More

    ನೇಕಾರಿಕೆ ವೃತ್ತಿಯಲ್ಲ, ಸಂಸ್ಕೃತಿ

    ಕೊಡೇಕಲ್: ಜನರಿಗೆ ಅನ್ನ ನೀಡುವ ರೈತ ಎಷ್ಟು ಮುಖ್ಯವೋ ಬಟ್ಟೆ ನೇಯ್ದು ಮಾನ ಕಾಪಾಡುವ ನೇಕಾರರು ಕೂಡ ಅಷ್ಟೇ ಮುಖ್ಯ. ನೇಕಾರಿಕೆ ವೃತ್ತಿಯಲ್ಲ, ಅದೊಂದು ಸಂಸ್ಕೃತಿ ಎಂದು ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವೀರಸಂಗಪ್ಪ ಹಾವೇರಿ ಹೇಳಿದರು.

    ಗ್ರಾಮದಲ್ಲಿ ಶ್ರೀ ಬಸವೇಶ್ವರ ಕೈಮಗ್ಗ ನೇಕಾರರ ಉತ್ಪಾದಕರ ಮತ್ತು ಮಾರಾಟಗಾರ ಸಂಘ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ನೇಕಾರಿಕೆ ಸುಲಭದ ಕಾಯಕವಲ್ಲ. ಪರಿಶ್ರಮ ಮತ್ತು ಪವಿತ್ರ ಕಾಯಕ. ನೇಕಾರರು ಕಷ್ಟಪಟ್ಟು ತಯಾರಿಸುವ ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೆ ನೇಕಾರಿಕೆ ಕಣ್ಮರೆಯಾಗುತ್ತಿದೆ. ನೇಕಾರರ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.

    ಪ್ರಮುಖರಾದ ಸಂಗಣ್ಣ ಪೂಜಾರಿ, ಹಣಮಯ್ಯ ಕೆಂಡದ, ಬಸಣ್ಣ ಹಳೇಪೂಜಾರಿ, ಸಂಗಣ್ಣ ಹಾವೇರಿ, ಎಸ್.ಬಿ.ಅಡ್ಡಿ, ಬಸವರಾಜ ಗೋನಟಲ್, ಬಸವರಾಜ ಕೆಂಡದ, ಮಾನಪ್ಪ ಅಡ್ಡಿ, ಬಸವರಾಜ ಹಾವೇರಿ ದ್ಯಾಮನಾಳ, ಬಸವರಾಜ ಬಂಡಿ ಇತರರಿದ್ದರು. ಪ್ರಕಾಶ ಬಾಚಿಹಾಳ ನಿರೂಪಣೆ ಮಾಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts