More

    ಚನ್ನಬಸವಣ್ಣನವರ ಕೊಡುಗೆ ಅಪಾರ

    ಕೊಲ್ಹಾರ: 12ನೇ ಶತಮಾನದ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರುಗಳಲ್ಲಿ ಚನ್ನ ಬಸವಣ್ಣನವರದು ಬಹು ಪ್ರಮುಖವಾದದು ಎಂದು ಕೊಲ್ಹಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಕದಳಿ ವೇದಿಕೆ ಅಧ್ಯಕ್ಷೆ ಬೋರಮ್ಮ ಪತಂಗಿ ಹೇಳಿದರು.
    ಸೋಮವಾರ ಪಟ್ಟಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಶ್ರೀ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಡೆದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಚನ್ನ ಬಸವಣ್ಣನವರ ಕುರಿತು ಅವರು ಉಪನ್ಯಾಸ ನೀಡಿದರು.
    ಇವರು ಬದುಕಿದ್ದು ಕೇವಲ ಇಪ್ಪತ್ನಾಲ್ಕು ವರ್ಷ ಮಾತ್ರ, ಆದರೆ, ಬಸವಣ್ಣನವರು ಸ್ಥಾಪಿಸಿದ ಶಿವಾನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿ ಲಿಂಗಾಯತ ಧರ್ಮದ ಸಾಂಪ್ರದಾಯಿಕ ವಚನಗಳನ್ನು ಪುರಸ್ಕರಿಸಿ ಷಟಸ್ಥಲ ಸಂಪ್ರದಾಯಕ್ಕೆ ನೆಲೆ ಕಲ್ಪಿಸಿದವರು ಎಂದು ಹೇಳಿದರು. ಉಪನ್ಯಾಸಕಿ, ಕದಳಿ ವೇದಿಕೆ ಸದಸ್ಯ ಕವಿತಾ ಮುದಕವಿ ಉಪನ್ಯಾಸ ನೀಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಾಜಶೇಖರ ಉಮರಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸಪ್ಪ ಗಿಡ್ಡಪ್ಪಗೋಳ ಉದ್ಘಾಟಿಸಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಮಲ್ಲಿಕಾರ್ಜುನ ಕುಬಕಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಬಿ. ಜೆ. ಹಿಕ್ಕನಗುತ್ತಿ ಹಾಗೂ ಅರ್ಚನಾ ಯಂಕಂಚಿ ಶರಣ ಬಂಧುಗಳಿಂದ ವಚನ ಗಾಯನ ನಡೆಯಿತು. ಕೊಲ್ಹಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಯುವ ವೇದಿಕೆ ಅಧ್ಯಕ್ಷ ಎಂ. ಎಚ್. ಮಟ್ಯಾಳ ಸ್ವಾಗತಿಸಿದರು. ರೋಣಿಹಾಳ ಶ್ರೀ ಸಂಗನಬಸವ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್. ಬಿ. ಪಾರಗೊಂಡ ವಂದಿಸಿದರು. ಕ.ರಾ.ಅ.ಪ್ರಾ.ಶಾ.ಶಿ.ಸಂ. ಕಾರ್ಯದರ್ಶಿ ಮಂಜುನಾಥ ಮುಳವಾಡ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts