More

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು

    ಕೋಲ್ಕತ್ತ: ಪಶ್ಚಿಮಬಂಗಾಳದಲ್ಲಿ ಪದೇಪದೆ ಬಿಜೆಪಿ ಕಾರ್ಯಕರ್ತರ ಹತ್ಯೆ ಆಗುತ್ತಿರುವುದನ್ನು ಖಂಡಿಸಿ ನಿನ್ನೆ ಪಕ್ಷದ ಯುವ ಮೋರ್ಚಾ ಹಮ್ಮಿಕೊಂಡಿದ್ದ ನಬನ್ನಾ ಚಲೋ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು.
    ಕಲ್ಲು ತೂರಾಟ..ಟೈಯರ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು, ನೀರು, ಲಾಠಿ ಚಾರ್ಜ್​ ಪ್ರಯೋಗವನ್ನು ಪೊಲೀಸರು ಮಾಡಿದ್ದರು.

    ಇದೀಗ ಬಿಜೆಪಿಯ ಹಲವು ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಸಭೆ ನಡೆಸಿ, ನಿಯಮಗಳ ಉಲ್ಲಂಘನೆ ಮಾಡಿದ ಆರೋಪದಡಿ ಕೇಸ್ ದಾಖಲು ಮಾಡಿದ್ದಾಗಿ ತಿಳಿಸಿದ್ದಾರೆ.
    ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯವಾರ್ಗಿಯಾ, ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್​ ರಾಯ್​, ಸಂಸದರಾದ ಲಾಕೆಟ್​ ಚಟರ್ಜಿ, ಅರ್ಜುನ್​ ಸಿಂಗ್, ರಾಕೇಶ್​ ಸಿಂಗ್​, ಮುಖಂಡರಾದ ಭಾರತಿ ಘೋಷ್​, ಜಯಪ್ರಕಾಶ್​ ಮಜುಮ್​ದಾರ್​ ವಿರುದ್ಧ ಪ್ರಕರಣ ದಾಖಲಾಗಿದೆ.

    ಇನ್ನು ಪ್ರತಿಭಟನೆ ವೇಳೆ ವೃಥಾ ನಮ್ಮ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಎಫ್​ಐಆರ್​ ದಾಖಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಿನ್ನೆ ರಾತ್ರಿ ಧರಣಿ ನಡೆಸಿದ್ದರು. (ಏಜೆನ್ಸೀಸ್)

    ಸಂಸದರಿಗೆ ಕರೊನಾ ಬಂತು ಅಂತ ಸಂಸತ್ತನ್ನು ಮುಚ್ಚಿದ್ದಾರಾ?: ಈಶ್ವರಪ್ಪ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts