More

    ಕೊಳ್ಳೇಗಾಲದ ವಿವಿಧೆಡೆ ಶಿವಕುಮಾರ ಶ್ರೀಗಳ ಜನ್ಮದಿನಾಚರಣೆ

    ಕೊಳ್ಳೇಗಾಲ: ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ 117ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ವಿವಿಧ ಕಾರ್ಯಕ್ರಮಗಳು ನಡೆಯಿತು. ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ ಶ್ರೀಗಳ ಹುಟ್ಟು ಹಬ್ಬದ ಹಿನ್ನೆಲೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಜಿಲ್ಲಾ ರಕ್ತನಿಧಿ ಘಟಕದ ಹಿರಿಯ ಅಧಿಕಾರಿ ಸತ್ಯಣ್ಣ, ಜೆಎಸ್‌ಬಿ ಪ್ರತಿಷ್ಠಾನದ ಶಶಿಕುಮಾರ ಇತರರಿದ್ದರು.

    ಮೋದಿ ಟೀ ಸ್ಟಾಲ್ ಸ್ನೇಹಿತರ ಬಳಗದಿಂದ ಆಚರಣೆ:
    ಪಟ್ಟಣದ ಜನನಿ ಆಸ್ಪತ್ರೆ ಸಮೀಪದಲ್ಲಿ ಮೋದಿ ಟೀ ಸ್ಟಾಲ್ ಸ್ನೇಹಿತರ ಬಳಗದ ವತಿಯಿಂದ ಡಾ. ಶಿವಕುಮಾರ ಮಹಾಸ್ವಾಮೀಜಿ ಜನ್ಮದಿನವನ್ನು ಆಚರಣೆ ಮಾಡಲಾಯಿತು. ಟೀಸ್ಟಾಲ್ ಬಳಗದ ಮಹದೇವಸ್ವಾಮಿ, ಪತ್ರಿಕೆ ಏಜೆಂಟ್ ಮಲ್ಲೇಶ್, ಬೂದಿತಿಟ್ಟು ಗುರುಸ್ವಾಮಿ, ಜಿ.ಪಂ ಮಾಜಿ ಸದಸ್ಯ ಮುಳ್ಳೂರು ಕಮಲ್, ಹೊಂಡರಬಾಳು ಜಗದೀಶ್, ಜೆಸಿಬಿ ಲೋಕೇಶ್, ಲಯನ್ಸ್ ಲೋಕಿ, ವೀರಶೈವ ಮಹಾಸಭೆ ಮಾಜಿ ಅಧ್ಯಕ್ಷ ಎಂ.ಬಸವರಾಜು ಅವರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು.

    ಶ್ರೀ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಆಚರಣೆ:
    ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ರಸ್ತೆಯಲ್ಲಿ ಶ್ರೀ ಶಿವಕುಮಾರ ಸ್ವಾಮಿ ಸ್ವಸಹಾಯ ಸಂಘ ಪದಾಧಿಕಾರಿಗಳು ಶ್ರೀಗಳ ಜನ್ನದಿನವನ್ನು ಅನ್ನಸಂತರ್ಪಣೆ ಮಾಡುವ ಮೂಲಕ ಆಚರಣೆ ಮಾಡಿದರು. ಚಾಮುಲ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ನಗರಸಭಾ ಸದಸ್ಯೆ ಸುಮಾ ಸುಬ್ಬಣ್ಣ, ಶ್ರೀ ಶಿವಕುಮಾರ ಸ್ವಾಮಿ ಸ್ವಸಹಾಯ ಸಂಘದ ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಪರಶಿವಮೂರ್ತಿ, ಸದಸ್ಯರಾದ ಮಹೇಶ್ ಬಂಡಳ್ಳಿ, ಸೋಮಣ್ಣ, ಗಿರೀಶ್, ಕುಮಾರಸ್ವಾಮಿ, ಸುರೇಶ್, ಕುಮಾರ, ನಿರಂಜನ್, ಬಸವಣ್ಣ, ಮಹೇಶ್, ಸತೀಶ್, ವೀರಶೈವ ನೌಕರ ಸಂಘದ ಮಲ್ಲೇಶಪ್ಪ, ಮಹದೇವಸ್ವಾಮಿ ಯುಪಿಎಸ್, ಕಾಂತರಾಜು ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts