More

    ಕೋಲಾರದಲ್ಲಿ ಟೊಮ್ಯಾಟೊ ಅಭಾವ!: ಮಧ್ಯಭಾರತದ ರಾಜ್ಯಗಳಿಂದ ಆಮದು, ಬೆಲೆಯಿದ್ದರೂ ಬೆಳೆಯಿಲ್ಲ

    ಕೋಲಾರ: ದೇಶ, ವಿದೇಶಗಳಿಗೆ ಟೊಮ್ಯಾಟೊ ಸರಬರಾಜು ವಾಡುತ್ತಿದ್ದ ಕೋಲಾರ ಜಿಲ್ಲೆಯಲ್ಲೀಗ ಉತ್ಪನ್ನದ ಕೊರತೆ ಎದುರಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತಿಸ್‌ಗಢದಿಂದ ಜಿಲ್ಲೆಗೆ ಟೊಮ್ಯಾಟೊ ತರಿಸಿಕೊಳ್ಳಲಾಗುತ್ತಿದೆ.

    ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮ್ಯಾಟೊ ವಾರುಕಟ್ಟೆ ಎಂಬ ಹೆಗ್ಗಳಿಕೆೆ ಕೋಲಾರ ಮಾರುಕಟ್ಟೆಗಿದೆ. ಸೀಸನ್‌ನಲ್ಲಿ ದಿನವೊಂದಕ್ಕೆ 40 ಸಾವಿರ ಕ್ವಿಂಟಾಲ್ ಉತ್ಪನ್ನ ಬರುತ್ತಿತ್ತು. ಆದರೆ ಕಳೆದ ಮೇ ಮತ್ತು ಸೆಪ್ಟೆಂಬರ್‌ನಲ್ಲಿ ಬೆಲೆ ಸಿಗದೆ ಮತ್ತು ಅಕ್ಟೋಬರ್, ನವೆಂಬರ್‌ನಲ್ಲಿ ಅತಿವೃಷ್ಟಿಯಿಂದ ಟೊಮ್ಯಾಟೊ ಅಭಾವ ಎದುರಾಗಿದೆ. ಸ್ಥಳೀಯ ರೈತರಿಂದ ದಿನಕ್ಕೆ 3000 ಕ್ವಿಂಟಾಲ್ ವಾತ್ರ ಸರಬರಾಜಾಗುತ್ತಿದೆ.

    ಕೋಲಾರ ವಾರುಕಟ್ಟೆಯಿಂದ ಬೆಂಗಳೂರು, ತಮಿಳುನಾಡು, ಕೇರಳ ಮತ್ತಿತರ ಕಡೆ ನಿತ್ಯ ಕನಿಷ್ಠವೆಂದರೆ 6 ಸಾವಿರ ಕ್ವಿಂಟಾಲ್ ಟೊಮ್ಯಾಟೊ ಸರಬರಾಜಾಗುತ್ತದೆ. ಆದರೆ ಬೇಡಿಕೆಯ ಅರ್ಧದಷ್ಟು ಉತ್ಪನ್ನ ಬರುತ್ತಿದೆ, ಬೇಡಿಕೆ ಇರುವ ಕಡೆಯಿಂದ ಬರುವ ವ್ಯಾಪಾರಿಗಳು ಉತ್ಪನ್ನ ಸಿಗುವ ರಾಜ್ಯಗಳಿಗೆ ಹೋಗದಂತೆ ಹಿಡಿದಿಟ್ಟುಕೊಳ್ಳಲು ಸ್ಥಳೀಯ ವ್ಯಾಪಾರಸ್ಥರು ನಾಸಿಕ್, ಭೂಪಾಲ್, ರಾಯಪುರ ಮತ್ತಿತರ ಕಡೆಯಿಂದ ನಿತ್ಯ 3000 ಕ್ವಿಂಟಾಲ್ ಟೊಮ್ಯಾಟೊ ತರಿಸಿಕೊಳ್ಳುತ್ತಿದ್ದಾರೆ.

    ಸ್ಥಳೀಯ ಟೊಮ್ಯಾಟೊ 15 ಕೆಜಿ ಬಾಕ್ಸ್ ಪ್ರಸ್ತುತ ದರ 700 ರೂ. ಇದೆ. ದೇಶದ ಮಧ್ಯಭಾಗದ ರಾಜ್ಯಗಳಲ್ಲಿ ಅದೇ ಬಾಕ್ಸ್‌ಗೆ 400 ಅಥವಾ ಅದಕ್ಕಿಂತ ಕಡಿಮೆ ದರ ನೀಡಿ ತರಿಸಿಕೊಳ್ಳುವ ವ್ಯಾಪಾರಿಗಳು ಇಲ್ಲಿ ಬೇರೆ ಬಾಕ್ಸ್‌ಗಳಿಗೆ ಬದಲಿಸಿ ತಮಿಳುನಾಡಿನ ಚೆನ್ನೈ, ಕೊಯಂಬತ್ತೂರು, ಮಧುರೈ, ತೂತುಕುಡಿ, ಕೇರಳದ ಕಲ್ಲಿಕೋಟೆ ಮತ್ತಿತರ ಕಡೆ ಕಳುಹಿಸುತ್ತಿದ್ದಾರೆ.

    ಬೇಡಿಕೆ ಮೇಲೆ ಆಮದು: ಸ್ಥಳೀಯ ಟೊಮ್ಯಾಟೊ ಗುಣಮಟ್ಟ, ವಾರ ಕಳೆದರೂ ಕೆಡುವುದಿಲ್ಲ. ಹೊರ ರಾಜ್ಯಗಳಿಂದ ಬರುವ ಟೊಮ್ಯಾಟೊ ಜಿಲ್ಲೆಗೆ ಬರಲು ಮೂರ‌್ನಾಲ್ಕು ದಿನ ತೆಗೆದುಕೊಳ್ಳುತ್ತಿದ್ದು, ಇಲ್ಲಿಂದ ಬೇರೆ ಕಡೆ ಸಾಗಿಸಲು ಒಂದು ದಿನ ತೆಗೆದುಕೊಳ್ಳುತ್ತದೆ. ಇಲ್ಲಿಗೆ ಬಂದ ಟೊಮ್ಯಾಟೊ ಮತ್ತೊಂದು ದಿನದಲ್ಲಿ ವಾರಾಟ ವಾಡಬೇಕು. ಇಲ್ಲವಾದರೆ ಹಾಳಾಗುತ್ತದೆ. ಇಲ್ಲಿನ ಗುಣಮಟ್ಟದ ಟೊಮ್ಯಾಟೊ ಜತೆ ಅದೂ ಸಹ ಬೇರೆ ರಾಜ್ಯಗಳಿಗೆ ಸರಬರಾಜಾಗುತ್ತಿದೆ.

    ಬೆಲೆ ಏರಿಕೆಗೆ ಕುತ್ತು: ನವೆಂಬರ್‌ನಲ್ಲಿ 15 ಕೆಜಿ ಬಾಕ್ಸ್ ಟೊಮ್ಯಾಟೊ 1500 ರೂ. ವರೆಗೆ ವಾರಾಟವಾಗಿತ್ತು. ಹೊರ ರಾಜ್ಯದ ಟೊಮ್ಯಾಟೊ ಬಾರದಿದ್ದರೆ ಸ್ಥಳೀಯ ಉತ್ಪನ್ನಕ್ಕೆ ಈಗಲೂ 1000 ರೂ. ಬೆಲೆ ಸಿಗುತ್ತಿತ್ತು ಎಂದು ರೈತರು ಹೇಳುತ್ತಿದ್ದರೆ, ಆಮದು ಮಾಡಿಕೊಳ್ಳದಿದ್ದರೆ ವ್ಯಾಪಾರಿಗಳು ನಮ್ಮಿಂದ ದೂರವಾಗುತ್ತಾರೆ ಎಂಬುದು ಮಂಡಿ ವಾಲೀಕರು ಅಭಿಪ್ರಾಯವಾಗಿದೆ.

    ವಾರುಕಟ್ಟೆಗೆ ವಾರದಿಂದ ಬೇರೆ ರಾಜ್ಯಗಳ ಟೊಮ್ಯಾಟೊ ಬರುತ್ತಿದೆ. ನಮ್ಮಲ್ಲಿ ಬೇಡಿಕೆಯಷ್ಟು ಉತ್ಪನ್ನ ಬರಲು ಇನ್ನೂ 15ರಿಂದ 20 ದಿನ ತೆಗೆದುಕೊಳ್ಳಬಹುದು. ಅಲ್ಲಿ ತನಕ ಇದೇ ಪರಿಸ್ಥಿತಿ ಮುಂದುವರಿಯಬಹುದು.
    ರವಿಕುವಾರ್, ಕಾರ್ಯದರ್ಶಿ, ಎಪಿಎಂಸಿ ಕೋಲಾರ

    ಬೇರೆ ರಾಜ್ಯಗಳಿಂದ ಕೆಲವು ಮಂಡಿ ವಾಲೀಕರು ಟೊಮ್ಯಾಟೊ ತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ.
    ಕೇರಳ, ತಮಿಳುನಾಡು ವ್ಯಾಪಾರಸ್ಥರು ಮಧ್ಯಭಾರತದಿಂದ ನೇರ ಉತ್ಪನ್ನ ತರಿಸಿಕೊಂಡರೆ ಅವರು ಇತ್ತ ತಲೆಹಾಕುವುದಿಲ್ಲ. ಆಗ ನಮ್ಮ ಭಾಗದ ಟೊಮ್ಯಾಟೊ ಖರೀದಿಸುವವರು ಇಲ್ಲದಂತಾಗುತ್ತದೆ. ಹೊರ ರಾಜ್ಯದ ಉತ್ಪನ್ನ ತರಿಸುವುದರಿಂದ ನಮ್ಮ ಗುಣಮಟ್ಟದ ಉತ್ಪನ್ನದ ಬೆಲೆ ಕುಸಿಯುವುದಿಲ್ಲ.
    ಶ್ರೀನಾಥ್, ಸಿಎಂಆರ್ ಮಂಡಿ ವಾಲೀಕ

    ಕಳೆದ ವರ್ಷ ನಮ್ಮ ರೈತರು ಉತ್ಪನ್ನವಿದ್ದಾಗ ಬೆಲೆ ಇಲ್ಲದೆ ನಷ್ಟ ಹೊಂದಿದ್ದರು. ಆದರೆ ಈಗ ಕಡಿಮೆ ಉತ್ಪನ್ನವಿದ್ದು, ಬೆಲೆ ಸಿಗಬಹುದೆಂಬ ನಿರೀಕ್ಷೆ ಹೊತ್ತಿದ್ದರಾದರೂ, ಮಂಡಿ ವಾಲೀಕರು ಹೊರಗಡೆಯಿಂದ ಟೊಮ್ಯಾಟೊ ತರಿಸುತ್ತಿರುವುದರಿಂದ ಮತ್ತೆ ನಷ್ಟ ಹೊಂದುವಂತಾಗಿದೆ.
    ಶ್ರೀನಿವಾಸ್, ರೈತ, ಕೊಂಡರಾಜನಹಳ್ಳಿ

    ನಾವು ಕೇಳಿದಷ್ಟು ಟೊಮ್ಯಾಟೊವನ್ನು ಕೋಲಾರದ ವ್ಯಾಪಾರಿಗಳು ಪೂರೈಸುತ್ತಿದ್ದಾರೆ. ನಮಗೆ ಬಾಕ್ಸ್ ಮೇಲೆ 50ರಿಂದ 100 ರೂ. ಸಿಗುತ್ತದೆ.
    ಶಿವಕಾಸಿ, ನಾಸೀರ್, ವ್ಯಾಪಾರಿ, ತಮಿಳುನಾಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts