More

    ಜನಪದ ಸಾಹಿತ್ಯವು ಮಾನವೀಯ ಮೌಲ್ಯಗಳ ವಾಹಕ: ಪ್ರೊ. ಸಂಕನೂರು

    ವಿಜಯವಾಣಿ ಸುದ್ದಿಜಾಲ ಗದಗ
    ಜನಪದ ಸಾಹಿತ್ಯವು ಮಾನವೀಯ ಮೌಲ್ಯಗಳನ್ನು ಬಿತ್ತುವ ಮಹತ್ವದ ಸಾಧನವಾಗಿದ್ದು, ಇದನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬ ವಿದ್ಯಾಥಿರ್ಯೂ ಜನಪದ ವಿವಿಧ ಪ್ರಕಾರಗಳನ್ನು ತರಬೇತಿ ಪಡೆದು ಇಂತಹ ಸ್ಪರ್ದೆಗಳಲ್ಲಿ ಪ್ರದಶಿರ್ಸುವ ಮೂಲಕ ಕಣ್ಮರೆಯಾಗುತ್ತಿರುವ ಸಂಸತಿಯನ್ನು ಕಾಪಾಡಬೇಕು ಎಂದು ವಿಧಾನಪರಿಷತ್​ ಸದಸ್ಯ ಪ್ರೊ. ಎಸ್​. ವಿ. ಸಂಕನೂರು ಹೇಳಿದರು.
    ನಗರದ ಕೆ.ಎಲ್​.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಂಭ್ರಮ 50ರ ನಿಮಿತ್ಯ ಮಂಗಳವಾರ ಹಮ್ಮಿಕೊಂಡಿದ್ದ ಜನಪದ ಸಮೂಹ ನೃತ್ಯ ಮತ್ತು ವಾಧ್ಯವಾದನ ಸ್ಪರ್ದೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರತಿ ಕಾಲೇಜುಗಳಲ್ಲಿ ಜಾನಪದ ಸ್ಪರ್ಧೆಗಳನ್ನು ನಡೆಸಿದರೆ ವಿದ್ಯಾಥಿರ್ಗಳಿಗೆ ನೆಲಮೂಲದ ಸತ್ವವು ಗೊತ್ತಾಗುತ್ತದೆ. ವಿದ್ಯಾಥಿರ್ಗಳು ಜಾನಪದದತ್ತ ಒಲವು ತೋರಿಸಿದರೆ ಬಹುತೇಕ ದುಶ್ಚಟಗಳು ಕಡಿಮೆ ಆಗುತ್ತವೆ ಎಂದರು.
    ಕೆ.ಎಲ್​.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್​. ಐ. ಮುನವಳ್ಳಿ ಮಾತನಾಡಿ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಜಾನಪದ ಸೊಗಡು ವಿಶೇಷ ಆಗಿರುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಈ ಜಾನಪದ ತೆರೆಮರೆಗೆ ಸರಿಯುತ್ತಿದೆ. ಜನಪದವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಅರಿವು ಮೂಡಿಸುವ ಜೊತೆಗೆ ಅದರ ದಾಖಲೀಕರಣವು ಅಗತ್ಯ. ಅದಕ್ಕಾಗಿ ಗ್ರಾಮಗಳಲ್ಲಿ ದೊರೆಯುವ ಪ್ರಾಚಿನ ವಸ್ತುಗಳು, ಗಾದೆ, ಒಗಟು, ಒಡಪು, ಅಡುಗೆ, ವೈದ್ಯ, ನಂಬಿಕೆ, ಹಬ್ಬ ಹರಿದಿನ, ಜನಪದ ಕಥೆ, ವೇಷಭೂಷಣ, ವೃತ್ತಿ, ಬದುಕು ಕುರಿತು ದಾಖಲೀಕರಣ ಕಾರ್ಯವನ್ನು ವಿದ್ಯಾಥಿರ್ಗಳು ನಡೆಸಬೇಕು ಎಂದರು.
    ಹಿರಿಯ ಜಾನಪದ ತ ರಾಮು ಮೂಲಗಿ ಮಾತನಾಡಿ, ಸಮುದಾಯ ಮತ್ತು ಶ್ರಮ ಆಧಾರಿತ ಕಲೆಗಳು ತೆರೆಮರೆಗೆ ಸರಿಯುತ್ತಿವೆ. ಇಂತಹ ಸನ್ನಿವೇಶದಲ್ಲಿ ನೆಲದ ಸಂಸತಿಯನ್ನು ಬಿಂಬಿಸುವ ಮೂಲ ಜಾನಪದ ಕಲೆಗಳ ಉಳಿವಿಗಾಗಿ ಶತ ಪ್ರಯತ್ನ ನೆಡಸಬೇಕು. ಸದ್ಯ ಖೋಟಾ ಜಾನಪದವೇ ಮೂಲ ಜಾನಪದ ಎಂಬಂತಾಗಿದೆ. ಸಿನಿಮಾ ಸೇರಿದಂತೆ ದೃಶ್ಯ ಮಾಧ್ಯಮಗಳು ಅದಕ್ಕೆ ಒತ್ತು ನೀಡುತ್ತಿವೆ. ಯುವಜನರು ಸಿನಿಮಾ ಹಾಡುಗಳು, ಪಾಶ್ಚಿಮಾತ್ಯ ಸಂಗೀತ ಸೇರಿದಂತೆ ವಿವಿಧ ರೀತಿಯ ಆಧುನಿಕ ಮನರಂಜನೆಯ ಪ್ರಕಾರಗಳಲ್ಲಿ ಕಳೆದು ಹೋಗಿದ್ದಾರೆ. ಜಾನಪದ ನಮ್ಮ ತಾಯಿ ಬೇರು. ಮೂಲ ಪರಂಪರೆಯ ಜಾನಪದದಲ್ಲಿ ಸೋಬಾನೆ, ಹಂತಿಪದ, ಗೀಗೀಪದ, ಡೊಳ್ಳಿನ ಹಾಡು, ಜೋಗುಳ ಪದ ಇತ್ಯಾದಿಗಳಿದ್ದು, ಇವುಗಳಿಗೆ ಮಾಲೀಕರಿಲ್ಲ. ಜಾನಪದದ ಪದಗಳನ್ನು ತೆಗೆದುಕೊಂಡು ತಮ್ಮದೇ ಶೈಲಿಯಲ್ಲಿ ಕವಿಗಳು ಬರೆದಿರುವುದು ಜನಪ್ರಿಯ ಜಾನಪದ. ಖೋಟಾ ಜಾನಪದದಲ್ಲಿ ಮೂಲದ ತಿರುಳೇ ಇಲ್ಲ. ಟ್ರ್ಯಾಕ್ಟರ್​ಗಳಲ್ಲಿ, ಟಂಟಂಗಳಲ್ಲಿ, ಟೀ ಅಂಗಡಿಗಳಲ್ಲಿ, ಬೀದಿಗಳಲ್ಲಿ ಕೋಟಾ ಜಾನಪದಗಳನ್ನು ಕೇಳುವುದು ಸಾಮಾನ್ಯವಾಗಿದೆ. ಸಾಕಷ್ಟು ಸವಾಲುಗಳ ನಡುವೆ ಮೂಲ ಜಾನಪದವನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕಿದೆ ಎಂದರು.
    ಡಾ. ಎ.ಕೆ.ಮಠ, ಡಾ. ವೀಣಾ, ಎಸ್​. ಸಿ. ಸಂಶಿಮಠ, ರಜನಿ ಪಾಟೀಲ, ಡಾ. ಎ. ವಿ. ದೇವಾಂಗಮಠ, ಮಂಜುನಾಥ ಗಾಣಿಗೇರ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts