More

    ಪ್ರಸಿದ್ಧ ಹಲ್ದಿರಾಮ್ ಭುಜಿಯಾವಾಲಾ ಸ್ನ್ಯಾಕ್ಸ್​​ ಸಂಸ್ಥೆಯ ಮಾಲೀಕ ಮಹೇಶ್​ ಅಗರ್ವಾಲ್​ ನಿಧನ

    ಕೋಲ್ಕತ: ದೇಶಾದ್ಯಂತ ಪ್ರಸಿದ್ಧವಾಗಿರುವ “ಹಲ್ದಿರಾಮ್ ಭುಜಿಯಾವಾಲಾ” ಸ್ನ್ಯಾಕ್ಸ್​​ ಸಂಸ್ಥೆಯ ಮಾಲೀಕ ಮಹೇಶ್​ ಅಗರ್ವಾಲ್​​ ಅವರು ಶುಕ್ರವಾರ ತಡರಾತ್ರಿ ಸಿಂಗಾಪುರ್​ನಲ್ಲಿ ಕೊನೆಯುಸಿರೆಳೆದಿದ್ದಾರೆ.

    ಅಗರ್ವಾಲ್​, ಗಂಭೀರವಾದ ಲಿವರ್​ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಮೂರು ತಿಂಗಳಿಂದ ಸಿಂಗಾಪುರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ 57ನೇ ವಸಂತಕ್ಕೆ ಕಾಲಿಡುವಷ್ಟರಲ್ಲಿ ಇಹಲೋಕವನ್ನೇ ತ್ಯಜಿಸಿದ್ದಾರೆ.

    ಕರೊನಾ ವೈರಸ್​ನಿಂದ ಸದ್ಯ ಜಾಗತಿಕವಾಗಿ ಎದುರಾಗಿರುವ ಸಂಕಷ್ಟದ ಸಮಯದಲ್ಲಿ ಅಗರ್ವಾಲ್​ ಪಾರ್ಥೀವ ಶರೀರವನ್ನು ತವರಿಗೆ ತರಲಾಗದೆ ಅವರ ಕುಟುಂಬ ಸಿಂಗಾಪುರ್​ನಲ್ಲಿ ಅಂತ್ಯಕ್ರಿಯೆ ನೆರವೇರಿಸಿದೆ. ಸಿಂಗಾಪುರ್​ನಲ್ಲಿ ಹಿಂದು ವಿಧಿ-ವಿಧಾನಗಳು ಅನುಸರಿಸದೇ ಇರುವುದರಿಂದ ಆ ದೇಶದ ನಿಯಮಾನುಸಾರವೇ ಅಂತ್ಯಕ್ರಿಯೆ ನಡೆದಿದೆ.

    ಅಗರ್ವಾಲ್, ಪತ್ನಿ ಮೀನಾ ಮತ್ತು ಮಗಳು ಅವನಿ ತವರಿಗೆ ಮರಳಲು ಯತ್ನಿಸಿದರೂ ಸದ್ಯದ ಸ್ಥಿತಿಯಲ್ಲಿ ಅದು ಸಾಧ್ಯವಾಗಿಲ್ಲ. ಇದನ್ನರಿತು ಭಾರತೀಯ ರಾಯಭಾರಿ ಕಚೇರಿಯನ್ನು ತಲುಪಲು ಯತ್ನಿಸಿದರೂ ಕೂಡ ಮಂಗಳವಾರದಿಂದ ಜಾರಿಯಲ್ಲಿರುವ ಲಾಕ್​ಡೌನ್​ನಿಂದಾಗಿ ತುಂಬಾ ಸಮಸ್ಯೆ ಎದುರಿಸುವಂತಾಗಿದೆ.

    ನಮ್ಮ ತಂದೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ನಮ್ಮ ಬಿಸಿನೆಸ್​ ಕೋಲ್ಕತದಲ್ಲೇ ದಿಢೀರ್​ ಬೆಳವಣಿಗೆಯಿಂದ ಅನಾಥವಾಗಿ ಉಳಿದಿದೆ. ನಾವು ಅದನ್ನು ಉಳಿಸಿಕೊಳ್ಳಲು ತವರಿಗೆ ಮರಳಲೇ ಬೇಕಿದೆ ಎಂದು ಸಿಂಗಾಪುರ್​ನಿಂದಲೇ ಅವನಿ ಅಳಲು ತೋಡಿಕೊಂಡಿದ್ದಾರೆ.

    ಅಗರ್ವಾಲ್​ಗೆ ಓರ್ವ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗ ಪ್ರತೀಕ್ ಸದ್ಯ ಕೋಲ್ಕತದಲ್ಲಿದ್ದಾರೆ. ಹಿರಿಯ ಮಗಳು ಅಂಚಲ ವಿಜ್ಞಾನಿಯಾಗಿದ್ದು, ಸ್ಯಾನ್​ಫ್ರಾನ್ಸಿಸ್ಕೋದ ಸ್ಯಾನ್​ಡಿಸ್ಕ್​ ಜತೆ​ ಕೆಲಸ ಮಾಡುತ್ತಿದ್ದಾರೆ. ಕಿರಿಯ ಮಗಳು ಅಂತರ ಡುರ್ಹಾಮ್​ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ ಅಧ್ಯಯನ ಮಾಡುತ್ತಿದ್ದಾರೆ.

    ಲಿವರ್​ ಕಾಯಿಲೆಯಿಂದ ಬಳಲುತ್ತಿದ್ದ ಅಗರ್ವಾಲ್​ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಸಿಂಗಾಪುರ್​ಗೆ ಕರೆದೊಯ್ಯಲಾಯಿತು. ಕುಟುಂಬವು ಲಿವರ್ ಕಸಿಯ ಭರವಸೆಯನ್ನು ಹೊಂದಿದ್ದರು.​ ಸರ್ಜರಿ ಯಶಸ್ವಿಯು ಆಗಿತ್ತು. ಆದರೆ, ಅಗರ್ವಾಲ್​ ಅವರನ್ನು ಐಸಿಯುಗೆ ಸ್ಥಳಾಂತರಿಸಿದ ಬಳಿಕ ಸೋಂಕೊಂದು ಬೆಳವಣಿಗೆಯಾಗಲು ಆರಂಭಿಸಿತು. ಈ ಸೋಂಕು ಕ್ಯಾಂಡಿಡಾ ಆರಿಸ್​ನಿಂದ ಉತ್ಪತಿಯಾಗುತ್ತದೆ. ಇದರಿಂದಾಗಿಯೇ ಅಗರ್ವಾಲ್​ ಮರಣ ಹೊಂದಿದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಕೂಲ್​ ಕ್ಯಾಪ್ಟನ್​ ಧೋನಿಗೆ ಈ ದಿನ ತುಂಬಾ ವಿಶೇಷವೇಕೆ ಗೊತ್ತಾ? ಪಾಕ್​ ವಿರುದ್ಧವೇ ಮೈಲುಗಲ್ಲು ಸ್ಥಾಪಿಸಿದ ದಿನವಿದು!

    ಕರೊನಾ ವೈರಸ್​ ಗಾಳಿಯಿಂದ ಹರಡುವುದಕ್ಕೆ ಆಧಾರಗಳಿಲ್ಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts