More

    ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ

    ಬೆಂಗಳೂರು: ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡಲು ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟ ಆಯೋಜಿಸಿದ್ದ ಪಾಂಡಂಡ ಕುಟ್ಟಪ್ಪ (86) ನಗರದ ಸ್ವಗೃಹದಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ.

    ಒಲಂಪಿಕ್ಸ್ ಮಾದರಿಯಲ್ಲಿಯೇ ವಿಶ್ವದಾದ್ಯಂತ ಗಮನಸೆಳೆದಿದ್ದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಮೊದಲ ಬಾರಿಗೆ ಕರಡದಲ್ಲಿ 1997ರಲ್ಲಿ ನಡೆದಿತ್ತು. ಕುಟ್ಟಪ್ಪನವರ ಆಶಯದಂತೆ ಪ್ರತೀ ವಷ೯ ಕೊಡಗಿನಲ್ಲಿ 1 ತಿಂಗಳ ಕಾಲ ಯಶಸ್ವಿಯಾಗಿ ನಡೆಯುತ್ತಿದ್ದ ಕೊಡವ ಹಾಕಿ ಹಬ್ಬ ಕಳೆದ ವಷ೯ ಮಹಾಮಳೆ ಮತ್ತು ಈ ವಷ೯ ಕರೊನಾದಿಂದಾಗಿ ನಡೆಯಲಿಲ್ಲ.ಕೊಜಿ

    ಇದನ್ನೂ ಓದಿರಿ ಆಂಧ್ರ ಅನಿಲ ದುರಂತ: ಸೋರಿಕೆಯಾಗಿರುವುದು ಸ್ಟೈರೀನ್ ಗ್ಯಾಸ್, ಇದರಿಂದಾಗುವ ದುಷ್ಪರಿಣಾಮಗಳೇನು?​

    22 ವಷ೯ಗಳಿಂದ ಕುಟ್ಟಪ್ಪ ಅವರೇ ಹಾಕಿ ಹಬ್ಬಕ್ಕೆ ಮಾಗ೯ದಶ೯ನ ನೀಡುತ್ತಿದ್ದರು. ಕೊಡವ ಹಾಕಿ ಪಂದ್ಯಾವಳಿಗಾಗಿ ಕುಟ್ಟಪ್ಪ ಅವರಿಗೆ ಲಿಮ್ಕಾ ಬುಕ್ ಆಫ್ ರೆಕಾಡ್ಸ್೯ನಲ್ಲೂ ಸ್ಥಾನ ಒಲಿದಿತ್ತು. ಎಸ್ ಬಿಐ ನಿವೃತ್ತ ಮ್ಯಾನೇಜರ್ ಆಗಿದ್ದ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಮೃತರ ಅಂತ್ಯಕ್ರಿಯೆ ನಗರದಲ್ಲೇ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಇದನ್ನೂ ಓದಿರಿ ಜ್ಯುಬಿಲಿಯೆಂಟ್ ಕಾರ್ಖಾನೆಗೆ ಕರೊನಾ ಸೋಂಕು ತಗುಲಿದ ಪ್ರಕರಣ: ತನಿಖೆಯಲ್ಲಿ ಮೂರು ಕಾರಣಗಳು ಸ್ಪಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts