More

    ಆರ್‌ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಮುಂದುವರಿಯಲಿ ಎಂದ ಸೆಹ್ವಾಗ್

    ನವದೆಹಲಿ: ಆರ್‌ಸಿಬಿ ತಂಡ ಈ ಸಲವೂ ಕಪ್ ಗೆಲ್ಲಲು ವಿಫಲವಾಗಿರುವ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕಬೇಕೆಂದು ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹೇಳಿದ್ದರು. ಆದರೆ ದೆಹಲಿಯ ಮತ್ತೋರ್ವ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಈಗ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕರಾಗಿ ಮುಂದುವರಿಯಬೇಕೆಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

    ಕೊಹ್ಲಿ ಕಳೆದ 8 ವರ್ಷಗಳಿಂದ ಆರ್‌ಸಿಬಿ ನಾಯಕರಾಗಿದ್ದರೂ ಪ್ರಶಸ್ತಿ ಜಯಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ಕೊಹ್ಲಿ ಅವರನ್ನೇ ನಾಯಕರಾಗಿ ಮುಂದುವರಿಸುವ ಜತೆಗೆ ತಂಡವನ್ನು ಹೇಗೆಲ್ಲ ಸುಧಾರಿಸಬಹುದು ಎಂಬ ಬಗ್ಗೆ ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ಗಮನಹರಿಸಬೇಕೆಂದು ಸೆಹ್ವಾಗ್ ಹೇಳಿದ್ದಾರೆ.

    ‘ತಂಡವೊಂದು ಎಷ್ಟು ಉತ್ತಮವಾಗಿರುವುದೋ, ನಾಯಕ ಕೂಡ ಅಷ್ಟೇ ಉತ್ತಮನಾಗಿರುತ್ತಾನೆ. ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿ ಉತ್ತಮ ಫಲಿತಾಂಶ ಕಾಣುವಲ್ಲಿ ಸಫಲರಾಗಿದ್ದಾರೆ. ಏಕದಿನ, ಟಿ20, ಟೆಸ್ಟ್ ತಂಡಗಳ ನಾಯಕರಾಗಿ ಗೆಲುವು ಕಂಡಿದ್ದಾರೆ. ಆದರೆ ಆರ್‌ಸಿಬಿ ತಂಡದ ಪರ ಅವರು ಅಂಥದ್ದೇ ಯಶಸ್ಸು ಕಾಣಲು ವಿಫಲರಾಗಿದ್ದಾರೆ. ನಾಯಕನೊಬ್ಬ ಉತ್ತಮ ತಂಡವನ್ನೂ ಹೊಂದಿರುವುದು ಅತ್ಯಂತ ಅಗತ್ಯವಾಗಿದೆ’ ಎಂದು ಸೆಹ್ವಾಗ್ ಹೇಳಿದ್ದಾರೆ.

    ‘ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ನಾಯಕನನ್ನು ಬದಲಾಯಿಸುವ ಬಗ್ಗೆ ಚಿಂತಿಸಬಾರದು. ಅದಕ್ಕೆ ಬದಲಾಗಿ ತಂಡವನ್ನು ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಗಮನಹರಿಸಬೇಕು. ತಂಡಕ್ಕೆ ಯಾವ ಆಟಗಾರನನ್ನು ಸೇರಿಸಿಕೊಂಡರೆ ನಿರ್ವಹಣೆಯನ್ನು ಸುಧಾರಿಸಬಹುದು ಎಂಬ ಬಗ್ಗೆ ಚಿಂತಿಸಬೇಕಾಗಿದೆ’ ಎಂದು ಸೆಹ್ವಾಗ್ ಆರ್‌ಸಿಬಿ ತಂಡಕ್ಕೆ ಸಲಹೆ ನೀಡಿದ್ದಾರೆ. 3 ವರ್ಷಗಳ ಬಳಿಕ ಐಪಿಎಲ್ ಪ್ಲೇಆಫ್​ ಹಂತಕ್ಕೇರಿದ್ದ ಆರ್‌ಸಿಬಿ, ಎಲಿಮಿನೇಟರ್ ಪಂದ್ಯದಲ್ಲಿ ಸೋತು 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

    ಆರ್‌ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ಕೈಬಿಡಲು ಇದು ಸಕಾಲ ಎಂದ ಗಂಭೀರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts