More

    ಸಂಭ್ರಮದ ಕೋಡಿ ದುರ್ಗಾದೇವಿ ಜಾತ್ರೆ

    ಗುತ್ತಲ: ಸಮೀಪದ ನೆಗಳೂರ ಗ್ರಾಮದಲ್ಲಿ ಕೋಡಿ ದುರ್ಗಾದೇವಿ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಬುಧವಾರ ಜರುಗಿತು.

    ಜಾತ್ರೆ ಅಂಗವಾಗಿ ಮಂಗಳವಾರ ಅಲಂಕೃತಗೊಂಡ ಕೋಡಿ ದುರ್ಗಾದೇವಿಯ ಬೆಳ್ಳಿ ಮೂರ್ತಿಯನ್ನು ಶೃಂಗರಿಸಿದ ಬಂಡಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮ ದೇವತಾ ದೇವಸ್ಥಾನದಿಂದ ವಿವಿಧ ವಾಧ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೋಡಿ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.

    ಬುಧವಾರ ಬೆಳಗ್ಗೆ ಸ್ಥಳೀಯ ಸಂಸ್ಥಾನ ಹಿರೇಮಠದ ಪೂಜ್ಯಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಸರ್ವಲಂಕಾರಗೊಂಡ ದೇವಿಯನ್ನು ಚೌತಮನಿ ಕಟ್ಟೆಗೆ ತಂದು ಪ್ರತಿಷ್ಠಾಪಿಸಿದ ನಂತರ ಭಕ್ತಾದಿಗಳಿಗೆ ದೇವಿ ದರ್ಶನ ಪಡೆದರು.

    ಗಮನ ಸೆಳೆದ ಎತ್ತಿನ ಮೆರವಣಿಗೆ: ಜಾತ್ರೆಯಲ್ಲಿ ಅಲಂಕೃತಗೊಂಡ ಎತ್ತುಗಳ ಮೆರವಣಿಗೆ, ಗ್ರಾಮದ ಗುರುಶಾಂತೇಶ್ವರ ಭಜನಾ ಸಂಘ ವೀರಭದ್ರೇಶ್ವರ ಭಜನಾ ಸಂಘ ರೇವಣಸಿದ್ಧೇಶ್ವರ ಭಜನಾ ಸಂಘ ಸಿದ್ಧೇಶ್ವರ ಭಜನಾ ಸಂಘ, ಗ್ರಾಮ ರಕ್ಷಕ ದಳ ವತಿಯಿಂದ ಅಲಂಕೃತ ಎತ್ತುಗಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋಡಿ ದುರ್ಗಾದೇವಿ ದೇವಸ್ಥಾನಕ್ಕೆ ತೆರಳಿ ಸಂಪನ್ನಗೊಂಡಿತು.

    ಎತ್ತುಗಳ ಬೆನ್ನಮೇಲೆ ಅರಳಿದ ಶ್ರೀರಾಮ ಮಂದಿರ: ಗ್ರಾಮದ ರೈತ ವಿರೂಪಾಕ್ಷಪ್ಪ ಹೆಡಿಯಾಲ ತಮ್ಮ ಎತ್ತುಗಳನ್ನು ವಿಶೇಷವಾಗಿ ಅಲಂಕಾರಗೊಳಿಸಿದ್ದಲ್ಲದೆ, ಅಯೋಧ್ಯೆಯ ಶ್ರೀರಾಮ ಮಂದಿರ ಚಿತ್ರದಿಂದ ಎತ್ತುಗಳನ್ನು ಸಿಂಗರಿಸಿರುವುದು ನೋಡುಗರ ಗಮನ ಸೆಳೆಯಿತು.

    ಸಂಜೆ ದೇವಿಯು ದೇವಸ್ಥಾನದಿಂದ ಮರಳಿ ಗ್ರಾಮ ದೇವತಾ ದೇವಸ್ಥಾನಕ್ಕೆ ಮರಳಿ ಬರುವ ಮೂಲಕ ಜಾತ್ರೆ ಸಂಪನ್ನಗೊಂಡಿತು. ಜಾತ್ರಾಮಹೋತ್ಸವದಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts