More

    ಕೊಚ್ಚಿಹೋಗುವ ಭೀತಿಯಲ್ಲಿ ಜೀರಾಳ ಕಲ್ಗುಡಿಯ ಮಿನಿಸೇತುವೆ

    ಗಂಗಾವತಿ: ತಾಲೂಕಿನ ಜೀರಾಳ ಕಲ್ಗುಡಿಯ ಬಳಿ ವಿತರಣೆ ಕಾಲುವೆ ಸಂಪರ್ಕ ರಸ್ತೆಯ ಮಿನಿಸೇತುವೆ (ಸಿಡಿ) ಶಿಥಿಲಾವಸ್ಥೆಗೆ ತಲುಪಿದ್ದು, ಕೊಚ್ಚಿ ಹೋಗುವ ಹಂತಕ್ಕೆ ತಲುಪಿದೆ.


    ಮುಖ್ಯ ಕಾಲುವೆಯಿಂದ ಶ್ರೀರಾಮನಗರದ ಟೇಲ್ಯಾಂಡ್‌ವರೆಗೂ ನೀರು ವಿತರಿಸುವ 25ನೇ ವಿತರಣೆ ಕಾಲುವೆಯಿದ್ದು, ಹೊಸ ಕಲ್ಗುಡಿ ಸಮೀಪದಲ್ಲಿ ಮಿನಿ ಸೇತುವೆ (ಸಿಡಿ)ಯಿದೆ. ಅತ್ಯಂತ ಹಳೆಯದಾದ ಸಿಡಿ ಒಳಭಾಗದ ಕಲ್ಲು ಕಿತ್ತುಹೋಗಿದ್ದು, ನವಲಿ ಮತ್ತು ಗಂಗಾವತಿ ಸಂಪರ್ಕದ ಪ್ರಮುಖ ರಸ್ತೆಯ ಸಿಡಿಯಾಗಿದೆ. ರಸ್ತೆ ದುರಸ್ತಿ ಕಾಮಗಾರಿಗಾಗಿ ಟಿಪ್ಪರ್ ಸೇರಿ ಭಾರಿ ಗಾತ್ರದ ಯಂತ್ರಗಳು ಸಂಚರಿಸುತ್ತಿದ್ದು, ಗುತ್ತಿಗೆದಾರರು ಶಿಥಿಲಗೊಂಡ ಸಿಡಿ ಪ್ರದೇಶದಲ್ಲಿ ಮರಮ್ ಹಾಕಿ ಸಂಚರಿಸುತ್ತಿರುವುದರಿಂದ ಮತ್ತಷ್ಟು ಸಡಿಲಗೊಳ್ಳುತ್ತಿದೆ.

    ಇದನ್ನೂ ಓದಿ: ಕೊಚ್ಚಿಹೋಗುವ ಭೀತಿಯಲ್ಲಿ ಜೀರಾಳ ಕಲ್ಗುಡಿಯ ಮಿನಿಸೇತುವೆ

    ವಿತರಣೆ ಕಾಲುವೆಗೆ ನೀರು ಹರಿಬಿಟ್ಟರೆ ಕಾಲುವೆ ಸಿಡಿ ಕೊಚ್ಚಿ ಹೋಗುವ ಸಾಧ್ಯತೆಗಳಿದ್ದು, ಸುತ್ತಲಿನ ಭತ್ತದ ಗದ್ದೆಗಳು ಜಲಾವೃತವಾಗುವ ಸಾಧ್ಯತೆಗಳಿವೆ. ಸ್ಥಳೀಯ ಯುವಕರು ವ್ಯಾಟ್ಸಾಪ್ ಮೂಲಕ ಸಿಡಿ ವಾಸ್ತವಿಕತೆಯನ್ನು ಜಲಸಂಪನ್ಮೂಲ ಸೇರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾಲುವೆಗೆ ನೀರು ಹರಿಸುವ ಮುನ್ನವೇ ದುರಸ್ತಿ ಕೈಗೊಳ್ಳುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts