More

    ಕೊಡಗು ಬಾಸ್ಕೆಟ್‌ಬಾಲ್ ಆಟಗಾರರ ಹರಾಜು

    ಗೋಣಿಕೊಪ್ಪ: ಕೊಡಗು ಜಿಲ್ಲೆ ಕ್ರೀಡೆಗಳ ತವರೂರು. ಹಾಕಿ, ಕ್ರಿಕೆಟ್, ಫುಟ್ಬಾಲ್, ಇದೀಗ ಬಾಸ್ಕೆಟ್‌ಬಾಲ್ ಲೀಗ್ ಪಂದ್ಯಾಟಕ್ಕೆ ವಿರಾಜಪೇಟೆ ನಗರ ಅಣಿಗೊಳ್ಳುತ್ತಿದೆ.

    ಕೊಡಗು ವೆಲ್ಫೇರ್ ಫೌಂಡೇಶನ್ ವಿರಾಜಪೇಟೆ ವತಿಯಿಂದ ಮುಂದಿನ ಜನವರಿ ಮೊದಲ ವಾರದಲ್ಲಿ ನಗರದ ಪ್ರಗತಿ ಶಾಲಾ ಮೈದಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಲೀಗ್ ಪಂದ್ಯಾಟದ ಅಂಗವಾಗಿ ವಿರಾಜಪೇಟೆ ನಗರದ ಹೊರ ವಲಯ ಪೆರುಂಬಾಡಿ ಪೊಲೀಸ್ ಚೆಕ್ ಪೋಸ್ಟ್ ಬಳಿಯ ಲೇಖ್ ವ್ಯೆ ಹೋಟೆಲ್ ಸಭಾಂಗಣದಲ್ಲಿ ಬಾಸ್ಕೆಟ್‌ಬಾಲ್ ಆಟಗಾರರ ಬಿಡ್ (ಹರಾಜು ಪ್ರಕ್ರಿಯೆ) ಭಾನುವಾರ ನಡೆಯಿತು.

    ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ.ತಿಮ್ಮಯ್ಯ ಮಾತನಾಡಿ, ಬಾಸ್ಕೆಟ್‌ಬಾಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆದಿದೆ. ಪ್ರಗತಿ ಹೊಂದುತ್ತಿರುವ ಆಟಗಾರರಿಗೆ ದೇಶೀಯ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಅವಕಾಶಗಳಿವೆ. ಕೊಡಗು ಜಿಲ್ಲೆಯಲ್ಲಿ ಬಾಸ್ಕೆಟ್‌ಬಾಲ್‌ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲೆಗೆ ಸೀಮಿತವಾಗಿರುವ ಆಟಗಾರರು ಹಾಗೂ ಮೂಲ ಜಿಲ್ಲೆಯವರಾಗಿದ್ದು ಪರ ಊರುಗಳಲ್ಲಿ ನೆಲೆಸಿರುವ ಆಟಗಾರರನ್ನು ಭಾಗವಹಿಸುವಂತೆ ಆಯೋಜಕರು ನಿಯಮಗಳನ್ನು ಮಾಡಿದ್ದಾರೆ. ಬಾಸ್ಕೆಟ್‌ಬಾಲ್ ಲೀಗ್ ಮೂಲಕ ಪ್ರತಿಭೆಗಳನ್ನು ಗುರುತಿಸುವುದಾಗಿದೆ. ಆಟಗಾರರಿಗೆ ಕ್ರೀಡೆಯ ಮೂಲಕ ಉದ್ಯೋಗ ಹೊಂದುವುದಕ್ಕೂ ಪಂದ್ಯಾಟ ವೇದಿಕೆಯಾಗಲಿದೆ ಎಂದು ಹೇಳಿದರು.

    ಪಂದ್ಯಾಟದ ಆಯೋಜಕ ಇರ್ಷಾದ್ ಮಾತನಾಡಿ, ಜಿಲ್ಲೆಯಲ್ಲಿ ಬಾಸ್ಕೆಟ್‌ಬಾಲ್ ಕ್ರೀಡೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಪಂದ್ಯಾಟವನ್ನು ವಿರಾಜಪೇಟೆ ಪ್ರಗತಿ ಶಾಲಾ ನೂತನ ಬಾಸ್ಕೆಟ್‌ಬಾಲ್ ಕ್ರೀಡಾಂಗಣದಲ್ಲಿ ಅಯೋಜಿಸಲಾಗುತ್ತಿದೆ. ಒಟ್ಟು 66 ಕ್ರೀಡಾ ಪಟುಗಳು, ಆರು ತಂಡಗಳಾಗಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಮ್ಯೇಡ್ ಎನ್ಸ್ ಮಡಿಕೇರಿ, ಬ್ಲ್ಯಾಕ್ ಕೋಬ್ರಸ್ ವಿರಾಜಪೇಟೆ, ಎವೇಂಜರ್ಸ್ ವಿರಾಜಪೇಟೆ, ರಾಯಲ್ ರಜಥಾದ್ರಿಸ್ ವಿರಾಜಪೇಟೆ, ಕಾವೇರಿಯನ್ಸ್ ಗೋಣಿಕೊಪ್ಪಲು, ಟೀಗಲ್ ಹೂಪ್ಸ್ಟರ್ಸ ಪೊನ್ನಂಪೇಟೆ ತಂಡಗಳು ಭಾಗವಹಿಸಲಿವೆ. ಆರು ತಂಡಗಳು ಒಟ್ಟು 66 ಆಟಗಾರರನ್ನು ಬಿಡ್ಡಿಂಗ್ ಮೂಲಕ ತಲಾ ಒಂದು ತಂಡಕ್ಕೆ 11 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಹೇಳಿದರು.

    ಕಾರ್ಯಕ್ರಮ ನಿರೂಪಕರಾದ ಅಸೀಫ್ ಅಮ್ಮತ್ತಿ, ಚಿಮ್ಮಣಮಾಡ ಸೋಮಣ್ಣ, ಮಾದಂಡ ಶುಸ್ಮ ತಿಮ್ಮಯ್ಯ, ನೌಷಾದ್, ಆರು ತಂಡಗಳ ಮಾಲೀಕರು, ಕ್ರೀಡಾಪಟುಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts