More

    ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್​​ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ

    ಬೆಂಗಳೂರು : ಕರೊನಾ ಸೋಂಕಿತರಿಗೆ ಬೆಂಗಳೂರಿನ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಬೆಡ್​ನ ಅವಶ್ಯಕತೆ ಬಿದ್ದರೆ ಏನು ಮಾಡಬೇಕು ? ಯಾರನ್ನು ಸಂಪರ್ಕಿಸಬೇಕು ? ಈ ಪ್ರಶ್ನೆಗಳಿಗೆ ಸರ್ಕಾರದ ಕೋವಿಡ್​ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​(ಇಆರ್​ಟಿ) ಮತ್ತು ಬೆಂಗಳೂರಿನ ಕೋವಿಡ್​ಹೆಲ್ಪ್​​ಲೈನ್ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಬಿಬಿಎಂಪಿ ಖೋಟಾದ ಕೆಳಗೆ ಸರ್ಕಾರಿ /ಖಾಸಗಿ ಆಸ್ಪತ್ರೆಯಲ್ಲಿ ಬೆಡ್​ಅನ್ನು ಬ್ಲಾಕ್​ ಮಾಡಲು, ಈ ಕೆಳಗಿನ ವಿಧಾನವನ್ನು ಪಾಲಿಸಿ.

    1. ಮೊದಲು, ಬೆಡ್​ಗಳ ಲಭ್ಯತೆಯ ಬಗೆಗಿನ ಹಾಲಿ ಸ್ಟೇಟಸ್​ಅನ್ನು ಈ ಲಿಂಕ್ ಬಳಸಿ ಚೆಕ್ ಮಾಡಿ –
    https://covidhelplinebangalore.com/covid-19-beds-availability/

    2. ಎರಡನೆಯದಾಗಿ, ನಿಮ್ಮ ಎಸ್​ಆರ್​ಎಫ್​ ಐಡಿ ಮತ್ತು ಬಿಯು ನಂಬರ್ ರೆಡಿ ಇಟ್ಟುಕೊಳ್ಳಿ.

    RAT ಪರೀಕ್ಷೆ ಅಥವಾ RTPCR ಪರೀಕ್ಷೆಯನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಗೆ ನೀಡಲಾಗುವ 13 ಅಂಕಿಯ ಸಂಖ್ಯೆಯೇ ಎಸ್​ಆರ್​ಎಫ್​ ಐಡಿ. ಪರೀಕ್ಷೆಗಾಗಿ ಸ್ಯಾಂಪಲ್​ಅನ್ನು ಪಡೆದ ನಂತರ ಈ ಎಸ್‌ಆರ್‌ಎಫ್ ಐಡಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್​ಎಂಎಸ್​ ಮೂಲಕ ತಲುಪಿರುತ್ತದೆ ಮತ್ತು ಪರೀಕ್ಷೆಯ ವರದಿಯಲ್ಲಿ ಕೂಡ ಮುದ್ರಿತವಾಗಿರುತ್ತದೆ.

    ಇದನ್ನೂ ಓದಿ: ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ

    ಬಿಯು ಸಂಖ್ಯೆಯು ಬಿಬಿಎಂಪಿ ಜನರೇಟ್ ಮಾಡುವ 6 ಅಂಕಿಯ ವಿಶಿಷ್ಟ ಸಂಖ್ಯೆಯಾಗಿದೆ. ಕೋವಿಡ್​ 19 ಗೆ ಪಾಸಿಟೀವ್ ಬರುವ ರೋಗಿಗಳಿಗೆ ಮಾತ್ರ ಇದು ಜನರೇಟ್ ಆಗುತ್ತದೆ. ಸರ್ಕಾರಿ / ಖಾಸಗಿ ಲ್ಯಾಬ್​ಗಳು​ ಟೆಸ್ಟ್​​ ವಿವರಗಳನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಆಗ ಮಾತ್ರ ಬಿಯು ಸಂಖ್ಯೆ ಉತ್ಪತ್ತಿಯಾಗುತ್ತದೆ. ಆದ್ದರಿಂದ ಪರೀಕ್ಷಾ ಕೇಂದ್ರವು ನಿಮ್ಮ ಪರೀಕ್ಷಾ ವರದಿಯನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದೆ ಎಂದು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಬಿಯು ಸಂಖ್ಯೆ ಸಿಗುವುದಿಲ್ಲ.
    ಬಿಯು ನಂಬರ್ ಸಾಧಾರಣವಾಗಿ ಎಸ್​ಎಂಎಸ್​ ಮೂಲಕ ತಲುಪುತ್ತದೆ. ಒಂದು ವೇಳೆ ಹಾಗೆ ಸಿಗದಿದ್ದಲ್ಲಿ ಬಿಯು ನಂಬರ್ ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ – https://www.covidwar.karnataka.gov.in/service1

    3. ಒಂದು ವೇಳೆ ನಿಮ್ಮ ಬಳಿ ಬಿಯು ನಂಬರ್ ಇಲ್ಲದೆ ತುರ್ತಾಗಿ ಬೆಡ್​ನ ಅವಶ್ಯಕತೆ ಇದ್ದಲ್ಲಿ, 1912 ಅಥವಾ 108 ಕ್ಕೆ ಕರೆ ಮಾಡಿ. ಸಾವಿರಾರು ರೋಗಿಗಳು ಬೆಡ್​ಗಳನ್ನು ಹುಡುಕುತ್ತಿರುವುದರಿಂದ ನೀವು ಹೆಚ್ಚು ಸಮಯ ಕಾಯಬೇಕಾದೀತು. ಆದ್ದರಿಂದ ತಾಳ್ಮೆ ವಹಿಸಿರಿ. ಏತನ್ಮಧ್ಯೆ ಎಸ್​ಆರ್​​ಎಫ್​ ಐಡಿ ಮತ್ತು ಬಿಯು ನಂಬರ್ ಪಡೆಯಲು ಪ್ರಯತ್ನಿಸಿ.

    ಇದನ್ನೂ ಓದಿ: ಹರಿದುಬಂತು ಸಹಾಯ : ದೆಹಲಿ, ಮುಂಬೈ ತಲುಪಿದ ಆಕ್ಸಿಜನ್ ಕಾನ್ಸಂಟ್ರೇಟರ್​ಗಳು

    4. ನಿಮ್ಮ ಬಳಿ ಎಸ್​ಆರ್​ಎಫ್​ ಐಡಿ ಮತ್ತು ಬಿಯು ನಂಬರ್ ರೆಡಿ ಇದ್ದರೆ, ಬಿಬಿಎಂಪಿ ವಾರ್​ ರೂಮ್​ಗೆ ಕರೆ ಮಾಡಿ. ಜೋನ್(ವಲಯ)​ಗಳ ಪ್ರಕಾರ ಬೇರೆ ಬೇರೆ ವಾರ್ ರೂಮ್​ಗಳು ಕಾರ್ಯನಿರ್ವಹಿಸುತ್ತಿವೆ. ಈ ನಂಬರ್​ಗೆ ಕರೆ ಮಾಡಿ ಎಲ್ಲ ವಿವಿರಗಳನ್ನು ನೀಡಿ ಬೆಡ್​​ಗಾಗಿ ಮನವಿ ಮಾಡಿ.
    ನೀವು ಯಾವ ಜೋನ್​ಗೆ ಸೇರುತ್ತೀರಿ ಎಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ -https://bbmp.gov.in/zonalclassification.html

    ಜೋನಲ್ ವಾರ್​ ರೂಮ್ ನಂಬರ್​ಗಳು :-
    ಯಲಹಂಕ ವಲಯ – 9480685964; ನೋಡಲ್ ಅಧಿಕಾರಿ – ಡಾ. ರಶ್ಮಿ – 9632819836
    ಮಹಾದೇವಪುರ ವಲಯ – 08023010101, 08023010102; ನೋಡಲ್ ಅಧಿಕಾರಿ – ಡಾ.ಪ್ರಜ್ಞನ್ 9502322032
    ಬೊಮ್ಮನಹಳ್ಳಿ ವಲಯ – 8884666670; ನೋಡಲ್ ಅಧಿಕಾರಿ – ಡಾ.ಕುಮಾರಸ್ವಾಮಿ 7349552658
    ಆರ್.ಆರ್.ನಗರ ವಲಯ – 08028601050/08028600954; ನೋಡಲ್ ಅಧಿಕಾರಿ – ಡಾ.ಮುರಳಿ 9482224474
    ದಕ್ಷಿಣ ವಲಯ – 8431816718; ನೋಡಲ್ ಅಧಿಕಾರಿ – ಡಾ. ರೆಹಾನ್ 9535586578
    ಪೂರ್ವ ವಲಯ – 7411038024; ನೋಡಲ್ ಅಧಿಕಾರಿ – ಡಾ.ಆಕಾಶ್ 9886959900
    ಪಶ್ಚಿಮ ವಲಯ – 08068248454; ನೋಡಲ್ ಅಧಿಕಾರಿ – ಡಾ.ಯೋಗೇಶ್ 9448550159
    ದಾಸರಹಳ್ಳಿ ವಲಯ – 08028394909; ನೋಡಲ್ ಅಧಿಕಾರಿ – 7204869787

    ಇದನ್ನೂ ಓದಿ: ಕರೊನಾ ರೋಗಿಗಾಗಿ ಮದುವೆ ಮಂಟಪವಾದ ಆಸ್ಪತ್ರೆ… ಪಿಪಿಇ ಕಿಟ್​ನಲ್ಲಿ ವಧು !

    5. ಈ ಮೇಲಿನ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ನಿಮಗೆ ಆಸ್ಪತ್ರೆಯ ಬೆಡ್​ ಸಿಗದಿದ್ದಲ್ಲಿ, https://covidhelplinebangalore.com/covid-19-hospital-bed-request/ ಈ ಫಾರಂಅನ್ನು ಭರ್ತಿ ಮಾಡಿ ಮನವಿ ಸಲ್ಲಿಸಿ. ಬೆಡ್​ ಸಿಕ್ಕೇ ಸಿಗುವುದು ಎಂದು ಗ್ಯಾರಂಟಿ ನೀಡಲಾಗುವುದಿಲ್ಲ. ಆದರೂ ಬೆಂಗಳೂರಿನ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​(ಇಆರ್​ಟಿ) ಸ್ವಯಂಸೇವಕರು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ನಿಮಗೆ ಬೆಡ್ ದೊರಕಿಸಿಕೊಡಲು ಪೂರ್ಣ ಪ್ರಯತ್ನ ಮಾಡುತ್ತಾರೆ.

    ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.100 ರಷ್ಟು ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ನೊಂದಿಗೆ ಎಂಪಾನೆಲ್ ಆಗಿರುವ ಕರೊನಾ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಬೆಡ್​ಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಖೋಟಾದ ಕೆಳಗೆ ದಾಖಲಾತಿಗೆ ತೆರೆದಿವೆ. ಈ ಮೇಲಿನ ವಿಧಾನವನ್ನು ಪಾಲಿಸಿ ಬೆಡ್​ ಪಡೆಯಬಹುದು ಎಂದು ಬೆಂಗಳೂರಿನ ಕೋವಿಡ್ ಹೆಲ್ಪ್​ಲೈನ್ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ www.covidhelplinebangalore.com ನೋಡಿ.

    ಸೋಂಕಿದ್ದರೂ ನೆಗೆಟೀವ್ ! ಸಿಟಿ ಸ್ಕ್ಯಾನ್​ನಲ್ಲಿ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲು

    ಮುಟ್ಟಿನ ಸಮಯದಲ್ಲಿ ಕರೊನಾ ಲಸಿಕೆ ಪಡೆಯಬಹುದೇ ? ಇಲ್ಲಿದೆ ಉತ್ತರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts