More

    ಕೆಎಲ್‌ಇ ಸಂಸ್ಥೆಯ ಸೇವೆ ಅಪಾರ

    ಬೆಳಗಾವಿ: ಮನುಷ್ಯನ ಮೂಲ ಸೌಲಭ್ಯಗಳಲ್ಲಿ ಆರೋಗ್ಯವೂ ಒಂದಾಗಿದ್ದು, ದುರ್ಗಮ ಪ್ರದೇಶಗಳಲ್ಲೂ ತುರ್ತು ಸಂದರ್ಭ ವೈದ್ಯಕೀಯ ಸೇವೆ ಒದಗಿಸಲು ಆಸ್ಪತ್ರೆಗಳು ಕಾರ್ಯಪ್ರವೃತ್ತವಾಗಿರಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

    ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನರ ಮತ್ತು ರಕ್ತನಾಳ ಕಾಯಿಲೆಗಳಿಗೆ ತೆರೆದ ಶಸಚಿಕಿತ್ಸೆ ಬದಲಾಗಿ ಅತ್ಯಾಧುನಿಕ ರೀತಿಯಲ್ಲಿ ಚಿಕಿತ್ಸೆ ನೀಡಲು ಸ್ಥಾಪಿಸಿದ ‘ಬೈ ಪ್ಲೇನ್ ಕ್ಯಾಥಲ್ಯಾಬ್’ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ಆರೋಗ್ಯ ಕ್ಷೇತ್ರವೂ ಅನೇಕ ಆವಿಷ್ಕಾರಗಳೊಂದಿಗೆ ಜನರ ಸೇವೆಗೆ ಲಭ್ಯವಾಗುತ್ತಿದೆ ಎಂದರು.
    ಈ ಹಿಂದೆ ಅನೇಕ ಶಸಚಿಕಿತ್ಸೆಗಳಿಗೆ ಶರೀರದ ಕೆಲ ಭಾಗ ಗಾಯಗೊಳಿಸಬೇಕಾಗುತ್ತಿತ್ತು. ಇಂದು ಅದೇ ಶಸಚಿಕಿತ್ಸೆಯನ್ನು ಒಂದು ರಂಧ್ರದ ಮೂಲಕ ಮಾಡಲಾಗುತ್ತಿರುವುದು ವೈದ್ಯಕೀಯ ಲೋಕದ ವಿಸ್ಮಯವಾಗಿದೆ. ಈ ಭಾಗದ ಜನರಿಗೆ ನೂತನ ಆರೋಗ್ಯ ಸೇವೆ ಒದಗಿಸಲು ಸದಾ ಹಾತೊರೆಯುವ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಈಗ ‘ಬೈ ಪ್ಲೇನ್ ಕ್ಯಾಥಲ್ಯಾಬ್’ ಸ್ಥಾಪನೆ ಮೂಲಕ ಆರೋಗ್ಯ ರಕ್ಷಣೆಗೆ ನಾವು ಬದ್ಧ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದರು.

    ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕ್ಯಾಥಲ್ಯಾಬ್ ಸ್ಥಾಪಿಸಲಾಗಿದೆ. ಇಂಟರ್‌ವೆನ್ಶನಲ್ ರೆಡಿಯಾಲಜಿ ಕಾರ್ಯವಿಧಾನಗಳು ಸರಳವಾಗಿವೆ. ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾದ ಜನರಿಗೂ ಈ ಸೌಲಭ್ಯ ಲಭ್ಯವಾಗಲಿದೆ ಎಂದರು.

    ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ. ವಿ.ಐ. ಪಾಟೀಲ, ಕೆಎಲ್‌ಇ ವಿವಿ ಕುಲಪತಿ ಡಾ.ವಿವೇಕ ಸಾವೋಜಿ, ಜೆಎನ್‌ಎಂಸಿ ಪ್ರಾಚಾರ್ಯೆ ಡಾ. ಎನ್.ಎಸ್. ಮಹಾಂತಶೆಟ್ಟಿ, ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಡಾ. ಆರ್.ಬಿ. ನೇರ್ಲಿ, ಡಾ. ವಿ.ಡಿ. ಪಾಟೀಲ, ಡಾ.ರಾಜೇಶ ಪವಾರ, ಡಾ. ವಿ.ಎಂ. ಪಟ್ಟಣಶೆಟ್ಟಿ, ಡಾ. ನವೀನ ಮೂಲಿಮನಿ, ಡಾ. ಅಭಿನಂದನ ರೂಗೆ ಉಪಸ್ಥಿತರಿದ್ದರು. ಬಳಿಕ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಸಚಿವ ಜೋಶಿ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts