More

    ಮಕ್ಕಳ ನ್ಯೂನ್ಯತೆಗಳನ್ನು ಅರಿತು ಪಾಠ ಮಾಡಿ

    ಸಿಂಧನೂರು; ಪ್ರೌಢಶಾಲಾ ತರಗತಿಗಳಿಗೆ ವಿಭಿನ್ನ ಸಾಮರ್ಥ್ಯದ ಮಕ್ಕಳು ದಾಖಲಾಗುತ್ತಾರೆ. ಅಂತಹ ಮಕ್ಕಳ ಕಲಿಕಾ ಕೊರತೆಗಳನ್ನು ಕಂಡುಕೊಂಡು ಬೋಧನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ತಿಳಿಸಿದರು.

    ಇದನ್ನೂ ಓದಿ: ಪ್ರಜ್ಞಾವಂತನಾದರೂ ತಪ್ಪದ ನ್ಯೂನ್ಯತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಮತಾ ಎನ್.ಶೆಟ್ಟಿ ಅಭಿಮತ

    ನಗರದ ಆದರ್ಶ ವಿದ್ಯಾಲಯಲದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಸಿಂಧನೂರು ತಾಲೂಕಾ ಆಂಗ್ಲ ಭಾಷಾ ವಿಷಯ ಶಿಕ್ಷಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಪ್ರಯುಕ್ತ ಇಂಗ್ಲಿಷ ಭಾಷೆ ಶಿಕ್ಷಕರಿಗೆ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

    ಪ್ರೌಢಶಾಲೆಯ ಎಲ್ಲ ಸ್ಥರದ ಮಕ್ಕಳನ್ನು ಕಲಿಕೆಯ ಮುಖ್ಯವಾಹಿನಿಗೆ ತರುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ. ಕಲಬುರಗಿ ಆಯುಕ್ತರ ನಿರ್ದೇಶನ ಮತ್ತು ವಿಶೇಷ ಕಾಳಜಿಯ ಮೇರೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ತಾಲೂಕಿನ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿಗಳು ಮತ್ತು ಗುಂಪು-ಅಧ್ಯಯನ ಚಟುವಟಿಕೆಗಳು ತುಂಬಾ ಯಶಸ್ವಿಯಾಗಿ ನಡೆಯುತ್ತಿವೆ.

    ಇದಕ್ಕೆ ಆಯಾ ಶಾಲೆಗಳ ಪಾಲಕರು, ಮುಖ್ಯ ಶಿಕ್ಷಕರು, ಸಹಶಿಕ್ಷಕರ ಮತ್ತು ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದರು. ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆಯಲು ಎಲ್ಲ ಶಿಕ್ಷಕರು ಮತ್ತು ಸಮುದಾಯ ಸಹಕರಿಸಬೇಕು.

    ಕಲಿಕಾ ಕೊರೆತೆಗೆ ಕಾರಣಗಳನ್ನು ಕಂಡುಹಿಡಿದು ಸೂಕ್ತ ಪರಿಹಾರಗಳನ್ನು ಹುಡುಕುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ. ಶಿಕ್ಷಣ ಹಕ್ಕು ಕಾಯಿದೆ ಜಾರಿಯಾದಾಗಿನಿಂದ ಶಿಕ್ಷಕ ಸಮುದಾಯ ಮತ್ತು ಇಲಾಖೆಯ ಜವಾಬ್ದಾರಿ ಗುರುತರವಾಗಿದೆ. ಇದನ್ನು ಮನಗಂಡು ನಾವೆಲ್ಲಾ ಕಾರ್ಯನಿರ್ವಹಿಸಿಬೇಕಿದೆ ಎಂದು ತಿಳಿಸಿದರು.

    ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಮಲ್ಲಪ್ಪ, ಆಂಗ್ಲ ಭಾಷಾ ಶಿಕ್ಷಕರ ವೇದಿಕೆ ತಾಲೂಕು ಅಧ್ಯಕ್ಷ ಶೇಖರಗೌಡ, ಶಿಕ್ಷಣ ಸಂಯೋಜಕ ಅಮರೇಶ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ, ರವೀಂದ್ರಗೌಡ, ತಾಲೂಕಾ ಖಜಾಂಜಿ ಈರನಗೌಡ, ರಾಜ್ಯ ಪರಿಷತ್ ಸದಸ್ಯ ನಾಗರಾಜ, ಸಂಪನ್ಮೂಲ ವ್ಯಕ್ಯಿಗಳಾದ ನಾಗರಾಜ, ಪ್ರಾನ್ಸಿಸ್ ರೋಸನ್, ಶಾನ್ ತುಮ್ಮಿನಕಟ್ಟಿ, ಭಾಗ್ಯಶ್ರೀ, ಆದರ್ಶ ವಿದ್ಯಾಲಯ ಪ್ರಭಾರಿ ಮುಖ್ಯಶಿಕ್ಷಕ ಹನುಮೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts