More

    ಕೋಡಂಬಹಳ್ಳಿಯಲ್ಲಿ ಕೊನೆಗೂ ಆಂಬುಲೆನ್ಸ್ ನಿಲುಗಡೆ: ಅವಘಡದ ವೇಳೆ ಪರದಾಡಿದ್ದ ಜನ

    ಚನ್ನಪಟ್ಟಣ: ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಕೋಡಂಬಹಳ್ಳಿಯಲ್ಲಿ ಕೊನೆಗೂ 108 ಆಂಬುಲೆನ್ಸ್ ನಿಲುಗಡೆ ಮಾಡಲಾರಂಭಿಸಿದೆ.
    ತಾಲೂಕಿಗೆ ಮೂರು ಆಂಬುಲೆನ್ಸ್‌ಗಳನ್ನು ಆರೋಗ್ಯ ಇಲಾಖೆ ಮಂಜೂರು ಮಾಡಿತ್ತಾದರೂ ಗ್ರಾಮೀಣ ಭಾಗಕ್ಕೆ ಮಂಜೂರು ಮಾಡಿದ್ದ ಆಂಬುಲೆನ್ ಅನ್ನು ನಗರ ಪ್ರದೇಶದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಸಕಾಲಕ್ಕೆ ಸೇವೆ ಸಿಗದೆ ಕೋಡಂಬಳ್ಳಿಯ ರೋಗಿಯೊಬ್ಬರು ಸಾವಿಗೀಡಾಗಿದ್ದ ಹಿನ್ನೆಲೆಯಲ್ಲಿ ವಿಜಯವಾಣಿ ಜ.23ರ ಸಂಚಿಕೆಯಲ್ಲಿ ‘ಸಮಯಕ್ಕಿಲ್ಲದ 108 ಸೇವೆ ವ್ಯರ್ಥ’ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು.

    ಎಚ್ಚೆತ್ತ ಆರೋಗ್ಯ ಇಲಾಖೆ, ಕೋಡಂಬಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ಆಂಬುಲೆನ್ಸ್ ನಿಲುಗಡೆಗೆ ಸೂಚಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ಮೇರೆಗೆ ಕಳೆದ ಮಂಗಳವಾರದಿಂದ ಆಂಬುಲೆನ್ಸ್ ಆಸ್ಪತ್ರೆ ಮುಂಭಾಗ ನಿಲ್ಲುತ್ತಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಕೋರಿಕೆಗೆ ಕೊನೆಗೂ ಮನ್ನಣೆ ದೊರೆತಿದೆ.

    ಹಗಲು ವೇಳೆ ಮಾತ್ರ ನಿಲುಗಡೆ: ಕೋಡಂಬಹಳ್ಳಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7ರವರೆಗೆ ಮಾತ್ರ ಆಂಬುಲೆನ್ಸ್ ನಿಲುಗಡೆ ಮಾಡುತ್ತಿದೆ. ಸಿಬ್ಬಂದಿ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸೌಲಭ್ಯ ಕಲ್ಪಿಸಿ ರಾತ್ರಿ ವೇಳೆಯೂ ಆಂಬುಲೆನ್ಸ್ ಸೇವೆ ಸಿಗುವಂತೆ ಮಾಡಬೇಕಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

    ಕೋಡಂಬಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು 9 ತಿಂಗಳಿಂದ ಸಮಸ್ಯೆ ಅನುಭವಿಸುತ್ತಿದ್ದರು. ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಈ ಬಗ್ಗೆ ವರದಿ ಮಾಡಿ ಸಂಬಂಧಿಸಿದವರನ್ನು ಎಚ್ಚರಿಸಿ ಆಂಬುಲೆನ್ಸ್ ನಿಲುಗಡೆ ಮಾಡುವಂತೆ ಮಾಡಿದ ವಿಜಯವಾಣಿಗೆ ಅಭಿನಂದನೆಗಳು.
    ಕೆ.ಎಸ್.ನಾಗರಾಜು, ಕೋಡಂಬಹಳ್ಳಿ ನಿವಾಸಿ

    ಕೋಡಂಬಹಳ್ಳಿಯಲ್ಲಿ ಆಂಬುಲೆನ್ಸ್ ನಿಲುಗಡೆ ಮಾಡುವಂತೆ ಸೂಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ಮಾಡುವುದಿಲ್ಲ. ಸಿಬ್ಬಂದಿಗೆ ರಾತ್ರಿ ವೇಳೆ ತಂಗಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
    ಡಾ. ನಿರಂಜನ್, ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts