More

    ಹವಾಮಾನ ಮುನ್ಸೂಚನೆ: AUS vs SA ವಿಶ್ವಕಪ್ ಸೆಮಿಫೈನಲ್‌ಗೆ ಮಳೆ ಅಡ್ಡಿಯಾಗಲಿದೆಯೇ?

    ನವದೆಹಲಿ: ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಪೈಪೋಟಿ ನಡೆಸಲಿವೆ. ನಗರದಲ್ಲಿ ಮಳೆಯ ಮುನ್ಸೂಚನೆಯೊಂದಿಗೆ ಪಂದ್ಯವನ್ನು ಮೊಟಕುಗೊಳಿಸಬಹುದು ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ.

    ವಿಶ್ವಕಪ್ 2023 ಪಂದ್ಯಾವಳಿಯು ಅಂತಿಮ ಹಂತವನ್ನು ತಲುಪಿದೆ. ಮೊದಲ ಸೆಮಿಫೈನಲ್ ಈಗಾಗಲೇ ಮುಗಿದಿದೆ. ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 70 ರನ್ ಗಳಿಂದ ಗೆದ್ದು ಫೈನಲ್ ತಲುಪಿದೆ. ಎರಡನೇ ಸೆಮಿಫೈನಲ್ ಗುರುವಾರ (ನವೆಂಬರ್ 16) ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ನಿರ್ಧರಿಸಲಿದೆ. ಗೆಲ್ಲುವ ತಂಡ ಫೈನಲ್‌ನಲ್ಲಿ ಭಾರತದ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ. ಈ ನಡುವೆ ಈ ಹೈವೋಲ್ಟೇಜ್ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ.

    ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾ ನಗರದಲ್ಲಿ ಮಳೆಯಾಗುತ್ತಿರುವ ಕಾರಣ ಗುರುವಾರ ಮಳೆಯಾಗುವ ಸಾಧ್ಯತೆಯಿದೆ. ಭಾರತ ಹವಾಮಾನ ಇಲಾಖೆ (IMD) ಪ್ರಕಾರ, ಗುರುವಾರ ಕೋಲ್ಕತ್ತಾದಲ್ಲಿ ಶೇಕಡಾ 50 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನದ 77 ಪ್ರತಿಶತ ಮತ್ತು ಗರಿಷ್ಠ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಎಂದು ನಿರೀಕ್ಷಿಸಲಾಗಿದೆ. ರಾತ್ರಿ ತಾಪಮಾನವು 23 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಮೀಸಲು ದಿನವಾಗಿ ಪಂದ್ಯ ನಿಗದಿಯಾಗಿದ್ದರೂ ಶುಕ್ರವಾರವೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯದ ಸಮಯದಲ್ಲಿ, ತೇವಾಂಶವು ಶೇಕಡಾ 69 ರಷ್ಟಿದ್ದು, ಶೇಕಡಾ 100 ರಷ್ಟು ಮೋಡ ಕವಿದಿರುತ್ತದೆ ಮತ್ತು ಕನಿಷ್ಠ ಶೇಕಡಾ 25 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಹವಾಮಾನ ಸಂವಹನಕಾರ ನವದೀಪ್ ದಹಿಯಾ ಅವರು ಟ್ವೀಟ್ ಮಾಡಿ, ಕೋಲ್ಕತ್ತಾದಲ್ಲಿ AUS vs SA ನಡುವಿನ ಎರಡನೇ ಸೆಮಿಸ್ ಮಳೆಯ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಆಳವಾದ ವಾಯುಭಾರ ಕುಸಿತವು ಪಶ್ಚಿಮ ಬಂಗಾಳದ ಕರಾವಳಿಗೆ ಸಮೀಪದಲ್ಲಿದೆ, ಮೋಡ ಕವಿದ ವಾತಾವರಣವು ದಿನವಿಡೀ ಇರುತ್ತದೆ. ಮಧ್ಯಾಹ್ನ 1 ಅಥವಾ 2 ರ ನಂತರ ಯಾವುದೇ ಸಮಯದಲ್ಲಿ ತುಂತುರು ಮಳೆ ಪ್ರಾರಂಭವಾಗುತ್ತದೆ. ಸಂಜೆ 4 ರಿಂದ 6 ರ ನಡುವೆ ಲಘುವಾಗಿ ಸಾಧಾರಣ ತುಂತುರು ಮತ್ತು ನಂತರ ಕಡಿಮೆಯಾಗುವ ಸಾಧ್ಯತೆಯಿದೆ ರಾತ್ರಿಯಲ್ಲಿ ತುಂತುರು ಮಳೆಯ ಸಂಭವನೀಯತೆ ಇದೆ ಎಂದು ಟ್ವೀಟ್​​ ಮಾಡಿದ್ದಾರೆ.

    ಐಸಿಸಿ ವಿಶ್ವಕಪ್ ನಾಕೌಟ್ ಪಂದ್ಯಗಳಿಗೆ ಮೀಸಲು ದಿನವನ್ನು ಪ್ರಕಟಿಸಿದೆ. ಅದೇನೆಂದರೆ, 2023ರ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ನಿಗದಿತ ದಿನದಂದು ನಡೆಯದಿದ್ದರೆ, ಅದು ಎರಡನೇ ದಿನ ನಡೆಯಲಿದೆ. ಎರಡನೇ ದಿನವೂ ಮಳೆ ಅಡ್ಡಿಯಾದಲ್ಲಿ 20-20 ಓವರ್‌ಗಳ ಪಂದ್ಯ ನಡೆಯಲಿದೆ. ಆದರೆ, ಮೀಸಲು ದಿನದಂದು ಮಳೆಯಿಂದಾಗಿ 20 ಓವರ್‌ಗಳ ಪಂದ್ಯವೂ ನಡೆಯದಿದ್ದರೆ, ಲೀಗ್ ಸುತ್ತಿನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ತಂಡದ ಶ್ರೇಯಾಂಕದ ಆಧಾರದ ಮೇಲೆ ಅಂತಿಮ ಸುತ್ತಿನ ಆಟಗಾರರನ್ನು ನಿರ್ಧರಿಸಲಾಗುತ್ತದೆ. ನಂತರ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ ಪಡೆಯುತ್ತಿದೆ.

    ಭಾರತ ವಿಶ್ವಕಪ್‌ ಫೈನಲ್‌ಗೆ ತಲುಪಿದ್ದು ನಿಜವಾಗಿಯೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ; ಪಾಕ್​ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts