More

    VIDEO: ಕೊಹ್ಲಿ ಬ್ಯಾಟಿಂಗ್ ಕೌಶಲದ ಹಿಂದೆ ಕನ್ನಡಿಗನ ಕಮಾಲ್

    ನವದೆಹಲಿ: ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ವೇಗದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದರೆ ಅದರ ಹಿಂದೆ ಕನ್ನಡಿಗನೊಬ್ಬನ ಶ್ರಮವಿದೆ! ಅಭ್ಯಾಸದ ಅವಧಿಯಲ್ಲಿ ತಂಡದ ಸದಸ್ಯರಿಗೆ ಆತನ ಥ್ರೋ ಡೌನ್ ಎಸೆತಗಳನ್ನು ಎದುರಿಸುವುದೇ ದೊಡ್ಡ ಸವಾಲು. ಗಂಟೆಗೆ 150 ರಿಂದ 155 ಕಿಲೋಮೀಟರ್ ವೇಗದಲ್ಲಿ ಎಸೆಯುವ ಪ್ರತಿ ಎಸೆತಗಳನ್ನು ಎದುರಿಸುವ ಮೂಲಕ ವೇಗದ ಬೌಲಿಂಗ್ ಎದುರಿಸಲು ಸಜ್ಜಾಗುತ್ತಾರೆ. ಟೀಮ್ ಇಂಡಿಯಾದ ಥ್ರೋ ಡೌನ್ ಸ್ಪೆಷಲಿಸ್ಟ್ ಡಿ.ರಾಘವೇಂದ್ರ ಕುರಿತು ನಾಯಕ ವಿರಾಟ್ ಕೊಹ್ಲಿಯೇ ಗುಣಗಾನ ಮಾಡಿದ್ದಾರೆ. ಬಾಂಗ್ಲಾದೇಶದ ತಮೀಮ್ ಇಕ್ಬಾಲ್ ಜತೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡುತ್ತಾ ಕರ್ನಾಟಕದ ರಾಘವೇಂದ್ರ ಉರ್ು ರಘುವಿನ ಚಮತ್ಕಾರದ ಬಗ್ಗೆ ಮಾತನಾಡಿದ್ದಾರೆ.

    ಇದನ್ನೂ ಓದಿ: ಚೆಂಡಿಗೆ ಬೆವರು ಹಚ್ಚಿ, ಎಂಜಲು ಬೇಡ!

    ವೇಗಿಗಳನ್ನು ಎದುರಿಸಲು ಒತ್ತಡವಿಲ್ಲ..
    2013ಕ್ಕೂ ಮೊದಲು ವೇಗದ ಬೌಲರ್‌ಗಳನ್ನು ಎದುರಿಸುವುದು ಎಂದರೆ ಕೊಂಚ ಸವಾಲೇ ಆಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಒತ್ತಡ ರಹಿತವಾಗಿ ವಿಶ್ವದ ಯಾವುದೇ ವೇಗಿಯನ್ನು ಎದುರಿಸಬಲ್ಲೆವು, ಅದಕ್ಕೆ ಕಾರಣ ರಾಘವೇಂದ್ರ ಎಂದಿದ್ದಾರೆ ಕೊಹ್ಲಿ. ುಟ್‌ವರ್ಕ್ ಕುರಿತು ರಘುವಿಗೆ ಉತ್ತಮ ಪರಿಕಲ್ಪನೆಯಿದೆ. ಬ್ಯಾಟ್ಸ್‌ಮನ್‌ಗಳ ಚಲನವಲನಗಳನ್ನು ಅರಿತು ಎಸೆತಗಳನ್ನು ಎಸೆಯುತ್ತಾರೆ. ನೆಟ್ಸ್‌ನಲ್ಲಿ ರಘು ಎಸೆತಗಳನ್ನು ಎದುರಿಸಿದರೆ ಎಂಥಾ ವೇಗಿಗಳನ್ನೂ ಎದುರಿಸಬಹುದು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಗಂಟೆಗೆ 155 ಕಿಮೋಮೀಟರ್ ವೇಗದಲ್ಲಿ ಚೆಂಡು ಎಸೆಯವ ಸಾಮರ್ಥ್ಯ ಅವರಿಗಿದೆ ಎಂದಿದ್ದಾರೆ.

    VIDEO: ಕೊಹ್ಲಿ ಬ್ಯಾಟಿಂಗ್ ಕೌಶಲದ ಹಿಂದೆ ಕನ್ನಡಿಗನ ಕಮಾಲ್

    ಟೀಮ್ ಇಂಡಿಯಾದ ಪ್ರಮುಖ ಸದಸ್ಯ
    ನೆಟ್ಸ್‌ನಲ್ಲಿ ರಾಘವೇಂದ್ರರ ಎಸೆತಗಳನ್ನು ಸಮರ್ಥವಾಗಿ ಎದುರಿಸಿದರೆ ನಿರ್ಭಯವಾಗಿ ಕ್ರಿಸ್‌ನಲ್ಲಿ ನಿಂತು ಆಡಬಹುದು. ನಾನು ಆತನನ್ನು ತಂಡದ ಸದಸ್ಯ ಎಂದುಕೊಂಡಿದ್ದೇನೆ ಎಂದು ಕೊಹ್ಲಿ ಕನ್ನಡಿಗನ ಗುಣಗಾನ ಮಾಡಿದ್ದಾರೆ. ಕೇವಲ ಕೊಹ್ಲಿ ಅಲ್ಲದೇ ಇದಕ್ಕೂ ಮೊದಲು ರೋಹಿತ್ ಶರ್ಮ, ಕೆಎಲ್ ರಾಹುಲ್, ಶಿಖರ್ ಧವನ್ ಸೇರಿದಂತೆ ರಾಘವೇಂದ್ರ ಥ್ರೋ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಯಾರಿವರು ರಾಘವೇಂದ್ರ
    ಕರ್ನಾಟಕದ ಕುಮಟ ಮೂಲದವರಾದ ರಾಘವೇಂದ್ರ ಕ್ರಿಕೆಟ್ ಮೇಲಿನ ಅತೀವ ಆಸಕ್ತಿಯಿಂದಾಗಿ ಬೆಂಗಳೂರಿಗೆ ಬಂದರು. ಆದರೆ, VIDEO: ಕೊಹ್ಲಿ ಬ್ಯಾಟಿಂಗ್ ಕೌಶಲದ ಹಿಂದೆ ಕನ್ನಡಿಗನ ಕಮಾಲ್ಬೆಂಬಿಡದ ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರ ಉಳಿದರೂ ಆಸಕ್ತಿ ಮಾತ್ರ ಕುಗ್ಗಲಿಲ್ಲ. ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಸಹ-ಆಟಗಾರರಿಗೆ ಥ್ರೋಡೌನ್ ಮಾಡುತ್ತಿದ್ದರು. ದಿಗ್ಗಜರಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಕೂಡ ರಾಘವೇಂದ್ರ ಅವರ ಎಸೆತಗಳನ್ನು ಎದುರಿಸಿದ್ದಾರೆ. ಇವರ ಪ್ರತಿಭೆ ಗಮನಿಸಿ ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಭಾರತ ತಂಡಕ್ಕೆ ಥ್ರೋಡೌನ್ ಎಕ್ಸ್‌ರ್ಟ್ ಆಗಿ ನೇಮಿಸಿಕೊಳ್ಳುವಂತೆ ಬಿಸಿಸಿಐಗೆ ಶಿಾರಸು ಮಾಡಿದ್ದರು. ಇದರಿಂದ ಮೊದಲ ಬಾರಿಗೆ 2011-12ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಟೀಮ್ ಇಂಡಿಯಾಗೆ ಸೇರ್ಪಡೆಗೊಂಡರು. ಬಳಿಕ ಕೆಲಕಾಲ ಹೊರಗುಳಿದಿದ್ದರೂ 2014 ರಿಂದ ತಂಡದ ಕಾಯಂ ಸಹಾಯಕ ಸಿಬ್ಬಂದಿಯಾಗಿದ್ದಾರೆ. ಟೀಮ್ ಇಂಡಿಯಾ ಸದಸ್ಯನಾಗಬೇಕು ಎಂದುಕೊಂಡಿದ್ದ ರಾಘವೇಂದ್ರ ಕಡೆಗೆ ಥ್ರೋಡೌನ್ ತಜ್ಞನಾಗಿ ಕಾಯಂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

    ಥ್ರೋ ಡೌನ್ ತಜ್ಞ ರಾಘವೇಂದ್ರ ಕುರಿತು ಕೊಹ್ಲಿ ಮೆಚ್ಚುಗೆ

    ಥ್ರೋ ಡೌನ್ ತಜ್ಞ ರಾಘವೇಂದ್ರ ಕುರಿತು ಕೊಹ್ಲಿ ಮೆಚ್ಚುಗೆhttps://bit.ly/2XeSGnK

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮೇ 19, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts