More

    ಜೆ.ಟಿ.ಕಾಲೇಜಿನಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ಇತಿಹಾಸ ಗೊತ್ತಿಲ್ಲದವನು ಇತಿಹಾಸ ಸೃಷ್ಠಿಸಲು ಸಾಧ್ಯವಿಲ್ಲ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
    ನಗರದ ಕೆ.ಎಲ್​.ಇ. ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಗುರು ಮುಂದೆ ಗುರಿ ಇದ್ದರೆ ಯಶಸ್ಸು ಸಾಧ್ಯ. ಅವಕಾಶಗಳನ್ನು ಬೆನ್ನಟ್ಟಿ ಹೋದರೆ ಯಶಸ್ಸಿನ ಮಾರ್ಗ ದೊರೆಯುತ್ತದೆ. ವಿದ್ಯಾಥಿರ್ಗಳಲ್ಲಿ ವಿನಯ, ವಿಧೇಯತೆ, ಕಠಿಣ ಪರಿಶ್ರಮ ಇದ್ದು ಗುರುಗಳು ತೋರಿದ ಮಾರ್ಗದಲ್ಲಿ ನಡೆದರೆ ಸಾಧನೆಯ ಶಿಖರ ಏರಬಹುದು. ಈಗೀನ ಯುವ ಸಮೂಹ ತಂತ್ರಜ್ಞಾನಕ್ಕೆ ಮೊರೆ ಹೋಗಿ ತಮ್ಮ ಅಮೂಲ್ಯ ಸಮಯವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನವನ್ನು ನಿಯಮಿತವಾಗಿ ಬಳಸಿಬೇಕು.ನಮ್ಮ ಏಳ್ಗೆಗೆ ಪೂರಕವಾಗಿ ತಂತ್ರಜ್ಞಾನವನ್ನು ಬಳಸಿದರೆ ಯಾವ ಅಪಾಯವೂ ಇಲ್ಲ ಎಂದರು.
    ಮಹಾವಿದ್ಯಾಲಯದ ಮಾಜಿ ಸ್ಥಾನಿಕ ಮಂಡಳಿ ಕಾರ್ಯಾಧ್ಯ ಎಚ್​. ವೈ. ದೇಸಾಯಿಗೌಡರ ಮಾತನಾಡಿ, ಯುವ ಸಮೂಹ ನಮ್ಮ ದೇಶದ ಕ್ರೀಡೆ ಹಾಗೂ ಸಂಸತಿಯ ಇತಿಹಾಸದ ಕುರಿತು ಅರಿವನ್ನು ಪಡೆಯಬೇಕು. ಜ್ಞಾನ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಮಸ್ತಕಕ್ಕೆ ಸೇರಿ ಸಾಧನೆಯ ಕಡೆ ಮುನ್ನಗ್ಗಬೇಕು. ಸಾಧನೆ ಎಂಬುದು ದೀರ್ಘಾವಧಿ ಪ್ರಕ್ರಿಯಾಯಾಗಿದೆ. ಕಠಿಣ ಪರಿಶ್ರಮ ತಾಳ್ಮೆ ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿದರೆ ಆ ಕೆಲಸಕ್ಕೆ ಪ್ರತಿಲ ದೊರೆಯುತ್ತದೆ ಎಂದು ಹೇಳಿದರು
    ಈಶಣ್ಣ ಮುನವಳ್ಳಿ ಅಧ್ಯತೆ ವಹಿಸಿ ಮಾತನಾಡಿದರು. ಪ್ರೊ. ಪಿ. ಜಿ.ಪಾಟೀಲ, ಬಿ. ಜಿ. ಶಳ್ಳಿಕೇರಿ, ಪ್ರೊ. ಗಿರಿಧರ್​ ಕೆ. ಆರ್​, ಡಾ. ನಾಗರಾಜ ಬಳಿಗೇರ, ಬಿ. ಆರ್​. ಚಿನಗುಂಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts