತದೆ.

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ: ಅರ್ಚಕ ಸದಸ್ಯ- ಕೆ.ರಾಧಾಕೃಷ್ಣ ಅಡಿಗ ಬಾಳಗದ್ದೆ, ಮಹಿಳಾ ಸದಸ್ಯರು- ಕೊಲ್ಲೂರಿನ ರತ್ನಾ ರಮೇಶ್ ವಿ. ಕುಂದರ್, ಮಚ್ಚಟ್ಟುವಿನ ಸಂಧ್ಯಾ ರಮೇಶ್, ಪರಿಶಿಷ್ಟ ಜಾತಿ- ಸೇನಾಪುರ ಗ್ರಾಮದ ಗೋಪಾಲಕೃಷ್ಣ , ಸಾಮಾನ್ಯ ವಿಭಾಗ- ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ ಬೆಳ್ವೆ, ಚಿತ್ತೂರಿನ ಡಾ.ಅತುಲ್‌ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ ಯಡ್ತರೆ, ಶೇಖರ ಪೂಜಾರಿ ಕಾರ್ಕಡ ನೇಮಕಗೊಂಡವರು. ಇವರಲ್ಲಿ ಡಾ.ಅತುಲ್‌ಕುಮಾರ್ ಶೆಟ್ಟಿ ಹಾಗೂ ಜಯಾನಂದ ಹೋಬಳಿದಾರ ಎರಡನೇ ಬಾರಿಗೆ ಸದಸ್ಯರಾಗಿದ್ದಾರೆ. ಸದಸ್ಯರಾಗಲು ಬಯಸಿ ಒಟ್ಟು 158 ಅರ್ಜಿ ಸಲ್ಲಿಕೆಯಾಗಿತ್ತು ಎಂದು ಧಾರ್ಮಿಕ ಪರಿಷತ್ ತಿಳಿಸಿದೆ.
    ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ: ಪಾಳಿಯಲ್ಲಿರುವ ಪ್ರಧಾನ ಅರ್ಚಕರು, ಕಡಿಯಾಳಿಯ ಸಂಧ್ಯಾ ಪ್ರಭು, ಕುಂಜಿಬೆಟ್ಟು ಶಶಿಕಲಾ, ಕುಂಜಿಬೆಟ್ಟು ಗಣೇಶ್, ಡಾ.ರವಿರಾಜ ಆಚಾರ್ಯ, ನಾಗರಾಜ ಶೆಟ್ಟಿ, ಕಿಶೋರ್ ಸಾಲಿಯಾನ್, ಬೈಲಕೆರೆಯ ಕೆ.ಮಂಜುನಾಥ್ ಹೆಬ್ಬಾರ್, ರಮೇಶ್ ಸೇರಿಗಾರ್ ನೇಮಕಗೊಂಡವರು.
    ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ: ಪ್ರಧಾನ ಅರ್ಚಕರು, ಆನಂದ್ ಸಿ. ಕುಂದರ್, ಜ್ಯೋತಿ ಬಿ. ಶೆಟ್ಟಿ, ಸುಶೀಲಾ ಸೋಮಶೇಖರ್, ಸುಂದರ ಕೆ, ರಾಮದೇವ ಐತಾಳ್, ಸತೀಶ್ ಹೆಗ್ಡೆ, ಸುಬ್ರಾಯ ಆಚಾರ್ಯ ಮಣೂರು, ಚಂದ್ರ ಪೂಜಾರಿ ಕದ್ರುಕಟ್ಟು.
    ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳ: ಪ್ರಧಾನ ಅರ್ಚಕರು, ಸಂಕಲಕರಿಯದ ಲಕ್ಷ್ಮೀ, ಅರದಾಲುವಿನ ಹರ್ಷಿಣಿ, ಅಲಂಗಾರುಗುಡ್ಡೆಯ ಶೇಖರ, ಮುಂಡ್ಕೂರಿನ ರವೀಂದ್ರ ಎಚ್.ಶೆಟ್ಟಿ, ಸಚ್ಚೇರಿಪೇಟೆಯ ಮಹಾಬಲ ಜಿ.ಕರ್ಕೇರ, ಅಂಗಡಿಗುತ್ತುವಿನ ಪ್ರಸಾದ್ ಎಂ. ಶೆಟ್ಟಿ, ಜೈನಪೇಟೆಯ ರಘುವೀರ್ ಎಂ.ಶೆಣೈ, ಜಾರಿಗೆಕಟ್ಟೆಯ ವಿನಯಕುಮಾರ್ ಶೆಟ್ಟಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts