More

    ಕೈವಾರ ತಾತಯ್ಯ ಜಯಂತ್ಯುತ್ಸವ ಆಚರಣೆ

    ಕೊಳ್ಳೇಗಾಲ: ಪಟ್ಟಣದ ಬಳೆ ಪೇಟೆಯಲ್ಲಿ ಕಾಲಜ್ಞಾನಿ ಕೈವಾರ ತಾತಯ್ಯ ಜಯಂತ್ಯುತ್ಸವವನ್ನು ಭಾನುವಾರ ಶ್ರೀ ಬಲಿಜ ಕುಲಬಾಂಧವರ ಸಂಘದಿಂದ ಆಚರಣೆ ಮಾಡಲಾಯಿತು.

    ಬಳೆ ಪೇಟೆಯ ವೃತ್ತದಲ್ಲಿ ಶ್ರೀ ಕೈವಾರ ತಾತಯ್ಯ ಅವರ ಭಾವಚಿತ್ರವನ್ನಿಟ್ಟು ಶ್ರೀ ಬಲಿಜ ಕುಲಬಾಂಧವರ ಸಂಘದವರು ಹಾಗೂ ಸಾರ್ವಜನಿಕರು ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ಹಾಗೂ ಸಿಹಿಯನ್ನು ವಿತರಿಸಲಾಯಿತು.
    ಸಂಘದ ಅಧ್ಯಕ್ಷ ಉದಯಕುಮಾರ್ ಮಾತನಾಡಿ, ಕಾಲಜ್ಞಾನಿಯಾದ ಕೈವಾರ ತಾತಯ್ಯ ಅವರ 296ನೇ ಜಯಂತಿ ಆಚರಣೆ ರಾಜ್ಯದೆಲ್ಲೆಡೆ ನಡೆಯುತ್ತಿದೆ. ಅದರಂತೆ ಕೊಳ್ಳೇಗಾಲದಲ್ಲಿ ನಮ್ಮ ಸಂಘದ ವತಿಯಿಂದ 3ನೇ ಬಾರಿಗೆ ಕೈವಾರ ತಾತಯ್ಯ ಜಯಂತಿ ಆಚರಣೆ ಮಾಡಲಾಗುತ್ತಿದೆ. ಅಧ್ಯಾತ್ಮ ಚೇತನರಾಗಿರುವ ಇವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯುವ ಮೂಲಕ ಉತ್ತಮ ಜೀವನ ನಡೆಸೋಣ ಎಂದು ತಿಳಿಸಿದರು.

    ನಗರಸಭೆ ಸದಸ್ಯ ಮನೋಹರ್, ಚೌಡೇಶ್ವರಿ ಶೈಕ್ಷಣಿಕ ಹಾಗೂ ಧಾರ್ಮಿಕ ಅಧ್ಯಕ್ಷ ಚಿಂತು ಪರಮೇಶ್ವಯ್ಯ, ಬಾರ್ ನಾಗಣ್ಣ, ವೆಂಕಟೇಶ್, ನಾರಾಯಣ್, ಮುಖಂಡ ಗಿರೀಶ್ ಬಾಬು, ಶ್ರೀ ಬಲಿಜ ಕುಲಬಾಂಧವರ ಸಂಘದ ಸದಸ್ಯರಾದ ಮಹೇಶ್, ವೈ.ಕೆ. ನಾಗರಾಜು, ರಾಘವೇಂದ್ರ, ಗುಣಶೇಖರ್, ಆನಂದ್, ಸುಮನ್, ರಜನಿಕಾಂತ್, ನಟರಾಜು, ಸನತ್ ಕುಮಾರ್, ಭಾಗ್ಯರಾಜು, ಅವಿನಾಶ್, ಕೃಷ್ಣ, ವೆಂಕಟಾಚಲ, ರಾಜೇಂದ್ರ, ನಾಗರಾಜು ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts