More

    ವಿವಿಧ ಗ್ರಾಮಗಳಲ್ಲಿ ಜಾನುವಾರು ಸಮೀಕ್ಷೆ

    ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾರಂಭ ಹಿನ್ನೆಲೆ

    ಗೋಣಿಕೊಪ್ಪ : ಕೂಡಿಗೆ ಹಾಲು ಡೇರಿ ವಿಸ್ತರಣಾ ಅಧಿಕಾರಿ ವೀಣಾ ಶುಕ್ರವಾರ ಹೊಸೂರು ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳ ಸಮೀಕ್ಷೆ ನಡೆಸಿದರು.
    ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ನಿರ್ದೇಶನದಂತೆ ಅಮ್ಮತ್ತಿ ನಾಡು, ಹೊಸೂರು ಸಂಘದ ಕಚೇರಿಗೆ ಭೇಟಿ ನೀಡಿದರು. ನೋಂದಣಿ ಸಲುವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಒಂದು ವಿಶೇಷ ಗ್ರಾಮ ಸಭೆ ಕರೆಯುವಂತೆ ತಿಳಿಸಿದರು. ಸಂಘ ನೋಂದಣಿ ನಂತರ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
    ಹೊಸೂರು ಗ್ರಾಪಂ ಮಾಜಿ ಅಧ್ಯಕ್ಷ ಕೊಲ್ಲಿರ ಗೋಪಿ ಚಿಣ್ಣಪ್ಪ ಮಾತನಾಡಿ, ಅಮ್ಮತಿ ಹೋಬಳಿಯ ಸುಮಾರು ಎಂಟು ಗ್ರಾಮಗಳಿಂದ ಅಂದಾಜು 450 ಲೀ.ನಷ್ಟು ಹಾಲು ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಸಂಗ್ರಹಣೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹಾಲು ಸಂಗ್ರಹ ಕೇಂದ್ರಗಳನ್ನು ಹೆಚ್ಚುವರಿಯಾಗಿ ಅಮ್ಮತ್ತಿ ಮತ್ತು ಕೈಕೇರಿ ಗ್ರಾಮಗಳಲ್ಲಿಯೂ ಆರಂಭಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
    ಪಿಡಿಒ ಶ್ರೀನಿವಾಸ್, ಪಶುವೈದ್ಯಾಧಿಕಾರಿ ಡಾ.ಪ್ರಸನ್ನ, ಗ್ರಾಮಸ್ಥ ಕೊಲ್ಲಿರ ಧರ್ಮಜ, ಸಂಘದ ನಿಯೋಜಿತ ಅಧ್ಯಕ್ಷ ತುಷಾರ್ ಕುಲಕರ್ಣಿ, ಗೌರವ ಕಾರ್ಯದರ್ಶಿ ಸುಭಾಷಿಣಿ, ಸಹ ಕಾರ್ಯದರ್ಶಿ ಕೊಲ್ಲಿರ ಜಯ ಉತ್ತಯ್ಯ, ನಿರ್ದೇಶಕರಾದ ಪಟ್ಟಡ ಧನು ಉತ್ತಯ್ಯ, ಮಂಡೇಪಂಡ ಶ್ಯಾಮ್, ಸಂದೀಪ್, ಕತ್ರಿಕೊಲ್ಲಿ ಚಂದ್ರಶೇಖರ್, ಮುರುವಂಡ ತಮ್ಮಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts