More

    ಕಡ್ಡಾಯವಾಗಿ ಮತದಾನ ಮಾಡಿ

    ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತ ಹಕ್ಕು ಚಲಾಯಿಸಬೇಕು. ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು, ಯುವತಿಯರು, ರೋಗಿಗಳು, ವಯಸ್ಕರು ಬೆಳ್ಳಂಬೆಳಗ್ಗೆ ತಮ್ಮ ಪ್ರದೇಶದಲ್ಲಿ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕು ಎಂದು ವೀರಶೈವ ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಶರಣು ಪಪ್ಪಾ ಮನವಿ ಮಾಡಿದರು.
    ಜಿಲ್ಲಾಡಳಿತ, ಚುನಾವಣಾ ಆಯೋಗ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಾಗೃತಿ ಮೂಡಿಸುತ್ತಿದೆ. ಸಂವಿಧಾನ ಬದ್ಧ ಹಕ್ಕು ಚಲಾವಣೆ ನಮ್ಮ ಕರ್ತವ್ಯ. ಯಾವುದೇ ಪಕ್ಷ, ಅಭ್ಯರ್ಥಿ ಬಗ್ಗೆ ಯೋಚಿಸಿ, ಯೋಗ್ಯರಿಗೆ ಮತ ನೀಡಬೇಕು ಎಂದು ಕೋರಿದರು.
    ಸಿಎಂ-ಪಿಎA ಹುದ್ದೆಗೆ ಗೌರವ ಕಾಪಾಡಿ: ಗೌರವಯುತ ಹುದ್ದೆಗಳಾದ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಸ್ಥಾನದ ಘನತೆ, ಗೌರವ ಕಾಪಾಡಬೇಕು. ವ್ಯಕ್ತಿಗತ ನಿಂದನೆ, ಪರಸ್ಪರ ಟೀಕೆ ಟಿಪ್ಪಣಿ ಭರದಲ್ಲಿ ಆ ಹುದ್ದೆಗಳ ಸ್ಥಾನ, ಗೌರವಕ್ಕೆ ಧಕ್ಕೆ ಬರುತ್ತಿರುವುದು ನೋವಿನ ಸಂಗತಿ. ಚುನಾವಣೆ ನಂತರ ಎಲ್ಲರೂ ಒಗ್ಗೂಡುತ್ತಾರೆ. ಪಕ್ಷಾಂತರ ಮಾಡುವ ಜನಪ್ರತಿನಿಧಿಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುತ್ತಾರೆ ಹೊರತು ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರ ಹಿತಾಸಕ್ತಿಗೆ ಕವಡೆ ಕಿಮ್ಮತ್ತಿಲ್ಲ ಎಂದು ಹೇಳಿದರು.
    ಪ್ರಮುಖರಾದ ಸಿz್ದೆÃಶ್ವರ ಕೋಡ್ಲೆ, ಶರಣು ಆವಂಟಿ, ಲಕ್ಷಿö್ಮÃಕಾಂತ ಜೋಳದ್, ಚನ್ನವೀರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts