More

    ಶಿಕ್ಷಣದ ಜತೆ ವಾಸ್ತವಾಂಶ ಅರಿಯಿರಿ

    ಸಾಗರ: ಆಧುನಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನಟ್ಟಿದರೆ ಉಪಯೋಗವಿಲ್ಲ. ದೇಶದಲ್ಲಿನ ವಿದ್ಯಮಾನಗಳನ್ನು ಗಮನಿಸಬೇಕು ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.
    ಬುಧವಾರ ಸಾಗರದ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿವಮೊಗ್ಗ ನೆಹರು ಯುವ ಕೇಂದ್ರ, ಎನ್‌ಎಸ್‌ಎಸ್, ಜ್ಞಾನಸಾಗರ ಪ್ಯಾರಾ ಮೆಡಿಕಲ್, ಹ್ಯೂಮಾನಿಟಿ ಯೂತ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಅನೇಕ ಕನಸುಗಳನ್ನು ಕಟ್ಟಿಕೊಂಡು ಶಿಕ್ಷಣ ಪಡೆಯುತ್ತೀರಿ. ಶಿಕ್ಷಣದ ಜತೆ ವಾಸ್ತವಾಂಶ ಅರಿತುಕೊಂಡರೆ ಭವಿಷ್ಯದ ಬದುಕು ಸುಭದ್ರವಾಗಿರುತ್ತದೆ. ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಂಡು ಸ್ಪಂದಿಸುವ ಮನಸ್ಥಿತಿ ಕಲಿಸುತ್ತದೆ ಎಂದರು.
    ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಚ್.ಪ್ರಕಾಶ್ ಮಾತನಾಡಿ, ಯುವ ಸಂಸತ್ ಮೂಲಕ ಸ್ಥಳೀಯ ಸಂಸ್ಥೆಗಳಿAದ ಹಿಡಿದು ವಿಧಾನಸಭೆ, ಲೋಕಸಭೆವರೆಗೂ ನಡೆಯುವ ಚರ್ಚೆಗಳ ಕುರಿತು ಮಾಹಿತಿ ಪಡೆಯಬಹುದು. ಸಮಸ್ಯೆಗಳಿಗೆ ನಾವು ವಿದ್ಯಾರ್ಥಿ ದಿಸೆಯಲ್ಲಿ ಹೇಗೆ ಸ್ಪಂದಿಸಬಹುದು ಎನ್ನುವುದನ್ನು ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡುತ್ತಾರೆ. ಇಲ್ಲಿ ಕಲಿತಿದ್ದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಜತೆಗೆ ಇನ್ನೊಬ್ಬರಿಗೂ ತಿಳಿಸಲು ಸಲಹೆ ನೀಡಿದರು.
    ತಹಸೀಲ್ದಾರ್ ಮಂಜುಳಾ ಎಸ್.ಭಜಂತ್ರಿ, ಸಬ್‌ಇನ್ಸ್ಪೆಕ್ಟರ್ ಕೆ.ಟಿ.ಮಹೇಶ್‌ಕುಮಾರ್, ಪ್ರಮುಖರಾದ ಉಲ್ಲಾಸ್, ಮಾರ್ತಾಂಡಪ್ಪ, ಮಹಾಬಲೇಶ್ವರ್, ವಿರೇಶ್ ನಾಯ್ಕ್, ತಾಜಾವುದ್ದೀನ್ ಖಾನ್, ಪಂಚಾಕ್ಷರಯ್ಯ, ಗಿರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts